ಕೊರೊನಾ ಅಟ್ಟಹಾಸದ ನಡುವೆ ಅಪ್ಪಳಿಸುತ್ತಿದೆ ಅಂಫಾನ್ ಚಂಡಮಾರುತ!

ಮಂಗಳೂರು: ಇಡೀ ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಈ ಮಧ್ಯೆ ಭಾರತದ ಹಲವೆಡೆ ಅಂಫಾನ್ ಚಂಡಮಾರುತ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಅಂಫಾನ್ ಚಂಡಮಾರುತ ಎಫೆಕ್ಟ್ ತೀವ್ರವಾಗಿರಲಿದೆ ಎಂದು ತಿಳಿಸಿದೆ. ಕಡಲನಗರಿ ಮಂಗಳೂರಿನಲ್ಲೂ ಭಾರೀ ಮಳೆ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಜೋರಾದ ಗಾಳಿ ಮಳೆಗೆ ಕಡಲನಗರಿ ನಲುಗಿ ಹೋಗಿದೆ. ಸಮುದ್ರದ ಅಲೆಗಳಲ್ಲಿ ಭಾರೀ ಏರಿಳಿತ‌ವಾಗುತ್ತಿದೆ. ಭಾರೀ […]

ಕೊರೊನಾ ಅಟ್ಟಹಾಸದ ನಡುವೆ ಅಪ್ಪಳಿಸುತ್ತಿದೆ ಅಂಫಾನ್ ಚಂಡಮಾರುತ!
Follow us
ಸಾಧು ಶ್ರೀನಾಥ್​
|

Updated on:May 18, 2020 | 11:12 AM

ಮಂಗಳೂರು: ಇಡೀ ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಈ ಮಧ್ಯೆ ಭಾರತದ ಹಲವೆಡೆ ಅಂಫಾನ್ ಚಂಡಮಾರುತ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಅಂಫಾನ್ ಚಂಡಮಾರುತ ಎಫೆಕ್ಟ್ ತೀವ್ರವಾಗಿರಲಿದೆ ಎಂದು ತಿಳಿಸಿದೆ.

ಕಡಲನಗರಿ ಮಂಗಳೂರಿನಲ್ಲೂ ಭಾರೀ ಮಳೆ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಜೋರಾದ ಗಾಳಿ ಮಳೆಗೆ ಕಡಲನಗರಿ ನಲುಗಿ ಹೋಗಿದೆ. ಸಮುದ್ರದ ಅಲೆಗಳಲ್ಲಿ ಭಾರೀ ಏರಿಳಿತ‌ವಾಗುತ್ತಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶದಲ್ಲಿರುವ ರಸ್ತೆಗಳು ಜಲಾವೃತವಾಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ತಡರಾತ್ರಿ ಮಳೆಯಾಗಿದೆ. ಬೆಳಗಿನ ಜಾವವೂ ಸಹ ನಗರದ ಹಲವೆಡೆ ಮಳೆಯಾಗಿದ್ದು, ಜೋರಾಗಿ ಗಾಳಿ ಬೀಸುತ್ತಿದೆ.

ಮುಂದಿನ 6 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚು: ಈಗಾಗಲೇ ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಬಿರುಗಾಳಿ ಬೀಸುತ್ತಿದ್ದು, ಮುಂದಿನ 6 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ. ತಮಿಳುನಾಡಿನಲ್ಲೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಈರೋಡ್, ಸೇಲಂ, ಧರ್ಮಪುರಿ, ಕೃಷ್ಣಗಿರಿ, ಕೊಯಮತ್ತೂರು ಸೇರಿ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.

ಬಿರುಗಾಳಿಯ ರಭಸಕ್ಕೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಸೇಲಂ, ಧರ್ಮಪುರಿ, ಕೃಷ್ಣಗಿರಿ ಜಿಲ್ಲೆ ಸೇರಿದಂತೆ ಹಲವೆಡೆ ಇನ್ನು ಭಾರೀ ಪ್ರಮಾಣದಲ್ಲಿ ಮಳೆ‌ಯಾಗಲಿದೆ. ಹೀಗಾಗಿ ಜನರು‌ ಜಾಗೃತರಾಗಿರಬೇಕೆಂದು ಹವಾಮಾನ ಇಲಾಖೆ‌ ಎಚ್ಚರಿಕೆ ನೀಡಿದೆ.

Published On - 8:30 am, Mon, 18 May 20