AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು […]

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ
ಸಾಧು ಶ್ರೀನಾಥ್​
|

Updated on:May 19, 2020 | 2:10 PM

Share

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು ಪ್ರಯತ್ನಿಸುವ ವೇಳೆಗೆ ಚಿರತೆ ಅಟ್ಯಾಕ್ ಮಾಡಿ ಕಾಲನ್ನು ಹಿಡಿದುಕೊಳ್ಳುತ್ತೆ. ಆತ ಕಾಲನ್ನು ಅಲುಗಾಡಿಸಿದಾಗ ಚಿರತೆ ಆತನನ್ನು ಬಿಟ್ಟುಬಿಡುತ್ತೆ.

ಇದೇ ವೇಳೆ 6 ನಾಯಿಗಳು ಚಿರತೆಯನ್ನು ಸುತ್ತುವರೆಯುತ್ತೆ. ನಂತರ ಇನ್ನೂ ಒಂದು ನಾಯಿಯೂ ಸೇರಿಕೊಳ್ಳುತ್ತೆ. ಏಳೂ ನಾಯಿಗಳು ಚಿರತೆಯನ್ನ ನೋಡಿ ಬೊಗಳುತ್ತವೆ. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಚಿರತೆ ಅಂಗಡಿಯ ಷಟರ್ ಮೇಲೆ ಹಾರಲು ಯತ್ನಿಸುತ್ತೆ. ಆದ್ರೆ ಸಾಧ್ಯವಾಗುವುದಿಲ್ಲ. ಈ ವೇಳೆ ಕೋರೆಹಲ್ಲುಗಳನ್ನ ತೋರಿಸಿಕೊಂಡು ನಾಯಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತೆ. ನಂತರ ನಾಯಿಗಳು ಅಲ್ಲಿಂದ ತೆರಳಿದ ಬಳಿಕ ಚಿರತೆ ಲಾರಿ ಕೆಳಗೆ ಬಚ್ಚಿಟ್ಟುಕೊಂಡು, ಪರಾರಿಯಾಗುತ್ತೆ.

Published On - 12:23 pm, Tue, 19 May 20

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ