ಒಂದೆಡೆ ದೇಶದ ಪ್ರತಿಷ್ಠಿತ ಹಾಗೂ ಅತಿ ದೊಡ್ಡ ಶ್ರೀಮಂತರಾಗಿ ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ರಾರಾಜಿಸುತ್ತಿದ್ದರೆ ಇತ್ತ ಅವರ ಸಹೋದರ ಅನಿಲ್ ಅಂಬಾನಿ ದಿವಾಳಿಯಾಗುವ ಸ್ಥಿತಿ ತಲುಪಿದ್ದಾರೆ.
ಚೀನಾ ಮೂಲದ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಮರುಪಾವತಿಸಲಾಗದ ಹಿನ್ನೆಲೆಯಲ್ಲಿ ಅನಿಲ್ ಅಂಬಾನಿ ವಿರುದ್ಧ ಬ್ಯಾಂಕ್ ಕೇಸ್ ದಾಖಲಿಸಿತ್ತು. ಲಂಡನ್ ಕೋರ್ಟ್‌ನಲ್ಲಿ ಚೀನಾ ಬ್ಯಾಂಕ್ ಕೇಸ್ ದಾಖಲಿಸಿದೆ.
ಇದೀಗ, ಬ್ಯಾಂಕ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಅನಿಲ್ ಅಂಬಾನಿ ಹೋರಾಟಕ್ಕೆ ಮನೆಯಲ್ಲಿದ್ದ ಚಿನ್ನಾಭರಣವನ್ನೆಲ್ಲಾ ಮಾರಾಟ ಮಾಡಿದ್ದೇನೆ ಎಂದು ಲಂಡನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜೊತೆಗೆ, ಈಗಿನ ಕೋರ್ಟ್ ವೆಚ್ಚವನ್ನು ನನ್ನ ಪತ್ನಿ ಹಾಗೂ ಕುಟುಂಬದವರು ಭರಿಸುತ್ತಿದ್ದಾರೆ. ಇದಕ್ಕಾಗಿ, ನನ್ನ ಮಗ ಕೂಡ ಸಾಲ ಪಡೆದಿದ್ದಾನೆಂದು ಅನಿಲ್ ಅಂಬಾನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಂದ ಹಾಗೆ, ಜಗತ್ತಿನ ಆರನೇ ಅತಿದೊಡ್ಡ ಶ್ರೀಮಂತನಾಗಿದ್ದ ಅನಿಲ್ ಅಂಬಾನಿ ಬಳಿ ಈಗ ಇರೋದು ಒಂದೇ ಕಾರ್. ಖ್ಯಾತ ಉದ್ಯಮಿ ಇದೀಗ ಸರಳ ಜೀವನ ನಡೆಸುತ್ತಿದ್ದಾರಂತೆ.
ಜೊತೆಗೆ, ತಾಯಿ ಕೋಕಿಲಾ ಬೆನ್ರಿಂದ 500 ಕೋಟಿ ರೂಪಾಯಿ ಸಾಲ ಪಡೆದಿದ್ದು ತಮ್ಮ ಪುತ್ರ ಅನಮೋಲ್ನಿಂದ ಸಹ 310 ಕೋಟಿ ರೂಪಾಯಿ ಸಾಲ ಪಡೆದಿದ್ದೇನೆ ಎಂದು ಲಂಡನ್ ಕೋರ್ಟ್ಗೆ ತಿಳಿಸಿದ್ದಾರೆ. ಇದಲ್ಲದೆ, ತಮ್ಮ ಬಳಿಯಿರುವ ಆರ್ಟ್ ಕಲೆಕ್ಷನ್ ಎಲ್ಲಾ ತಮ್ಮ ಪತ್ನಿ ಟೀನಾಳ ಸಂಗ್ರಹಗಳು ಎಂದು ಹೇಳಿದ್ದಾರೆ.
Published On - 11:34 am, Sat, 26 September 20