ಬಿಹಾರದಲ್ಲಿ 15 ವರ್ಷ ಹಳೆಯ ಸೇತುವೆ ಕುಸಿತ; 15 ದಿನಗಳಲ್ಲಿ ಕುಸಿದಿದ್ದು 10 ಸೇತುವೆಗಳು!

|

Updated on: Jul 04, 2024 | 4:05 PM

ಸಣ್ಣ ಸೇತುವೆಯನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ. ಜಿಲ್ಲಾಡಳಿತದ ಹಲವು ಅಧಿಕಾರಿಗಳು ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಸೇತುವೆ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಇತ್ತೀಚೆಗೆ ಹೂಳು ತೆಗೆಯುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಬಿಹಾರದಲ್ಲಿ 15 ವರ್ಷ ಹಳೆಯ ಸೇತುವೆ ಕುಸಿತ; 15 ದಿನಗಳಲ್ಲಿ ಕುಸಿದಿದ್ದು 10 ಸೇತುವೆಗಳು!
ಬಿಹಾರದಲ್ಲಿ ಸೇತುವೆ ಕುಸಿತ
Follow us on

ಪಾಟ್ನಾ ಜುಲೈ 04 : ಬಿಹಾರದಲ್ಲಿ (Bihar) ಮತ್ತೊಂದು ಸೇತುವೆ (Bridge Collapses) ಕುಸಿದಿದೆ. ಕೇವಲ ಹದಿನೈದು ದಿನಗಳಲ್ಲಿ ರಾಜ್ಯದಲ್ಲಿ ವರದಿಯಾದ 10 ನೇ ಘಟನೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಮತ್ತೆರಡು ಸೇತುವೆ ಕುಸಿತಕ್ಕೆ ಸಾಕ್ಷಿಯಾದ ಸರನ್‌ನಿಂದ(Saran) ಇತ್ತೀಚಿನ ಘಟನೆ ವರದಿಯಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮನ್ ಸಮೀರ್ ಹೇಳಿದ್ದಾರೆ.
15 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇಂದು ಬೆಳಿಗ್ಗೆ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಗಂಡಕೀ ನದಿಯ ಮೇಲಿನ ಸಣ್ಣ ಸೇತುವೆಯು ಬನೇಯಪುರ ಬ್ಲಾಕ್‌ನಲ್ಲಿದೆ. ಅದು ಸರನ್‌ನ ಹಲವಾರು ಹಳ್ಳಿಗಳನ್ನು ನೆರೆಯ ಸಿವಾನ್ ಜಿಲ್ಲೆಯೊಂದಿಗೆ ಸಂಪರ್ಕಿಸುತ್ತದೆ.

”ಸಣ್ಣ ಸೇತುವೆಯನ್ನು 15 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ನಾನು ಸ್ಥಳಕ್ಕೆ ಹೋಗುತ್ತಿದ್ದೇನೆ. ಜಿಲ್ಲಾಡಳಿತದ ಹಲವು ಅಧಿಕಾರಿಗಳು ಈಗಾಗಲೇ ಅಲ್ಲಿಗೆ ತಲುಪಿದ್ದಾರೆ. ಸೇತುವೆ ಕುಸಿತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ ಇತ್ತೀಚೆಗೆ ಹೂಳು ತೆಗೆಯುವ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಿಟಿಐಗೆ ತಿಳಿಸಿದರು.

ಬುಧವಾರ, ಸರನ್ ಜಿಲ್ಲೆ ಎರಡು ಸಣ್ಣ ಸೇತುವೆಗಳು- ಒಂದು ಜಂತಾ ಬಜಾರ್ ಪ್ರದೇಶದಲ್ಲಿ ಮತ್ತು ಇನ್ನೊಂದು ಲಹ್ಲಾದ್‌ಪುರ ಪ್ರದೇಶದಲ್ಲಿ ಕುಸಿದಿವೆ. ಜಿಲ್ಲೆಯಲ್ಲಿನ ಈ ಸಣ್ಣ ಸೇತುವೆಗಳ ಕುಸಿತಕ್ಕೆ ಕಾರಣವನ್ನು ಕಂಡುಹಿಡಿಯಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಎಂ ಹೇಳಿದರು.

ಸ್ಥಳೀಯರ ಪ್ರಕಾರ, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯೇ ಈ ಸಣ್ಣ ಸೇತುವೆಗಳ ಕುಸಿತಕ್ಕೆ ಕಾರಣವಾಗಿದೆ. ಕಳೆದ 16 ದಿನಗಳಲ್ಲಿ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಿವೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದ ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆಯನ್ನು ನಡೆಸಲು ಮತ್ತು ತಕ್ಷಣದ ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ರಸ್ತೆ ನಿರ್ಮಾಣ ಮತ್ತು ಗ್ರಾಮೀಣ ಕಾಮಗಾರಿ ಇಲಾಖೆಗಳಿಗೆ ನಿರ್ದೇಶನ ನೀಡಿದ ಒಂದು ದಿನದ ನಂತರ ಇತ್ತೀಚಿನ ಘಟನೆ ನಡೆದಿದೆ.

ಇದನ್ನೂ ಓದಿ: ಲೋಕಸಭೆಯಲ್ಲಿ ಸಂಸದರ ಪ್ರಮಾಣವಚನ ನಿಯಮದಲ್ಲಿ ತಿದ್ದುಪಡಿ, ಘೋಷಣೆಗಳಿಗೆ ನಿರ್ಬಂಧ

ನಿರ್ವಹಣಾ ನೀತಿಗಳ ಪರಾಮರ್ಶೆಗೆ ಮುಖ್ಯಮಂತ್ರಿ ಬುಧವಾರ ಸಭೆ ನಡೆಸಿ ರಸ್ತೆ ನಿರ್ಮಾಣ ಇಲಾಖೆಯು ಸೇತುವೆ ನಿರ್ವಹಣಾ ನೀತಿಯನ್ನು ಈಗಾಗಲೇ ಸಿದ್ಧಪಡಿಸಿದ್ದು, ಗ್ರಾಮೀಣ ಕಾಮಗಾರಿ ಇಲಾಖೆಯು ತನ್ನ ಯೋಜನೆಯನ್ನು ಶೀಘ್ರದಲ್ಲಿಯೇ ರೂಪಿಸಬೇಕು ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 4:03 pm, Thu, 4 July 24