AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರದಲ್ಲಿ ಸೇತುವೆಗಳ ಕುಸಿತದ ಹಿಂದೆ ಷಡ್ಯಂತ್ರ: ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ

ಸೇತುವೆಗಳು ಕುಸಿಯಲು ಗುಣಮಟ್ಟವಿಲ್ಲದ ವಸ್ತುಗಳನ್ನು ನಿರ್ಮಾಣಕ್ಕೆ ಬಳಸಲಾಗಿರಬಹುದು, ಆದರೆ ಹದಿನೈದು ದಿನಗಳ ಹಿಂದೆ ಎಲ್ಲವೂ ಸರಿಯಾಗಿದ್ದು ಈಗ ಕುಸಿಯಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಇದರ ಹಿಂದೆ ಸರ್ಕಾರದ ಮಾನಹಾನಿ ಮಾಡುವ ಷಡ್ಯಂತ್ರವಿದೆ ಎಂದು ನಾನು ಭಾವಿಸುತ್ತೇನೆ ಎಂದು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.

ಬಿಹಾರದಲ್ಲಿ ಸೇತುವೆಗಳ ಕುಸಿತದ ಹಿಂದೆ ಷಡ್ಯಂತ್ರ: ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ
ಜಿತಿನ್ ರಾಮ್ ಮಾಂಝಿ
ರಶ್ಮಿ ಕಲ್ಲಕಟ್ಟ
|

Updated on:Jun 29, 2024 | 8:49 PM

Share

ದೆಹಲಿ ಜೂನ್ 29: ಬಿಹಾರದಲ್ಲಿ (Bihar) ಸೇತುವೆಗಳು ಕುಸಿದಿರುವುದು ಕಳವಳಕಾರಿ ವಿಷಯವಾಗಿದೆ, ಆದರೆ ಇದರ ಹಿಂದೆ ಸರ್ಕಾರಕ್ಕೆ  ಮಾನಹಾನಿ ಮಾಡುವ ಪಿತೂರಿ ಇದೆ ಎಂದು ತೋರುತ್ತದೆ ಎಂದು  ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆ (MSME) ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ(Jitan Ram Manjhi) ಹೇಳಿದ್ದಾರೆ. ಸೇತುವೆಗಳು ಕುಸಿಯಲು ಗುಣಮಟ್ಟವಿಲ್ಲದ ವಸ್ತುಗಳನ್ನು ನಿರ್ಮಾಣಕ್ಕೆ ಬಳಸಲಾಗಿರಬಹುದು, ಆದರೆ ಹದಿನೈದು ದಿನಗಳ ಹಿಂದೆ ಎಲ್ಲವೂ ಸರಿಯಾಗಿದ್ದು ಈಗ ಕುಸಿಯಲು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಇದರ ಹಿಂದೆ ಸರ್ಕಾರಕ್ಕೆ ಮಾನಹಾನಿ ಮಾಡುವ ಷಡ್ಯಂತ್ರವಿದೆ ಎಂದು ನಾನು ಭಾವಿಸುತ್ತೇನೆ. ಎರಡು ತಿಂಗಳ ಹಿಂದೆ, ರಾಜ್ಯದಲ್ಲಿ ಸೇತುವೆಗಳು ಕುಸಿದು ಬೀಳುವ ಯಾವುದೇ ಘಟನೆಗಳನ್ನು ನಾವು ನೋಡಿರಲಿಲ್ಲ. ಈಗ, ಸೇತುವೆಗಳು ನಿರಂತರವಾಗಿ ಕುಸಿಯುತ್ತಿವೆ. ಸರ್ಕಾರವನ್ನು ಅವಮಾನಿಸಲು ಕೆಲವು ಜನರು ಸಂಚು ಹೂಡಿದ್ದಾರೆ ಎಂದು ನಾನು ಶಂಕಿಸುತ್ತೇನೆ ಎಂದು ಮಾಂಝಿ ಹೇಳಿದ್ದಾರೆ.

ಬಿಹಾರದಲ್ಲಿ ಸೇತುವೆಗಳ ಕುಸಿತಕ್ಕೆ ಕಾರಣವಾದ ಎಂಜಿನಿಯರ್‌ಗಳು ಮತ್ತು ಗುತ್ತಿಗೆದಾರರ ವಿರುದ್ಧ ತನಿಖೆಯನ್ನು ಪ್ರಾರಂಭಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ನನಗೆ ತಿಳಿದಿದೆ” ಎಂದು ಮಾಂಝಿ ಹೇಳಿದ್ದಾರೆ.

ಕಳೆದ ಹತ್ತು ದಿನಗಳಲ್ಲಿ, ಅರಾರಿಯಾ, ಸಿವಾನ್, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳು ಸೇರಿದಂತೆ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಐದು ಸೇತುವೆಗಳು ಕುಸಿದಿವೆ. ನೇಪಾಳದ ಗಡಿಯುದ್ದಕ್ಕೂ ರಾಜ್ಯದ ಉತ್ತರ ಭಾಗದಲ್ಲಿರುವ ಮಧುಬನಿ ಜಿಲ್ಲೆಯ ಭೇಜಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಇತ್ತೀಚಿನ ಸೇತುವೆ ಕುಸಿತ ವರದಿಯಾಗಿದೆ.

ಜೂನ್ 26 ರಂದು, ಬಿಹಾರದ ಕಿಶನ್‌ಗಂಜ್‌ನಲ್ಲಿ 13 ವರ್ಷ ಹಳೆಯದಾದ ಸೇತುವೆಯ ಒಂದು ಭಾಗವು ಕುಸಿದಿತ್ತು. 2011ರಲ್ಲಿ ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ 70 ಮೀಟರ್ ಉದ್ದ ಮತ್ತು 12 ಮೀಟರ್ ಅಗಲದ ಸೇತುವೆಯು ಭಾರಿ ಮಳೆಯಿಂದ ಪ್ರವಾಹಕ್ಕೆ ಸಿಲುಕಿತು.

ಇದನ್ನೂ ಓದಿ: NEET-UG ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಭಾಗಿ: ಕಾಂಗ್ರೆಸ್ ಆರೋಪ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಜೂನ್ 28 ರಂದು ಐದನೇ ಸೇತುವೆ ಕುಸಿದ ನಂತರ ನಿತೀಶ್ ಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಮಧುಬನಿ ಮತ್ತು ಸುಪೌಲ್ ನಡುವಿನ ಭೂತಾಹಿ ನದಿಯ ಸೇತುವೆಯ ಕುಸಿತದ ಕುರಿತು ವಿಡಿಯೊ ಟ್ವೀಟ್ ಮಾಡಿದ ತೇಜಸ್ವಿ ಯಾದವ್, ಇದು ಒಂಬತ್ತು ದಿನಗಳಲ್ಲಿ ಬಿಹಾರದಲ್ಲಿ ಕುಸಿದ 5 ನೇ ಸೇತುವೆಯಾಗಿದೆ. ಮಧುಬನಿ-ಸುಪೌಲ್ ನಡುವೆ ಭೂತಾಹಿ ನದಿಯಲ್ಲಿ ಹಲವು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿದೆ. ನೀವು ಪತ್ತೆ ಹಚ್ಚಬಹುದೇ? ಇಲ್ಲದಿದ್ದರೆ, ಏಕೆ? ಕಂಡುಹಿಡಿಯಲು ಪ್ರಯತ್ನಿಸಿ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Sat, 29 June 24