ಭಾರತದಲ್ಲಿ ಚುನಾವಣೆ ಸಮೀಪಿಸಿದಾಗ ವಿದೇಶಿ ಶಕ್ತಿಗಳು ಎಚ್ಚೆತ್ತುಕೊಳ್ಳುತ್ತವೆ; ಜಾಕ್​​ ಡಾರ್ಸಿ ಆರೋಪ ಹಸಿ ಸುಳ್ಳು: ಅನುರಾಗ್ ಠಾಕೂರ್

'ಟ್ವಿಟರ್ ಫೈಲ್ಸ್' ನಲ್ಲಿ ಡಾರ್ಸಿ ಮಾಡಿದ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಠಾಕೂರ್, ಅವರು ಹೇಳಿದ್ದು ಹಸಿ ಸುಳ್ಳು. ಜಾಕ್ ಡಾರ್ಸಿ ವರ್ಷಗಳ ನಿದ್ರೆಯ ನಂತರ ಎಚ್ಚರಗೊಂಡು ತನ್ನ ದುಷ್ಕೃತ್ಯಗಳನ್ನು ಮುಚ್ಚಿಡಲು ಬಯಸುತ್ತಾನೆ. ಟ್ವಿಟರ್ ಅನ್ನು ಇನ್ನೊಬ್ಬ ವ್ಯಕ್ತಿ ಖರೀದಿಸಿದಾಗ, ಪ್ಲಾಟ್‌ಫಾರ್ಮ್ ಅನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು 'ಟ್ವಿಟ್ಟರ್ ಫೈಲ್ಸ್' ನಲ್ಲಿ ಬಹಿರಂಗಪಡಿಸಲಾಗಿದೆ

ಭಾರತದಲ್ಲಿ ಚುನಾವಣೆ ಸಮೀಪಿಸಿದಾಗ ವಿದೇಶಿ ಶಕ್ತಿಗಳು ಎಚ್ಚೆತ್ತುಕೊಳ್ಳುತ್ತವೆ; ಜಾಕ್​​ ಡಾರ್ಸಿ ಆರೋಪ ಹಸಿ ಸುಳ್ಳು: ಅನುರಾಗ್ ಠಾಕೂರ್
ಅನುರಾಗ್ ಠಾಕೂರ್
Follow us
ರಶ್ಮಿ ಕಲ್ಲಕಟ್ಟ
|

Updated on:Jun 13, 2023 | 5:34 PM

ದೆಹಲಿ: ರೈತರ ಪ್ರತಿಭಟನೆಯನ್ನು (Farmers protest)ಒಳಗೊಂಡ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಟ್ವಿಟರ್‌ಗೆ (Twitter) ಒತ್ತಡ ಹೇರಿದೆ ಎಂಬ ಮಾಜಿ ಟ್ವಿಟರ್ ಸಿಇಒ ಮತ್ತು ಸಂಸ್ಥಾಪಕ ಜಾಕ್ ಡಾರ್ಸಿ (Jack Dorsey) ಅವರ ಹೇಳಿಕೆಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಮಂಗಳವಾರ ತಳ್ಳಿಹಾಕಿದ್ದಾರೆ. ಡಾರ್ಸಿ ಅವರ ಹೇಳಿಕೆಯನ್ನು ಹಸಿ ಸುಳ್ಳು ಎಂದು ಹೇಳಿದ ಠಾಕೂರ್, ಭಾರತದಲ್ಲಿ ಚುನಾವಣೆ ಸಮೀಪಿಸಿದಾಗ ಹಲವಾರು ವಿದೇಶಿ ಶಕ್ತಿಗಳು ಎಚ್ಚರಗೊಳ್ಳುತ್ತವೆ ಎಂದು ಹೇಳಿದರು.

‘ಟ್ವಿಟರ್ ಫೈಲ್ಸ್’ ನಲ್ಲಿ ಡಾರ್ಸಿ ಮಾಡಿದ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಠಾಕೂರ್, ಅವರು ಹೇಳಿದ್ದು ಹಸಿ ಸುಳ್ಳು. ಜಾಕ್ ಡಾರ್ಸಿ ವರ್ಷಗಳ ನಿದ್ರೆಯ ನಂತರ ಎಚ್ಚರಗೊಂಡು ತನ್ನ ದುಷ್ಕೃತ್ಯಗಳನ್ನು ಮುಚ್ಚಿಡಲು ಬಯಸುತ್ತಾರೆ.  ಟ್ವಿಟರ್ ಅನ್ನು ಇನ್ನೊಬ್ಬ ವ್ಯಕ್ತಿ ಖರೀದಿಸಿದಾಗ, ಪ್ಲಾಟ್‌ಫಾರ್ಮ್ ಅನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ‘ಟ್ವಿಟ್ಟರ್ ಫೈಲ್ಸ್’ ನಲ್ಲಿ ಬಹಿರಂಗಪಡಿಸಲಾಗಿದೆ. ಜಾಕ್ ಡಾರ್ಸಿ ಅವರು ಕೃತ್ಯಗಳು ಬಯಲಾದ ಕಾರಣ ಅವರಿಗೆ ಉತ್ತರಿಸಲು ಆಗುತ್ತಿಲ್ಲ ಎಂದಿದ್ದಾರೆ.

ಟ್ವಿಟರ್ ಫೈಲ್ಸ್ ಎಂಬುದು ಎಲಾನ್ ಮಸ್ಕ್ ಅವರು ಟ್ವಿಟರ್ ಬಾಸ್ ಆಗಿ ಅಧಿಕಾರ ವಹಿಸಿಕೊಂಡಾಗ ಜಾಕ್ ಡಾರ್ಸಿ ಅವರ ಆಡಳಿತದಲ್ಲಿ ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ನಡೆಸಿದ ದುಷ್ಕೃತ್ಯಗಳನ್ನು ಬಹಿರಂಗಪಡಿಸಲು ತಂದ ಟ್ವೀಟ್‌ಗಳ ಸರಣಿಯಾಗಿದೆ.

ಹೇಳಿಕೆಯ ಸಮಯದ ಕುರಿತು ಮಾತನಾಡಿದ ಕೇಂದ್ರ ಸಚಿವ ಠಾಕೂರ್, ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಭೇಟಿಗೆ ಸ್ವಲ್ಪ ಮುಂಚಿತವಾಗಿ ಹೇಳಿಕೆ ನೀಡಿದ್ದರಿಂದ ಭಾರತದಲ್ಲಿ ಚುನಾವಣೆಗಳು ಸಮೀಪಿಸಿದಾಗ ಭಾರತದಲ್ಲಿ ಹಲವಾರು ವಿದೇಶಿ ಶಕ್ತಿಗಳು ಮತ್ತು ಅವರ ಏಜೆಂಟರು ಎಚ್ಚರಗೊಳ್ಳುತ್ತಾರೆ ಎಂದಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವವು ಪ್ರಬಲವಾಗಿದೆ, ಜಗತ್ತು ಭಾರತಕ್ಕೆ ಭರವಸೆ ನೀಡುತ್ತದೆ. ಭಾರತವು ಈ ಭರವಸೆಯಲ್ಲಿ ಬದುಕುತ್ತದೆ. ಅದೇ ವೇಳೆ ಭಾರತದಲ್ಲಿ ಅಶಾಂತಿಯನ್ನು ಸೃಷ್ಟಿಸುವಲ್ಲಿ ವಿದೇಶಿ ಶಕ್ತಿಗಳು ಯಶಸ್ವಿಯಾಗುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ಇದು ಪೂರ್ತಿ ಸುಳ್ಳು. ಸಾಮಾಜಿಕ ಮಾಧ್ಯಮ ಕಂಪನಿಯ ಇತಿಹಾಸದ ಅತ್ಯಂತ ಸಂಶಯಾಸ್ಪದ ಅವಧಿಯನ್ನು ಹೊರಹಾಕುವ ಪ್ರಯತ್ನ ಎಂದು ಹೇಳಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನ್ನು  ಠಾಕೂರ್ ಬೆಂಬಲಿಸಿದ್ದಾರೆ.

ಇದನ್ನೂ ಓದಿ: ರೈತರ ಪ್ರತಿಭಟನೆ ವೇಳೆ ಭಾರತ ಸರ್ಕಾರ ಟ್ವಿಟ್ಟರ್​ ನಿಷೇಧಿಸುವ ಬೆದರಿಕೆ ಹಾಕಿತ್ತು ಎಂದ ಜಾಕ್ ಡೋರ್ಸಿ ಹೇಳಿಕೆಗೆ ಕೇಂದ್ರ ಪ್ರತಿಕ್ರಿಯೆ

ಕಳೆದ ವರ್ಷ ಟ್ವಿಟರ್ ಮಂಡಳಿಯಿಂದ ಕೆಳಗಿಳಿದಿದ್ದ ಡಾರ್ಸಿ ಸೋಮವಾರ ಯೂಟ್ಯೂಬ್ ಚಾನೆಲ್ ‘ಬ್ರೇಕಿಂಗ್ ಪಾಯಿಂಟ್ಸ್ ವಿತ್ ಕ್ರಿಸ್ಟಲ್ ಮತ್ತು ಸಾಗರ್’ಗೆ ನೀಡಿದ ಸಂದರ್ಶನದಲ್ಲಿ, ಭಾರತ ಸರ್ಕಾರವು ಟ್ವಿಟರ್ ಮೇಲೆ ಒತ್ತಡ ಹೇರಿದೆ ಮತ್ತು ಭಾರತದಲ್ಲಿ ಕಂಪನಿಯನ್ನು ಮುಚ್ಚುವುದಾಗಿ ಹೇಳಿದೆ ಎಂದು ಆರೋಪಿಸಿದ್ದರು.ಅಷ್ಟೇ ಅಲ್ಲ ಅದರ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು ಎಂದಿದ್ದಾರೆ. ಈ ಆರೋಪಕ್ಕೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Tue, 13 June 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್