Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಪ್ರತಿಭಟನೆ ವೇಳೆ ಭಾರತ ಸರ್ಕಾರ ಟ್ವಿಟ್ಟರ್​ ನಿಷೇಧಿಸುವ ಬೆದರಿಕೆ ಹಾಕಿತ್ತು ಎಂದ ಜಾಕ್ ಡೋರ್ಸಿ ಹೇಳಿಕೆಗೆ ಕೇಂದ್ರ ಪ್ರತಿಕ್ರಿಯೆ

ರೈತರ ಪ್ರತಿಭಟನೆ ವೇಳೆ ಸರ್ಕಾರವು ಭಾರತದಲ್ಲಿ ಟ್ವಿಟ್ಟರ್ ನಿಷೇಧಿಸುವ ಬೆದರಿಕೆ ಹಾಕಿತ್ತು ಎಂದು ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ ಹೇಳಿಕೆಗೆ ಕೇಂದ್ರ ಪ್ರತಿಕ್ರಿಯೆ ನೀಡಿದೆ

ರೈತರ ಪ್ರತಿಭಟನೆ ವೇಳೆ ಭಾರತ ಸರ್ಕಾರ ಟ್ವಿಟ್ಟರ್​ ನಿಷೇಧಿಸುವ ಬೆದರಿಕೆ ಹಾಕಿತ್ತು ಎಂದ ಜಾಕ್ ಡೋರ್ಸಿ ಹೇಳಿಕೆಗೆ ಕೇಂದ್ರ ಪ್ರತಿಕ್ರಿಯೆ
ಜಾಕ್​ ಡೋರ್ಸಿ, ರಾಜೀವ್ ಚಂದ್ರಶೇಖರ್
Follow us
ನಯನಾ ರಾಜೀವ್
|

Updated on: Jun 13, 2023 | 10:27 AM

ರೈತರ ಪ್ರತಿಭಟನೆ ವೇಳೆ ಸರ್ಕಾರವು ಭಾರತದಲ್ಲಿ ಟ್ವಿಟ್ಟರ್(Twitter) ನಿಷೇಧಿಸುವ ಬೆದರಿಕೆ ಹಾಕಿತ್ತು ಎಂದು ಟ್ವಿಟರ್ ಸಹ-ಸಂಸ್ಥಾಪಕ ಮತ್ತು ಮಾಜಿ ಸಿಇಒ ಜಾಕ್ ಡೋರ್ಸಿ ಹೇಳಿಕೆಗೆ ಕೇಂದ್ರ ಪ್ರತಿಕ್ರಿಯೆ ನೀಡಿದೆ. ಜಾಕ್​ ಹೇಳಿಕೆ ಶುದ್ಧ ಸುಳ್ಳು ಎಂದು ಹೇಳಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಟ್ವಿಟ್ಟರ್​ 2020-2022ರ ವೇಳೆ ಹಲವು ಭಾರಿ ಭಾರತದ ನಿಯಮಗಳನ್ನು ಉಲ್ಲಂಘಿಸಿತ್ತು ಎಂದಿದ್ದಾರೆ. ರೈತರ ಪ್ರತಿಭಟನೆ ಸಂದರ್ಭದಲ್ಲಿ ಸಾಕಷ್ಟು ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿತ್ತು, ಇಂತಹ ಸುಳ್ಳು ಸುದ್ದಿಗಳನ್ನು ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿತ್ತು ಎಂದರು.

ಜಾಕ್ ಅವರ ಟ್ವಿಟ್ಟರ್ ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲು ಕಷ್ಟಪಡುತ್ತಿದೆ. 2021ರಲ್ಲಿ ಟ್ವಿಟ್ಟರ್ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು, ಬಳಿಕ ಎಲೋನ್ ಮಸ್ಕ್​ ಖರೀದಿಸಿದ್ದರು.

ರೈತ ಚಳವಳಿಗೆ ಸಂಬಂಧಿಸಿದಂತೆ ಸರ್ಕಾರವನ್ನು ಟೀಕಿಸುವ ಇಂತಹ ಪತ್ರಕರ್ತರ ಖಾತೆಗಳನ್ನು ಮುಚ್ಚುವಂತೆ ಭಾರತ ಸರ್ಕಾರ ಮನವಿ ಮಾಡಿತ್ತು ಎಂದು ಟ್ವಿಟರ್‌ನ ಮಾಜಿ ಸಿಇಒ ಹೇಳಿದ್ದರು. ಟ್ವಿಟರ್ ಇದನ್ನು ಮಾಡದಿದ್ದರೆ, ಭಾರತದಲ್ಲಿ ಟ್ವಿಟ್ಟರ್​ ಅನ್ನು ಮುಚ್ಚಲಾಗುತ್ತದೆ ಎಂದು ಹೇಳಿದ್ದರು.

Twitter ban: ಎಲಾನ್ ಮಸ್ಕ್ ಮತ್ತೊಂದು ನಿರ್ಧಾರ: ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್

ಭಾರತ ಎದುರಿಸುತ್ತಿರುವ ಸಮಸ್ಯೆಯನ್ನೇ ಟರ್ಕಿ ಕೂಡ ಎದುರಿಸುತ್ತಿದೆ ಎಂದು ಡಾರ್ಸೆ ಹೇಳಿದ್ದಾರೆ. ಅಲ್ಲಿನ ಸರ್ಕಾರ ಕೂಡ ಟ್ವಿಟರ್ ಬಂದ್ ಮಾಡುವುದಾಗಿ ಬೆದರಿಕೆ ಹಾಕಿತ್ತು. ವಾಸ್ತವವಾಗಿ, ಡಾರ್ಸಿ ಅವರು ವರ್ಷಗಳಲ್ಲಿ ವಿದೇಶಿ ಸರ್ಕಾರಗಳಿಂದ ಒತ್ತಡವನ್ನು ಎದುರಿಸಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಈ ಉತ್ತರ ನೀಡಿದ್ದರು.

ವಾಸ್ತವವಾಗಿ, ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ ಅವರ ಸಂದರ್ಶನದ ಕ್ಲಿಪ್ ಅನ್ನು ಯುವ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಹಂಚಿಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ