Twitter ban: ಎಲಾನ್ ಮಸ್ಕ್ ಮತ್ತೊಂದು ನಿರ್ಧಾರ: ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್

ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವೆ ಭಾರತದಲ್ಲಿ ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿದೆ. ಈ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿತ್ತು ಎಂಬ ಕಾರಣ ನೀಡಿದೆ.

Twitter ban: ಎಲಾನ್ ಮಸ್ಕ್ ಮತ್ತೊಂದು ನಿರ್ಧಾರ: ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ಬ್ಯಾನ್
Twitter Ban
Follow us
TV9 Web
| Updated By: Vinay Bhat

Updated on: Nov 01, 2022 | 2:53 PM

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು (Twitter) ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ ಇದರಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಕೆಲವೊಂದು ಹೊಸ ಆಯ್ಕೆಗಳನ್ನು ಪರಿಚಯಿಸುವ ಕೆಲಸಗಳು ನಡೆಯುತ್ತಿದ್ದರೆ, ಇದರ ಜೊತೆಗೆ ಕಠಿಣ ನಿಯಮ ತರುವ ಬಗ್ಗೆ ಕೂಡ ಮಾತುಕತೆ ಶುರುವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಟ್ವಿಟರ್​ನಲ್ಲಿ ಇನ್ನುಮುಂದೆ ಬ್ಲೂ ಸಬ್​ಸ್ಕ್ರಿಪ್ಷನ್ (Twitter Verification) ಪಡೆಯಬೇಕಾದರೆ ಹಣ ಪಾವತಿಸಬೇಕಾಗುತ್ತದೆ ಎಂಬ ನಿಯಮವನ್ನು ಮಸ್ಕ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ 54,000 ಕ್ಕೂ ಅಧಿಕ ಟ್ವಿಟರ್ ಖಾತೆ ನಿಷೇಧವಾಗಿದೆ (Twitter ban).

ಈ ಬಗ್ಗೆ ಟ್ವಿಟರ್ ಕಂಪನಿ ಮಾಹಿತಿ ನೀಡಿದ್ದು, ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವೆ ಭಾರತದಲ್ಲಿ ಒಟ್ಟು 54 ಸಾವಿರಕ್ಕೂ ಅಧಿಕ ಟ್ವಿಟರ್ ಖಾತೆಗಳನ್ನು ನಿಷೇಧ ಮಾಡಲಾಗಿದೆ ಎಂದು ಹೇಳಿದೆ. ಈ ಖಾತೆಗಳು ಮಕ್ಕಳ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆಯಿಲ್ಲದೆ ನಗ್ನ ಫೋಟೋಗಳನ್ನು ಹಂಚಿಕೊಳ್ಳುತ್ತಿತ್ತು ಎಂಬ ಕಾರಣ ನೀಡಿದೆ. ಐಟಿ ನಿಯಮ 2021ರ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ.

ಐಟಿ ನಿಯಮಗಳು 2021 ರ ನಿಯಮ ಉಲ್ಲಂಘನೆ ಬಗ್ಗೆ ಮಾಸಿಕ ವರದಿಯಲ್ಲಿ ಭಾರತದಲ್ಲಿನ ಬಳಕೆದಾರರಿಂದ 157 ದೂರುಗಳನ್ನು ಟ್ವಿಟರ್ ಸ್ವೀಕರಿಸಿದೆ. 129 URL ಗಳ ಮೇಲೆ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ”ನಾವು ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸುವಂತೆ ಮನವಿ ಮಾಡಿದ 43 ಕುಂದುಕೊರತೆಗಳನ್ನು ಪ್ರಕ್ರಿಯೆಗೊಳಿಸಿದ್ದೇವೆ. ಇವೆಲ್ಲವನ್ನೂ ಪರಿಹರಿಸಲಾಗಿದೆ ಮತ್ತು ಸೂಕ್ತ ಕ್ರಮಗಳಲ್ಲಿ ಕೈಗೊಳ್ಳಲಾಗಿದೆ” ಎಂದು ಟ್ವಿಟ್ಟರ್ ಅನ್ನು ಉಲ್ಲೇಖಿಸಿ ಐಎಎನ್ಎಸ್ ವರದಿ ಹೇಳಿದೆ.

ಇದನ್ನೂ ಓದಿ
Image
ಟ್ವಿಟರ್​ಗೆ ಮರಳಲಿದ್ದಾರೆ ಶ್ರೀರಾಮ್ ಕೃಷ್ಣನ್; ಯಾರಿವರು, ಎಲಾನ್ ಮಸ್ಕ್​ಗೆ ಹೇಗೆ ನೆರವಾಗಲಿದ್ದಾರೆ?
Image
Nokia G60 5G: ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ರಿಲೀಸ್ ಮಾಡಿದ ನೋಕಿಯಾ: ಧೂಳೆಬ್ಬಿಸುತ್ತಿದೆ ಹೊಸ ಸ್ಮಾರ್ಟ್​ಫೋನ್
Image
Namma Metro App: ವಾಟ್ಸ್​ಆ್ಯಪ್ ಮೂಲಕ ನಮ್ಮ ಮೆಟ್ರೋ ಟಿಕೆಟ್ ಪಡೆದುಕೊಳ್ಳುವುದು ಹೇಗೆ?: ಇಲ್ಲಿದೆ ಸಂಕ್ಷಿಪ್ತ ವಿವರ
Image
Kannada Rajyotsava: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ

ಕಳೆದ ತಿಂಗಳು, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಮಕ್ಕಳ ಅಶ್ಲೀಲತೆಯ ದೂರುಗಳಲ್ಲಿ ಟ್ವಿಟರ್‌ನಿಂದ ಪಡೆದ ಉತ್ತರಗಳು ಅಪೂರ್ಣವಾಗಿವೆ ಮತ್ತು ಇದರಿಂದ ಆಯೋಗವು ತೃಪ್ತಿ ಹೊಂದಿಲ್ಲ ಎಂದು ಹೇಳಿದ್ದರು. ಟ್ವಿಟರ್​ನಲ್ಲಿ ಮಕ್ಕಳ ಅಶ್ಲೀಲತೆ ಮತ್ತು ಮಹಿಳೆಯರ, ಮಕ್ಕಳ ಅತ್ಯಾಚಾರದ ವಿಡಿಯೋಗಳನ್ನು ಚಿತ್ರಿಸುವ ಟ್ವೀಟ್‌ಗಳ ಕುರಿತು ಮಲಿವಾಲ್ ಸೆಪ್ಟೆಂಬರ್ 20 ರಂದು ಟ್ವಿಟರ್ ಇಂಡಿಯಾ ನೀತಿ ಮುಖ್ಯಸ್ಥ ಮತ್ತು ದೆಹಲಿ ಪೊಲೀಸರಿಗೆ ಸಮನ್ಸ್ ನೀಡಿದ್ದರು. ಟ್ವಿಟರ್‌ನಲ್ಲಿ ಮಕ್ಕಳ ಅಶ್ಲೀಲತೆಯನ್ನು ಬಿಂಬಿಸುವಂತಹ ಟ್ವೀಟ್‌ಗಳ ಹೆಚ್ಚಾಗುತ್ತಿದೆ. ಈ ಬಗ್ಗೆ ಎಲಾನ್ ಮಸ್ಕ್ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಟ್ವಿಟರ್ ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ಕಾನೂನು ಬಾಹಿರ, ಅಶ್ಲೀಲ, ಮಾನಹಾನಿಕರ, ಬೆದರಿಕೆಯ, ಕಿರುಕುಳದ, ದ್ವೇಷಪೂರಿತ ಸಂದೇಶಗಳನ್ನು ಕಳುಹಿಸಿದರೆ ನಿಮ್ಮನ್ನು ಟ್ವಿಟರ್ ಬ್ಯಾನ್ ಮಾಡುತ್ತದೆ. ಹಿಂಸಾತ್ಮಕ ಅಪರಾಧಗಳನ್ನು ಪ್ರಚೋದಿಸುವ ಅಥವಾ ಉತ್ತೇಜಿಸುವ ಸಂದೇಶಗಳನ್ನು ಕಳುಹಿಸಿದರೂ ಟ್ವಿಟರ್ ನಿಮ್ಮ ಖಾತೆಯನ್ನು ಬ್ಯಾನ್ ಮಾಡಬಹುದು.

ಬ್ಲೂಟಿಕ್ ಬೇಕಾದಲ್ಲಿ ಹಣ ಪಾವತಿಸಬೇಕು:

ಟ್ವಿಟರ್​ನ ಬ್ಲೂ ಸಬ್​ಸ್ಕ್ರಿಪ್ಷನ್ ಪಡೆಯಬೇಕಾದರೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ. ಟ್ವಿಟರ್‌ ಪ್ರಸ್ತುತ ಹೊಸ ಚಂದಾದಾರಿಕೆಗಾಗಿ 19.99 ಡಾಲರ್‌ (ಸುಮಾರು 1600 ರೂಪಾಯಿ) ಶುಲ್ಕ ವಿಧಿಸಲು ಯೋಜಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪರಿಶೀಲನೆಗೆ ಒಳಪಟ್ಟ ಬಳಕೆದಾರರು ಚಂದಾದಾರರಾಗಲು ಅಥವಾ ತಮ್ಮ ನೀಲಿ ಟಿಕ್‌ಮಾರ್ಕ್‌ ಅನ್ನು ಕಳೆದುಕೊಳ್ಳಲು 90 ದಿನಗಳ ಕಾಲಾವಧಿ ಹೊಂದಿರುತ್ತಾರೆ. ಬ್ಲೂ ಸಬ್​ಸ್ಕ್ರಿಪ್ಷನ್ ಇದು ಟ್ವೀಟ್‌ಗಳನ್ನು ಎಡಿಟ್ ಮಾಡುವುದು ಮತ್ತು ಅನ್​ಡು ಮಾಡುವಂಥ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ. ನವೆಂಬರ್ 7ರ ಒಳಗೆ ಈ ಫೀಚರ್​ ಅನ್ನು ಜಾರಿಗೊಳಿಸುವಂತೆ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಿಳಿಸಲಾಗಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ