AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kannada Rajyotsava: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ

ನವೆಂಬರ್ 1, 1956 ರ ಏಕೀಕೃತ ನಾಡಿನ 67ನೇ ರಾಜ್ಯೋತ್ಸವ (Kannada Rajyotsava) ಆಚರಣೆ ಮಾಡಲಾಗುತ್ತಿದೆ. ಆದರೆ, ಇದು ಇಂದು ಒಂದೇದಿನ ಸೂರ್ಯಾಸ್ತದ ನಂತರ ಕನ್ನಡಿಗರು ಮೌನವಾಗಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗದಿರಲಿ ಎಂಬುದು ಆಶಯ.

Kannada Rajyotsava: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ
Kannada Rajyotsava
TV9 Web
| Edited By: |

Updated on:Nov 01, 2022 | 3:43 PM

Share

ಕನ್ನಡ (Kannada) ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದು. ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡಕ್ಕೆ ಅಗ್ರಪಂಕ್ತಿ. ಇಷ್ಟೆಲ್ಲ ಇದ್ದರೂ ಭಾಷಾ ಸಂವಹನಕ್ಕೆ ಹೋಲಿಕೆ ಮಾಡಿದರೆ ಕನ್ನಡ ಮಾತನಾಡುವವರ ಸಂಖ್ಯೆ ಬಹಳ ವಿರಳ. ವಿಶ್ವ ಮಾನವ ಕುವೆಂಪು ಹೇಳಿದಂತೆ ಎಲ್ಲಾದರೂ ಇರು ಎಂತಾದರೂ ಇರು ನೀನು ಕನ್ನಡದ ಕಂದನಾಗಿರು. ಬಹುಶಃ ಇಂದಿಗೆ ಈ ಮಾತು ಅಪ್ರಸ್ತುತ. ಇತರೆ ಬಾಷಾ ಪ್ರಭಾವದಿಂದಾಗಿ ಕನ್ನಡದ ಅಚ್ಚ ಸೂಗಡಿನ ಭಾಷೆಗಳು ನೆಲಕಚ್ಚಿದೆ ಎಂದರೆ ತಪ್ಪಾಗಲಾರದು. ನವೆಂಬರ್ 1, 1956 ರ ಏಕೀಕೃತ ನಾಡಿನ 67ನೇ ರಾಜ್ಯೋತ್ಸವ (Kannada Rajyotsava) ಆಚರಣೆ ಮಾಡಲಾಗುತ್ತಿದೆ. ಆದರೆ, ಇದು ಇಂದು ಒಂದೇದಿನ ಸೂರ್ಯಾಸ್ತದ ನಂತರ ಕನ್ನಡಿಗರು ಮೌನವಾಗಿ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗದಿರಲಿ ಎಂಬುದು ಆಶಯ.

ಇಡೀ ಜಗತ್ತಿನಲ್ಲಿ 2000 ಕ್ಕಿಂತಲೂ ಅಧಿಕ ಭಾಷೆಗಳಿವೆ ಆದರೆ ಒಂದು ಮಗು ಕನಿಷ್ಟ ಅಂದರೂ ಮಾತೃಭಾಷೆ, ವ್ಯವಹಾರಿಕ ಭಾಷೆಯಾಗಿ ಒಂದಿಷ್ಟು ಭಾಷೆಯನ್ನು ಅರಿಯುತ್ತದೆ. ನಿಜಕ್ಕೂ ಭಾಷೆ ಇರುವುದೇ ಭಾವನೆಯ ಅಭಿವ್ಯಕ್ತಿಗಾಗಿ, ಸಂವಹನ ಮಾದ್ಯಮಕ್ಕಾಗಿ. ಕಾಕತಾಳೀಯ ಎಂಬಂತೆ ನಮ್ಮಲ್ಲಿ ಆದಿವಾಸಿ ಸಮುದಾಯಗಳು ಇಂದಿಗೂ ಭಾಷೆ ಅರಿಯದೆ ಸಮಾಜದ ಮುನ್ನಲೆಗೆ ಬರುವಲ್ಲಿ ಸೋತಿವೆ. ಕನ್ನಡವನ್ನು ಮೊದಲು ಆಡಳಿತ ಭಾಷೆಯನ್ನಾಗಿ ಮಾಡಿದ್ದೇ ಕದಂಬರು. ಹಾಗದರೆ ಕನ್ನಡ ಇತಿಹಾಸದ ಬಗ್ಗೆ ಬೇರೆ ದಾಖಲೆಗಳು ತಡಕಾಡುವ ಅವಸರ ಅನಗತ್ಯ. ರಾಷ್ಟ್ರೀಯ ಭಾಷಾ ನೀತಿಯೂ ಮುಂದೂದು ದಿನ ಪ್ರಾದೇಶಿಕ ಭಾಷಾ ಸಂಪತ್ತಿಗೆ ಹಾನಿ ತರುವ ಸಾಧ್ಯತೆಗಳಿವೆ.

ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?:

ಕೆಲವು ವರ್ಷಗಳ ಹಿಂದೆ ಕನ್ನಡದಲ್ಲಿ ಏನು ಗೂಗಲಿಸಿದರೂ ಅದು ಹೋಗುತ್ತಿದ್ದುದು ಕನ್ನಡ ವಿಕಿಪಿಡಿಯಾದ ಪುಟಗಳಿಗೇ. ಹಾಗಂತ ಅಲ್ಲಿ ಇಂದುಕೂಡ ಮಾಹಿತಿಯ ಮಹಾಸಂಗ್ರಹವಿದೆ ಎಂದಲ್ಲ. ಅಂತರಜಾಲಾಡಿಗಳ ಗೂಗಲಾಟಕ್ಕೆ ಸಿಗುವಂತಿದ್ದ ಕನ್ನಡ ಪಠ್ಯ ಕನ್ನಡ ವಿಕಿಪಿಡಿಯಾದಲ್ಲಷ್ಟೇ ಇತ್ತು. ಸದ್ಯ ಹಿಂದಿ, ತಮಿಳು, ತೆಲುಗು, ಮಲೆಯಾಳ, ಮರಾಠಿ ಸೇರಿದಂತೆ ದೇಶದ 21 ಭಾಷೆಗಳಲ್ಲಿ ವಿಕಿಪಿಡಿಯಾ ಲಭ್ಯವಿದೆ. ಆದರೆ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಪ್ರಗತಿ ಉತ್ತಮವಾಗಿಲ್ಲ ಎಂಬುದು ಒಪ್ಪಿಕೊಳ್ಳಬೇಕು.

ಕನ್ನಡ ವಿಕಿಪಿಡಿಯಾ 2004ರ ಜೂನ್ ತಿಂಗಳಲ್ಲಿ ಆರಂಭವಾಯಿತು. ಆದರೆ, ಅಧಿಕೃತವಾಗಿ ಜನರ ಬಳಕೆಗೆ ಮುಕ್ತವಾಗಿದ್ದು 2004ರ ಸೆಪ್ಟೆಂಬರ್‌ನಲ್ಲಿ. ಈಗ ಕನ್ನಡ ವಿಕಿಪಿಡಿಯದ ಒಡಲಲ್ಲಿ ಅನೇಕ ಲೇಖನಗಳಿವೆ. ಆದರೆ, ಈ ಪೈಕಿ ಅನೇಕ ಲೇಖನಗಳು ಗೂಗಲ್ ಟ್ರಾನ್ಸಲೇಟ್ ಮಾದರಿಯಲ್ಲಿದ್ದು, ಓದುಗರಿಗೆ ಪರಿಪೂರ್ಣ ಮಾಹಿತಿ ನೀಡುತ್ತಿಲ್ಲ. ಅದರಲ್ಲಿರುವ ಪದಗಳು, ಸಾಲುಗಳು ಗಟ್ಟಿತನವನ್ನು ಹೊಂದಿಲ್ಲ ಎಂದೇ ಹೇಳಬಹುದು.

ಇಂದು ನಾವಷ್ಟೇ ಅಲ್ಲ ಕೋಟ್ಯಾಂತರ ಮಂದಿ ವಿಕಿಪಿಡಿಯಾದಿಂದ ಮಾಹಿತಿಯನ್ನು ಪಡೆದುಕೊಳ್ಳುವವರಿದ್ದಾರೆ. ಕನ್ನಡ ಕಲಿಯುವವರಿಗೆ, ಭಾಷಾಭಿಮಾನಿಗಳಿಗೆ ಹಾಗೂ ಅಗತ್ಯ ಮಾಹಿತಿ ಹುಡುಕುವವರಿಗೆ ವಿಕಿಪಿಡಿಯಾದಲ್ಲಿ ಕನ್ನಡ ಸಾಹಿತ್ಯ ಸೃಷ್ಟಿ ಮಾಡಬೇಕು. ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶಕ್ಕೆ ಅಗತ್ಯ ಮಾಹಿತಿಗಳನ್ನು ಅಳವಡಿಕೆ ಮಾಡಬೇಕು. ಕನ್ನಡ ಭಾಷೆ ಹಾಗೂ ಸಂಸ್ಕೃತಿ, ಸಂಸ್ಕಾರಗಳನ್ನು ಅನ್ಯರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕನ್ನಡ ವಿಕಿಪಿಡಿಯಾ ಇನ್ನಷ್ಟು ಬೆಳಯಬೇಕು.

-ಹರೀಶ್ ಭಟ್. ಕೂವೆತ್ತಂಡ

Published On - 10:49 am, Tue, 1 November 22

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ