Nokia G60 5G: ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ರಿಲೀಸ್ ಮಾಡಿದ ನೋಕಿಯಾ: ಧೂಳೆಬ್ಬಿಸುತ್ತಿದೆ ಹೊಸ ಸ್ಮಾರ್ಟ್​ಫೋನ್

Nokia 5G Smartphone: ಹೊಸ ಅವತಾರದೊಂದಿಗೆ ನೋಕಿಯಾ ಭಾರತದಲ್ಲಿ ಮತ್ತೆ ಧೂಳೆಬ್ಬಿಸುತ್ತಿದೆ. ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ ಜಿ60 5ಜಿ (Nokia G60 5G).

Nokia G60 5G: ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ರಿಲೀಸ್ ಮಾಡಿದ ನೋಕಿಯಾ: ಧೂಳೆಬ್ಬಿಸುತ್ತಿದೆ ಹೊಸ ಸ್ಮಾರ್ಟ್​ಫೋನ್
Nokia G60 5G
Follow us
TV9 Web
| Updated By: Vinay Bhat

Updated on:Nov 01, 2022 | 1:22 PM

ಭಾರತದಲ್ಲಿ 5ಜಿ ಯುಗ ಆರಂಭವಾಗಿದ್ದೇ ತಡ ಸ್ಮಾರ್ಟ್​ಫೋನ್ ಕಂಪನಿಗಳು ಒಂದರ ಹಿಂದೆ ಒಂದರಂತೆ ಆಕರ್ಷಕವಾದ 5ಜಿ (5G) ಫೋನ್​ಗಳನ್ನು ಬಿಡುಗಡೆ ಮಾಡುತ್ತಿವೆ. ಅದುಕೂಡ ಕಡಿಮೆ ಬೆಲೆಗೆ ಎಂಬುದು ವಿಶೇಷ. ಇದೀಗ ನೋಕಿಯಾ ಸರದಿ. ಒಂದು ಕಾಲದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಹೇಳ ಹೆಸರಿಲ್ಲದಂತಾಗಿದೆ. ಚೀನೀ ಸ್ಮಾರ್ಟ್​ಫೋನ್ (Smartphone) ಬ್ರ್ಯಾಂಡ್​ಗಳ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಭಾರತದಲ್ಲಿ ದೊಡ್ಟ ಮಟ್ಟದಲ್ಲಿ ಯಶಸ್ಸು ಸಾಧಿಸುತ್ತಿಲ್ಲ. ಆದರೀಗ ಹೊಸ ಅವತಾರದೊಂದಿಗೆ ನೋಕಿಯಾ ಭಾರತದಲ್ಲಿ ಮತ್ತೆ ಧೂಳೆಬ್ಬಿಸುತ್ತಿದೆ. ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್‌ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ ಜಿ60 5ಜಿ (Nokia G60 5G). ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೋಕಿಯಾ G60 5G ಸ್ಮಾರ್ಟ್‌ಫೋನ್‌ ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಭಾರತದಲ್ಲಿ ಸದ್ಯಕ್ಕೆ ಒಂದು ಮಾದರಿಯಲ್ಲಿ ಅನಾವರಣಗೊಂಡಿರುವ ಈ ಫೋನಿನ 6GB RAM, 128GB ಸ್ಟೋರೇಜ್ ಆಯ್ಕೆಗೆ 29,999 ರೂ. ನಿಗದಿ ಮಾಡಲಾಗಿದೆ. ನವೆಂಬರ್ 1 ರಿಂದ 7 ರ ವರೆಗೆ ನೋಕಿಯಾ ಭಾರತದ ಅಧಿಕೃತ ವೆಬ್​​ಸೈಟ್ ಮತ್ತು ಆಯ್ದ ರಿಟೇಲ್ ಸ್ಟೋರ್​ಗಳನ್ನು ಪ್ರಿ ಬುಕ್ಕಿಂಗ್​ಗೆ ಅವಕಾಶ ಮಾಡಿಕೊಟ್ಟಿದೆ. ಇದರ ಜೊತೆಗೆ ಬಂಪರ್ ಆಫರ್ ಅನ್ನು ಘೋಷಣೆ ಮಾಡಿದ್ದು 3,599 ರೂ. ವಿನ ನೋಕಿಯಾ ಈಯರ್ ಬರ್ಡ್ಸ್ ಅನ್ನು ಉಚಿತವಾಗಿ ನಿಮ್ಮದಾಗಿಸಬಹುದು.

ಈ ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ನೋಕಿಯಾ G60 5G 1080*2400 ಪಿಕ್ಸೆಲ್ ರೆಸಲೂಷನ್ ಸಾಮರ್ಥ್ಯದ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಹೊಂದಿದೆ. ಇದು 120Hz ರಿಫ್ರೆಶ್ ರೇಟ್​ನಿಂದ ಕೂಡಿದೆ. ಈ ಡಿಸ್ ಪ್ಲೇ ಕೂಡ ವಿಭಿನ್ನವಾಗಿದ್ದು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಪಡೆದುಕೊಂಡಿದೆ.

ಇದನ್ನೂ ಓದಿ
Image
Namma Metro App: ವಾಟ್ಸ್​ಆ್ಯಪ್ ಮೂಲಕ ನಮ್ಮ ಮೆಟ್ರೋ ಟಿಕೆಟ್ ಪಡೆದುಕೊಳ್ಳುವುದು ಹೇಗೆ?: ಇಲ್ಲಿದೆ ಸಂಕ್ಷಿಪ್ತ ವಿವರ
Image
Kannada Rajyotsava: ವಿಕಿಪಿಡಿಯಾದಲ್ಲಿ ಕನ್ನಡ ನಿರ್ಲಕ್ಷ್ಯ?: ಕನ್ನಡದ ಅಸ್ಮಿತೆಯ ಕೂಗು ಎಲ್ಲೆಡೆ ಕೇಳಲಿ
Image
Nothing Phone (1): ಹೊಸ ಸ್ಮಾರ್ಟ್​ಫೋನ್ ಮೇಲೆ ಕಣ್ಣಿಟ್ಟಿದ್ದರೆ ಇಲ್ಲಿ ಗಮನಿಸಿ: ನಥಿಂಗ್ ಫೋನ್ (1) ಮೇಲೆ ಬಂಪರ್ ಡಿಸ್ಕೌಂಟ್
Image
Instagram Outage: ಪ್ರಪಂಚದಾದ್ಯಂತ ಇನ್​​ಸ್ಟಾಗ್ರಾಮ್ ಕಾರ್ಯ​ ಸ್ಥಗಿತ, ಅನೇಕರ ಖಾತೆಗಳು ಅಮಾನತು !!

ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ವೇಗದೊಂದಿಗೆ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್‌ 12 OS ಅಳವಡಿಸಲಾಗಿದೆ. ಇದು 3 ವರ್ಷಗಳ ಆಂಡ್ರಾಯ್ಡ್‌ ಒಎಸ್‌ ಅಪ್‌ಗ್ರೇಡ್‌ ಮತ್ತು ಮಾಸಿಕ ಸೆಕ್ಯುರ್‌ ಅಪ್ಡೇಟ್‌ ನೀಡಲಿದೆ. ಈ ಫೋನಿನ ಹಿಂಭಾಗ ಮತ್ತು ಮುಂಭಾಗದ ಡಿಸೈನ್ ಅತ್ಯುತ್ತಮವಾಗಿದ್ದು ಯುವಕ-ಯುವತಿಯರನ್ನು ಆಕರ್ಷಿಸುವ ರೀತಿಯಲ್ಲಿದೆ.

ನೋಕಿಯಾ G60 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯ ಪಡೆದುಕೊಂಡರೆ, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್ ಸೆನ್ಸಾರ್ ಹೊಂದಿದೆ. ಇವುಗಳ ಜೊತೆಗೆ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ದೊಡ್ಡ ಮಟ್ಟದ ಬ್ಯಾಟರಿ ನೀಡಲಾಗಿಲ್ಲ. ಇದು 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ ತಕ್ಕಂತೆ 20W ವೇಗದ ಚಾರ್ಜಿಂಗ್‌ ಬೆಂಬಲಿಸಲಿದೆ. ಈ ಫೋನಿನ ಬೆಲೆಗೆ ಹೋಲಿಸಿದರೆ ಇದು ಕಡಿಮೆ ವೇಗದ ಚಾರ್ಜಿಂಗ್ ಸಪೋರ್ಟ್ ಆಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಐಫೋನ್ ನೂತನ ಸರಣಿಯಲ್ಲಿ ಇರುವಂತೆ eSIM ಆಯ್ಕೆ ಇರಲಿದೆ. ಉಳಿದಂತೆ ವೈಫೈ 6, ಬ್ಲೂಟೂತ್ 5.1, GPS, USB ಟೈಪ್-ಸಿ ಪೋರ್ಟ್ ಬೆಂಬಲ ಪಡೆದುಕೊಂಡಿದೆ.

Published On - 1:22 pm, Tue, 1 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ