WhatsApp New Feature: ಇನ್ಮುಂದೆ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಿ: ವಾಟ್ಸ್​​ಆ್ಯಪ್​ನಲ್ಲಿ ಅಚ್ಚರಿಯ ಆಯ್ಕೆ

WhatsApp Update: ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಬೀಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ.

WhatsApp New Feature: ಇನ್ಮುಂದೆ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಿ: ವಾಟ್ಸ್​​ಆ್ಯಪ್​ನಲ್ಲಿ ಅಚ್ಚರಿಯ ಆಯ್ಕೆ
WhatsApp
Follow us
| Updated By: Vinay Bhat

Updated on: Oct 31, 2022 | 3:03 PM

ಮೆಟಾ (Meta) ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ವಿನೂತನವಾದ ಅಪ್ಡೇಟ್ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗೀಗ ಒಮ್ಮೆಲೆ 4,5 ಹೊಸ ಹೊಸ ಆಯ್ಕೆಯನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ನಲ್ಲಿ ಸಾಲು ಸಾಲು ಅಪ್ಡೇಟ್​ಗಳು ಬರಲು ತಯಾರಾಗಿ ನಿಂತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್ ಶೀಘ್ರದಲ್ಲಿ ತನ್ನ ಆಂಡ್ರಾಯ್ಡ್ (Android) ಮತ್ತು ಐಒಎಸ್ ಬಳಕೆದಾರರಿಗೆ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್​ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಅಡಿಬರಹ ಕೂಡ ಸೆಂಡು ಆಗುವ ಆಯ್ಕೆಯನ್ನು ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ತಿಳಿಸಿತ್ತು. ಇದೀಗ ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ವಾಟ್ಸ್​ಆ್ಯಪ್ ನೀಡಲು ಮುಂದಾಗಿದೆ.

ವಾಟ್ಸ್​ಆ್ಯಪ್​ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಮೆಸೇಜ್ ವಿಥ್ ಯುವರ್​ಸೆಲ್ಫ್ ಎಂಬ ಹೊಸ ಫೀಚರ್ ಅನ್ನು ಪರಿಚಯಿಸುವ ಬಗ್ಗೆ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಬೀಟಾ ವರ್ಷನ್​ನಲ್ಲಿ ಈ ಆಯ್ಕೆ ಕಾಣಿಸಿಕೊಂಡಿದೆ. ವಾಟ್ಸ್​ಆ್ಯಪ್​ನಲ್ಲಿ ನಿಮಗೆ ನೀವೇ ಮೆಸೇಜ್ ಮಾಡಲು ಈಗಲು ಸಾಧ್ಯವಿದೆ. ಆದರೆ, ಅದು ಗ್ರೂಪ್ ಒಂದನ್ನು ರಚಿಸಿ ನೀವೊಬ್ಬರೆ ಆ ಗ್ರೂಪ್​ನ ಸದಸ್ಯರಾಗಿ ಮೆಸೇಜ್ ಮಾಡಬಹುದು. ಆದರೀಗ ವಾಟ್ಸ್​ಆ್ಯಪ್ ನೀಡಲಿರುವ ಈ ಹೊಸ ಆಯ್ಕೆಯಲ್ಲಿ ಕಾಂಟೆಕ್ಟ್​ ಲಿಸ್ಟ್​ನಲ್ಲಿ ಬೇರೆಯವರ ನಂಬರ್ ಜೊತೆ ನಿಮ್ಮ ನಂಬರ್ ಕೂಡ ಕಾಣಲಿದೆ. ಆ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾಟ್ ಬಾಕ್ಸ್ ಕೂಡ ತೆರೆಯಲಿದ್ದು ಆಗ ನಿಮಗೆ ನೀವೇ ಮಸೇಜ್ ಮಾಡಬಹುದಾಗಿದೆ.

ಇನ್ನು ವಾಟ್ಸ್​ಆ್ಯಪ್​ನಲ್ಲಿ ನಮಗೆ ಬಂದ ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್​ಗಳನ್ನು ಬೇರೆಯವರಿಗೆ ಕಳುಹಿಸುವಾಗ ಅದರ ಜೊತೆಗಿದ್ದ ಕಾಪ್ಷನ್ ಸೆಂಡು ಆಗುವುದಿಲ್ಲ. ಕೇವಲ ಆ ಫೈಲ್ ಮಾತ್ರ ಫಾರ್ವರ್ಡ್ ಆಗುತ್ತದೆ. ಆದರೆ ವಾಟ್ಸ್​ಆ್ಯಪ್ ನೂತನ ಅಪ್ಡೇಟ್ ನೀಡಲು ಸಜ್ಜಾಗಿದ್ದು, ಇದರ ಮೂಲಕ ನೀವು ಫೋಟೋ, ವಿಡಿಯೋ ಅಥವಾ ಜಿಫ್ ಫೈಲ್​ಗಳನ್ನು ಫಾರ್ವರ್ಡ್ ಮಾಡುವಾಗ ಅದರ ಜೊತೆಗಿದ್ದ ಅಡಿ ಬರಹ ಕೂಡ ಸೆಂಡ್ ಆಗುತ್ತದೆ. ಸದ್ಯಕ್ಕೆ ಈ ಆಯ್ಕೆ ಕೆಲ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಲಭ್ಯವಾಗುತ್ತಿದೆ.

ಇದನ್ನೂ ಓದಿ
Image
Twitter Verification: ಟ್ವಿಟರ್​ನಲ್ಲಿ ಮಹತ್ವದ ಬದಲಾವಣೆ: ಬ್ಲೂಟಿಕ್ ಬೇಕಾದಲ್ಲಿ ಹಣ ಪಾವತಿಸಬೇಕು
Image
Tech Tips: ಒಂದು ಸಿಮ್​ ಅನ್ನು ಎಷ್ಟು ಬಾರಿ ಪೋರ್ಟ್ ಮಾಡಬಹುದು ಗೊತ್ತೆ?: ಟ್ರಾಯ್ ನಿಯಮ ಏನಿದೆ?
Image
Moto E40: ಬಜೆಟ್ ಸ್ಮಾರ್ಟ್​ಫೋನ್ ಬೇಕಿದ್ದರೆ ಇಲ್ಲಿದೆ ಬಂಪರ್ ಆಫರ್: ಮೋಟೋ E40 ಬೆಲೆ ಕೇವಲ 8,599 ರೂ.
Image
Nokia G60 5G: ಭಾರತದಲ್ಲಿ ಮತ್ತೆ ಶುರುವಾಗುತ್ತಾ ನೋಕಿಯಾ ಹವಾ: ಮೊಟ್ಟ ಮೊದಲ 5G ಫೋನ್ ಬಿಡುಗಡೆಗೆ ತಯಾರಿ

ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್​ಗಳನ್ನು ಅಡಿ ಬರಹ ನೀಡಿ ಕಳುಹಿಸಬಹುದು ಎಂಬುದು ಗೊತ್ತಿದೆ. ಆದರೆ, ಡಾಕ್ಯುಮೆಂಟ್ ಕಳುಹಿಸುವಾಗ ಈ ಆಯ್ಕೆ ಕಾಣಿಸುವುದಿಲ್ಲ. ಇದೀಗ ವಾಟ್ಸ್​ಆ್ಯಪ್ ತನ್ನ ನೂತನ ಅಪ್ಡೇಟ್​ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ.

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ