ಹೈದರಾಬಾದ್: ಈ ಹುಚ್ಚು ಸೋರೆಕಾಯಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ಭಕ್ತರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದುರುಳರ ತಂಡವನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರದ ಪ್ರಸಿದ್ಧ ಶ್ರೀಶೈಲ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರೇ ಈ ಗ್ಯಾಂಗ್ನ ಟಾರ್ಗೆಟ್. ತಾವು ಮಾರುತ್ತಿದ್ದ ಹುಚ್ಚು ಸೋರೆಕಾಯಿಯಲ್ಲಿ ವಿಶೇಷ ಶಕ್ತಿಯಿದೆ ಎಂದು ಜನರನ್ನು ನಂಬಿಸುತ್ತಿದ್ದ ಖದೀಮರು ಅವುಗಳನ್ನು ಲಕ್ಷಾಂತರ ರೂಪಾಯಿಗೆ ಭಕ್ತರಿಗೆ ಮಾರುತ್ತಿದ್ದರು ಎಂದು ಹೇಳಲಾಗಿದೆ. ಅಂದ ಹಾಗೆ, ಈ ಗ್ಯಾಂಗ್ ದೇಗುಲದ ಬಳಿಯಿದ್ದ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.