ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆರಾಧನಾ ಮಿಶ್ರಾ ನೇಮಕ; ಬ್ರಾಹ್ಮಣ, ಮಹಿಳಾ ಮತಬ್ಯಾಂಕ್ ಸೆಳೆಯಲು ಮಾಸ್ಟರ್ ಪ್ಲಾನ್

2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕತ್ವದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಉತ್ತರ ಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆಯಾಗಿ ಆರಾಧನಾ ಮಿಶ್ರಾ ಹಾಗೂ ಕಾರ್ಯಾಧ್ಯಕ್ಷರಾಗಿ ಸಹಾರನ್‌ಪುರ ಲೋಕಸಭಾ ಕ್ಷೇತ್ರದ ಸಂಸದ ಇಮ್ರಾನ್ ಮಸೂದ್ ಅವರನ್ನು ನೇಮಕ ಮಾಡಲಾಗಿದೆ. ಹಾಲಿ ಅಧ್ಯಕ್ಷ ಅಜಯ್ ರೈ ಅವರ ಸ್ಥಾನಕ್ಕೆ ಆರಾಧನಾ ಮಿಶ್ರಾ ಅವರನ್ನು ನೇಮಿಸಲಾಗಿದ್ದು, ಇದರೊಂದಿಗೆ ದೇವೇಶ ನಿಷಾದ್ ಮತ್ತು ಅಲೋಕ್ ಪ್ರಸಾದ್ ಅವರನ್ನು ಪಿಸಿಸಿಯ ಹಿರಿಯ ಉಪಾಧ್ಯಕ್ಷರನ್ನಾಗಿ ಎಐಸಿಸಿ ನೇಮಿಸಿದೆ.

ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷೆಯಾಗಿ ಆರಾಧನಾ ಮಿಶ್ರಾ ನೇಮಕ; ಬ್ರಾಹ್ಮಣ, ಮಹಿಳಾ ಮತಬ್ಯಾಂಕ್ ಸೆಳೆಯಲು ಮಾಸ್ಟರ್ ಪ್ಲಾನ್
ಆರಾಧನಾ ಮಿಶ್ರಾ
Image Credit source: TV9

Updated on: Oct 02, 2026 | 10:43 PM

ಲಕ್ನೋ, ಅಕ್ಟೋಬರ್ 2: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಪಕ್ಷದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ಉತ್ತರ ಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷೆಯಾಗಿ ಆರಾಧನಾ ಮಿಶ್ರಾ ಅವರನ್ನು ಇಂದು ಅಧಿಕೃತವಾಗಿ ನೇಮಕ ಮಾಡಿದೆ. ಈ ಮೂಲಕ ರಾಜ್ಯದ ಪ್ರಭಾವಿ ಬ್ರಾಹ್ಮಣ ಸಮುದಾಯ ಮತ್ತು ಮಹಿಳಾ ಮತದಾರರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಹೆಜ್ಜೆ ಇಟ್ಟಿದೆ.

ಇದರ ಜೊತೆಗೆ, ಸಹಾರನ್‌ಪುರ ಲೋಕಸಭಾ ಕ್ಷೇತ್ರದ ಸಂಸದ ಇಮ್ರಾನ್ ಮಸೂದ್ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಹಾಗೂ ದೇವೇಂದ್ರ ನಿಷಾದ್ ಮತ್ತು ಅಲೋಕ್ ಪ್ರಸಾದ್ ಅವರನ್ನು ಹಿರಿಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಿರಿಯ ನಾಯಕ ಪ್ರಮೋದ್ ತಿವಾರಿ ಅವರ ಪುತ್ರಿಯಾಗಿರುವ ಆರಾಧನಾ ಮಿಶ್ರಾ ಅವರು ಹಾಲಿ ಅಧ್ಯಕ್ಷ ಅಜಯ್ ರೈ ಅವರ ಸ್ಥಾನವನ್ನು ತುಂಬಲಿದ್ದಾರೆ.

ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಹಾಕಿ ದಿಗ್ಗಜ ಪರ್ಗತ್ ಸಿಂಗ್ ನೇಮಕ; ರಾಜಾ ವಾರಿಂಗ್ ರಾಜೀನಾಮೆ ಬೆನ್ನಲ್ಲೇ ಹೈಕಮಾಂಡ್ ನಿರ್ಧಾರ

ಚುನಾವಣೆಗೆ ಕಾಂಗ್ರೆಸ್​ನ ರಾಜಕೀಯ ತಂತ್ರ:

ಉತ್ತರ ಪ್ರದೇಶದ ಪ್ರಭಾವಿ ಬ್ರಾಹ್ಮಣ ಸಮುದಾಯ, ಮುಸ್ಲಿಂ ಮತಬ್ಯಾಂಕ್ ಮತ್ತು ಮಹಿಳಾ ಮತದಾರರನ್ನು ಒಂದೇ ಬಾರಿಗೆ ಸೆಳೆಯಲು ಕಾಂಗ್ರೆಸ್ ಹೈಕಮಾಂಡ್ ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಉತ್ತರ ಪ್ರದೇಶದ ರಾಜಕೀಯ ಮತ್ತು ಸಾಮಾಜಿಕ ಸಮೀಕರಣದಲ್ಲಿ ಬ್ರಾಹ್ಮಣ ಸಮುದಾಯವು ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಬೆಂಬಲ ನೆಲೆಯಾಗಿದ್ದ ಬ್ರಾಹ್ಮಣ ಸಮುದಾಯವನ್ನು ಪುನಃ ತನ್ನತ್ತ ಸೆಳೆಯಲು ದೀರ್ಘಕಾಲದಿಂದ ಪ್ರಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕಿಗೆ ರಾಜ್ಯ ನಾಯಕತ್ವದ ಚುಕ್ಕಾಣಿ ನೀಡಿರುವುದು 2027ರ ಚುನಾವಣಾ ತಂತ್ರದ ಭಾಗ ಎಂದೇ ವಿಶ್ಲೇಷಿಸಲಾಗಿದೆ.


ಆರಾಧನಾ ಮಿಶ್ರಾ ಹಿನ್ನೆಲೆ:

ಆರಾಧನಾ ಮಿಶ್ರಾ ಪ್ರತಾಪ್‌ಗಢ ಜಿಲ್ಲೆಯ ‘ರಾಂಪುರ ಖಾಸ್’ ಕ್ಷೇತ್ರದಿಂದ ಸತತ 3 ಬಾರಿ ಶಾಸಕಿಯಾಗಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಅವರ ಪುತ್ರಿಯಾಗಿರುವ ಇವರು, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಅತ್ಯಂತ ಆಪ್ತರಾಗಿದ್ದಾರೆ. ಪ್ರಮೋದ್ ತಿವಾರಿ ಅವರು ರಾಂಪುರ ಖಾಸ್ ಕ್ಷೇತ್ರವನ್ನು ಸತತ 9 ಬಾರಿ ಪ್ರತಿನಿಧಿಸಿದ್ದರು. ರಾಂಪುರ ಖಾಸ್ ಕ್ಷೇತ್ರವು 1980ರಿಂದಲೂ ಕಾಂಗ್ರೆಸ್ ಪಕ್ಷದ ಬಲವಾದ ಭದ್ರಕೋಟೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us