ಭಾರತ್ ರಾಷ್ಟ್ರ ಸಮಿತಿ (Bharat Rashtra Samithi)ಮುಖ್ಯಸ್ಥ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (K Chandrashekar Rao) ಅವರು ಪ್ರಧಾನಿ ಆಗಬೇಕೆಂದು ಹಾರೈಸಿ ಅವರ ಕಟ್ಟಾ ಅಭಿಮಾನಿಯೊಬ್ಬರು ದೇವಾಲಯವನ್ನು ನಿರ್ಮಿಸಿದ್ದಾರೆ. ಆ ದೇವಸ್ಥಾನದಲ್ಲಿ ಕೆಸಿಆರ್ ವಿಗ್ರಹವನ್ನೂ ಸ್ಥಾಪಿಸಲಾಗಿದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ನಿಡಮನೂರ್ ಗ್ರಾಮದ ಗೋಗುಲ ಶ್ರೀನಿವಾಸ್ ಎಂಬ ವ್ಯಕ್ತಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಕೆಸಿಆರ್ ಅಂದರೆ ಇಷ್ಟ. ಪ್ರತ್ಯೇಕ ತೆಲಂಗಾಣಕ್ಕಾಗಿ ಕೆಸಿಆರ್‌ನ ಚಳವಳಿಯಿಂದಲೇ ಅವರ ಸಿದ್ಧಾಂತದತ್ತ ನಾನು ಆಕರ್ಷಿತನಾದೆ. ಕೆಸಿಆರ್ ಸಿಎಂ ಆದ ನಂತರ ಹೆಚ್ಚು ಉತ್ಸುಕನಾದೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ಶ್ರೀನಿವಾಸ್ ಕೆಲಸದಿಂದ ರಜೆ ಪಡೆದು ಕೆಸಿಆರ್ ನೇತೃತ್ವದಲ್ಲಿ ಪ್ರತ್ಯೇಕ ರಾಜ್ಯಕ್ಕಾಗಿ ನಡೆದ ಚಳವಳಿಯಲ್ಲಿ ಭಾಗವಹಿಸಿದ್ದರು.
ತಮ್ಮ ಪ್ರೀತಿಯನ್ನು ತೋರಿಸಲು ಗೋಗುಲ ಶ್ರೀನಿವಾಸ್ ಅವರು ಕೆಸಿಆರ್‌ಗೆ 20 ಲಕ್ಷ ರೂಪಾಯಿ ಖರ್ಚು ಮಾಡಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಅವರೇ ಭೂಮಿಯನ್ನು ಖರೀದಿಸಿ ಅದರಲ್ಲಿ ದೇವಾಲಯವನ್ನು ನಿರ್ಮಿಸಿದ್ದು ಅದರಲ್ಲಿ ಕೆಸಿಆರ್ ಮೂರ್ತಿಯನ್ನೂ ಪ್ರತಿಷ್ಠಾಪಿಸಿ ನಿತ್ಯ ಪೂಜಿಸುತ್ತಾರೆ.
ಕೆಸಿಆರ್ ಮೇಲಿನ ಅಭಿಮಾನದಿಂದ ಈ ಮಂದಿರ ನಿರ್ಮಾಣ ಮಾಡಿದ್ದೇನೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ಕೆಸಿಆರ್ ಭಾರತದ ಪ್ರಧಾನಿಯಾಗುವುದನ್ನು ನೋಡಬೇಕೆಂಬುದು ನನ್ನ ಆಶಯ ಎಂದು ಅವರು ಹೇಳುತ್ತಾರೆ.