ಉಗ್ರರಿಂದ ಗುಂಡೇಟು ತಿಂದು 8 ವರ್ಷಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಸೇನಾಧಿಕಾರಿ ನಿಧನ

|

Updated on: Dec 26, 2023 | 11:52 AM

ಉಗ್ರರ ಗುಂಡೇಟು ತಿಂದು 8 ವರ್ಷಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಸೇನಾಧಿಕಾರಿಯೊಬ್ಬರು ನಿಧನರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯ ನಂತರ ಕೋಮಾದಲ್ಲಿದ್ದ ಹಿರಿಯ ಸೇನಾಧಿಕಾರಿ ಎಂಟು ವರ್ಷಗಳ ನಂತರ ಸಾವನ್ನಪ್ಪಿದ್ದಾರೆ.

ಉಗ್ರರಿಂದ ಗುಂಡೇಟು ತಿಂದು 8 ವರ್ಷಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಸೇನಾಧಿಕಾರಿ ನಿಧನ
natt
Follow us on

ಉಗ್ರರಿಂದ ಗುಂಡೇಟು ತಿಂದು 8 ವರ್ಷಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದ ಸೇನಾಧಿಕಾರಿಯೊಬ್ಬರು ನಿಧನರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯ ನಂತರ ಕೋಮಾದಲ್ಲಿದ್ದ ಹಿರಿಯ ಸೇನಾಧಿಕಾರಿ ಎಂಟು ವರ್ಷಗಳ ನಂತರ ಸಾವನ್ನಪ್ಪಿದ್ದಾರೆ. 2015ರಲ್ಲಿ ಕುಪ್ವಾರ ಜಿಲ್ಲೆಯಲ್ಲಿ ಭಯೋತ್ಪಾದಕರ ಜತೆಗಿನ ಎನ್‌ಕೌಂಟರ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್ ಕರಣ್‌ಬೀರ್ ಸಿಂಗ್ ಗಾಯಗೊಂಡಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಂದಿನಿಂದ ಅವರು ಕೋಮಾದಲ್ಲಿದ್ದರು. ಅವರು ಶನಿವಾರ ಜಲಂಧರ್‌ನ ಸೇನಾ ಆಸ್ಪತ್ರೆಯಲ್ಲಿ ನಿಧನರಾದರು.

ಸೇನಾ ಪದಕ ಪುರಸ್ಕೃತ ಲೆಫ್ಟಿನೆಂಟ್ ಕರ್ನಲ್ ಕರಣ್‌ಬೀರ್ ಸಿಂಗ್ ನಟ್ 2015 ರಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಂಭೀರವಾಗಿ ಗಾಯಗೊಂಡರು, ನಂತರ ಅವರು ಕೋಮಾಕ್ಕೆ ಹೋಗಿದ್ದರು. 8 ವರ್ಷಗಳ ಕಾಲ ಜೀವನ್ಮರಣ ಹೋರಾಟದ ನಂತರ ಇಹಲೋಕ ತ್ಯಜಿಸಿದ್ದಾರೆ.

ನವೆಂಬರ್ 22, 2015 ರಂದು, ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಹಾಜಿ ನಾಕಾ ಗ್ರಾಮದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಸೇನೆಯು ಕಾರ್ಯಾಚರಣೆಯನ್ನು ನಡೆಸಿತ್ತು.

ಮತ್ತಷ್ಟು ಓದಿ: ರಜೌರಿ ಎನ್​ಕೌಂಟರ್​: ಕರ್ನಾಟಕದ ಯೋಧ ಸೇರಿದಂತೆ ನಾಲ್ವರು ಹುತಾತ್ಮ

ಲೆಫ್ಟಿನೆಂಟ್ ಕರ್ನಲ್ ನ್ಯಾಟ್ ಅವರು ಸುಮಾರು 20 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅನುಭವಿ ಅಧಿಕಾರಿಯಾಗಿದ್ದರು.
ಟೆರಿಟೋರಿಯಲ್ ಆರ್ಮಿಗೆ ಸೇರುವ ಮೊದಲು, ಲೆಫ್ಟಿನೆಂಟ್ ಕರ್ನಲ್ ನ್ಯಾಟ್ 1997 ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿಯಿಂದ ಉತ್ತೀರ್ಣರಾದ ನಂತರ ಸೈನ್ಯಕ್ಕೆ ಸೇರಿದರು.

ನವೆಂಬರ್ 17 ರಂದು, ಕರ್ನಲ್ ಸಂತೋಷ್ ಮಹಾದಿಕ್ ನೇತೃತ್ವದಲ್ಲಿ 41 ರಾಷ್ಟ್ರೀಯ ರೈಫಲ್ಸ್ ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭೀಕರ ಗುಂಡಿನ ಕಾಳಗದಲ್ಲಿ ಅವರ ಎದೆಗೆ ಗುಂಡು ತಾಗಿತ್ತು. ಬಳಿಕ ಕೋಮಾಗೆ ಜಾರಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ