ಅರುಣಾಚಲ ಪ್ರದೇಶ ಭಾರತದ ಭೂಪ್ರದೇಶ, ಇದು ಚೀನಾದ ಹಕ್ಕಲ್ಲ: ಯುನೈಟೆಡ್ ಸ್ಟೇಟ್ಸ್

|

Updated on: Mar 21, 2024 | 10:24 AM

ಅರುಣಾಚಲ ಪ್ರದೇಶ ಅದು ಭಾರತಕ್ಕೆ ಸಂಬಂಧಿಸಿದ್ದು, ಇದು ಚೀನಾದ ಹಕ್ಕಲ್ಲ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಈ ಪ್ರದೇಶವನ್ನು ನಮ್ಮದು ನಮ್ಮದು ಎಂದು ಹೇಳುತ್ತಿದ್ದ ಚೀನಾಕ್ಕೆ ಇದೀಗ ಭಾರೀ ಮುಖಭಂಗವಾಗಿದೆ. ಈ ಪ್ರದೇಶಕ್ಕೆ ಜಂಗ್ನಾನ್ ಎಂಬ ಹೆಸರನ್ನು ಕೂಡ ಚೀನಾ ಸೂಚಿಸಿತ್ತು. ಆದರೆ ಇದನ್ನು ಭಾರತ ಒಪ್ಪಿಲ್ಲ, ಬಲವಾಗಿ ವಿರೋಧಿಸಿದೆ. ಇದರ ಜತೆಗೆ ಭಾರತದ ಯಾವ ನಾಯಕರು ಈ ಪ್ರದೇಶಕ್ಕೆ ಭೇಟಿ ನೀಡುವುದನ್ನು ಚೀನಾ ವಿರೋಧಿಸಿತ್ತು. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಇಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ಲೋಕರ್ಣಾಪಣೆ ಮಾಡಿದ್ದಾರೆ.

ಅರುಣಾಚಲ ಪ್ರದೇಶ ಭಾರತದ ಭೂಪ್ರದೇಶ, ಇದು ಚೀನಾದ ಹಕ್ಕಲ್ಲ: ಯುನೈಟೆಡ್ ಸ್ಟೇಟ್ಸ್
ಸಾಂದರ್ಭಿಕ ಚಿತ್ರ
Follow us on

ದೆಹಲಿ, ಮಾ.21: ಅರುಣಾಚಲ ಪ್ರದೇಶವನ್ನು (Arunachal Pradesh) ಭಾರತದ ಭೂಪ್ರದೇಶವೆಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಇದೀಗ ಈ ಹೇಳಿಕೆ ಚೀನಾಕ್ಕೆ ಭಾರೀ ಮುಖಭಂಗವನ್ನು ಉಂಟು ಮಾಡಿದ್ದು, ಅರುಣಾಚಲ ಪ್ರದೇಶ ನಮ್ಮದು ನಮ್ಮದು ಎನ್ನುತ್ತಿದ್ದ ಚೀನಾಕ್ಕೆ ಇದು ಸರಿಯಾದ ಉತ್ತರ ಎಂದು ಹೇಳಲಾಗಿದೆ. ನೈಜ ನಿಯಂತ್ರಣ ರೇಖೆಯ ಮೇಲೆ ತನ್ನ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಪ್ರಯತ್ನಗಳನ್ನು ನಾವು ಬಲವಾಗಿ ವಿರೋಧಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಅರುಣಾಚಲ ಪ್ರದೇಶಕ್ಕೆ ಪ್ರಧಾನಿ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿದ ನಂತರ ಚೀನಾ ಈ ಪ್ರದೇಶ ನಮ್ಮ ವ್ಯಾಪ್ತಿಗೆ ಬರುತ್ತದೆ ಎಂಬ ಹೇಳಿಕೆಯನ್ನು ನೀಡಿತ್ತು.

ಚೀನಾದ ರಕ್ಷಣಾ ಸಚಿವಾಲಯದ ಹಿರಿಯ ವಕ್ತಾರ ಕರ್ನಲ್ ಜಾಂಗ್ ಕ್ಸಿಯೋಗಾಂಗ್ ಅವರು ಕ್ಸಿಜಾಂಗ್‌ನ ದಕ್ಷಿಣ ಭಾಗ ಚೀನಾದ ಭೂಪ್ರದೇಶದ ಅಂತರ್ಗತ ಭಾಗವಾಗಿದೆ ಮತ್ತು ಈ ಭಾಗವನ್ನು ಅರುಣಾಚಲ ಪ್ರದೇಶ ಕರೆಯಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ಭಾಗದಲ್ಲಿ ಭಾರತ ತನ್ನ ಹಿಡಿತವನ್ನು ಅಕ್ರಮವಾಗಿ ಮಾಡಿಕೊಂಡಿದೆ ಎಂದು ಚೀನಾ ಹೇಳಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುವ ಚೀನಾ, ಈ ಭಾಗಕ್ಕೆ ಭಾರತದ ನಾಯಕರು ಬರುವುದನ್ನು ವಿರೋಧಿಸುತ್ತಿದೆ.

ಮಾರ್ಚ್ 9 ರಂದು, ಪ್ರಧಾನಿ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿ 13,000 ಅಡಿ ಎತ್ತರದಲ್ಲಿ ನಿರ್ಮಿಸಲಾದ ಸೆಲಾ ಸುರಂಗವನ್ನು ಲೋಕರ್ಣಾಪಣೆಯನ್ನು ಮಾಡಿದರು. ಇದು ಆಯಕಟ್ಟಿನ ಸುರಂಗವಾಗಿದ್ದು, ಎಲ್ಲ ಹವಾಮಾನಕ್ಕೂ ಹೊಂದಿಕೊಳ್ಳುತ್ತದೆ. ಮತ್ತು ಗಡಿ ಪ್ರದೇಶದ ಉದ್ದಕ್ಕೂ ಸೈನಿಕರ ಉತ್ತಮ ಚಲನೆ ಬಗ್ಗೆಯು ಅವರು ಪರಿಶೀಲನೆ ನಡೆಸಿದ್ದಾರೆ.

ಇನ್ನು ಈ ಬಗ್ಗೆ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ವೇದಾಂತ್ ಪಟೇಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅರುಣಾಚಲ ಪ್ರದೇಶವನ್ನು ಯುನೈಟೆಡ್ ಸ್ಟೇಟ್ಸ್ ಭಾರತೀಯ ಪ್ರದೇಶವೆಂದು ಗುರುತಿಸುತ್ತದ. ಆಕ್ರಮಣಗಳು ಅಥವಾ ಅತಿಕ್ರಮಣಗಳು, ಮಿಲಿಟರಿ ಅಥವಾ ನಾಗರಿಕರ ಮೂಲಕ ಪ್ರಾದೇಶಿಕ ಹಕ್ಕುಗಳನ್ನು ಮುಂದಿಡುವ ಯಾವುದೇ ಏಕಪಕ್ಷೀಯ ಪ್ರಯತ್ನಗಳನ್ನು ಯುನೈಟೆಡ್ ಸ್ಟೇಟ್ಸ್ ವಿರೋಧಿಸುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಹವಾಮಾನ ವೈಪರೀತ್ಯ: ಭೂತಾನ್ ಪ್ರವಾಸ ಮುಂದೂಡಿದ ಪ್ರಧಾನಿ ಮೋದಿ

ಅರುಣಾಚಲ ಪ್ರದೇಶದ ಮೇಲೆ ಚೀನಾದ ಪ್ರಾದೇಶಿಕ ಹಕ್ಕುಗಳನ್ನು ಭಾರತ ವಿರೋಧಿಸುತ್ತ ಬಂದಿದೆ. ಅರುಣಾಚಲ ಪ್ರದೇಶ ದೇಶದ ಅವಿಭಾಜ್ಯ ಅಂಗವಾಗಿದೆ. ಈ ಪ್ರದೇಶದ ಹೆಸರನ್ನು ಬದಲಾಯಿಸುವ ಚೀನಾ ಪ್ರಯತ್ನವನ್ನು ಭಾರತ ವಿಫಲಗೊಳಿಸುತ್ತ ಬಂದಿದೆ. ಅರುಣಾಚಲ ಪ್ರದೇಶದ ವಿಚಾರವಾಗಿ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರರು ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಅರುಣಾಚಲ ಪ್ರದೇಶ ಭಾರತದ ಕೈಯಲ್ಲೇ ಇತ್ತು ಹಾಗೂ ಅದು ಭಾರತ ಅವಿಭಾಜ್ಯ ಅಂಗvಆಗಿದೆ ಎಂದು ವೇದಾಂತ್ ಪಟೇಲ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:44 am, Thu, 21 March 24