ದೆಹಲಿ ಪೊಲೀಸ್​ ಆಯುಕ್ತ ಹುದ್ದೆಗೆ ರಾಕೇಶ್ ಅಸ್ಥಾನಾ ನೇಮಕಾತಿ ವಿರುದ್ಧ ನಿರ್ಣಯವೊಂದನ್ನು ಪಾಸು ಮಾಡಿದ ದೆಹಲಿ ಸರ್ಕಾರ

ಸಿಬಿಐ ಮುಖ್ಯಸ್ಥನ ಹುದ್ದೆಗೆ ಅಸ್ಥಾನಾ ಅನರ್ಹಗೊಂಡಿರುವ ವರದಿಗಳನ್ನು ಉಲ್ಲೇಖ ಮಾಡಿದ ಕೇಜ್ರಿವಾಲ, ‘ಅವರು ಸಿಬಿಐ ಮುಖ್ಯಸ್ಥನ ಹುದ್ದೆಗೆ ಅನರ್ಹ ಅಂತಾದರೆ, ಅದೇ ಕಾರಣಕ್ಕೆ ಅವರು ದೆಹಲಿ ಪೊಲೀಸ್ ಚೀಫ್ ಆಗಲು ಸಹ ಅನರ್ಹರು,’ ಎಂದಿದಾರೆ.

ದೆಹಲಿ ಪೊಲೀಸ್​ ಆಯುಕ್ತ ಹುದ್ದೆಗೆ ರಾಕೇಶ್ ಅಸ್ಥಾನಾ ನೇಮಕಾತಿ ವಿರುದ್ಧ ನಿರ್ಣಯವೊಂದನ್ನು ಪಾಸು ಮಾಡಿದ ದೆಹಲಿ ಸರ್ಕಾರ
ರಾಕೇಶ್ ಅಸ್ಥಾನಾ
Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 29, 2021 | 8:44 PM

ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ಮಾಜಿ ನಿರ್ದೇಶಕ ರಾಕೇಶ್ ಅಸ್ಥಾನಾ ಅವರನ್ನು ದೆಹಲಿಯ ಪೊಲೀಸ್ ಕಮೀಶನರ್ ಅಗಿ ನೇಮಕ ಮಾಡಿರುವ ವಿರುದ್ಧ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿರುವ ದೆಹಲಿ ವಿಧಾನ ಸಬೆಯು ಒಂದು ನಿರ್ಣಯವನ್ನು ಪಾಸು ಮಾಡಿದೆ. ದೆಹಲಿ ಪೊಲೀಸ್​ ವ್ಯವಸ್ಥೆಯು ಕೇಂದ್ರ ಗೃಹ ಇಲಾಖೆಯ ಅಧೀನದಲ್ಲಿದ್ದು ಅಸ್ಥಾನಾ ಅವರ ನೇಮಕಾತಿಯ ಆದೇಶವನ್ನು ಹಿಂಪಡೆಯುವಂತೆ ಅರವಿಂದ ಕೇಜ್ರಿವಾಲ ಸರ್ಕಾರ ಸದರಿ ನಿರ್ಣಯದ ಮೂಲಕ ಕೋರಲಿದೆ. ಮಂಗಳವಾರದಂದು ಅಸ್ಥಾನಾ ಅವರು ಸೇವೆಯಿಂದ ನಿವೃತ್ತಿ ಹೊಂದಲು ಕೇವಲ ಮೂರು ದಿನಗಳಿದ್ದಾಗ ಗೃಹ ಇಲಾಖೆ ಆದೇಶ ಹೊರಡಿಸಿತ್ತು.

ಇಲಾಖೆಯ ಆದೇಶದಲ್ಲಿ, ಅಸ್ಥಾನಾ ಅವರು ಗುಜರಾತ ಕೇಡರ್​ನಿಂದ ಎಜಿಎಮ್​ಯುಟಿಗೆ ಇಂಟರ್ ಕೇಡರ್ ಡೆಪ್ಯುಟೇಶನ್ ಪಡಡೆಯುತ್ತಿದ್ದಾರೆಂದು ಹೇಳಲಾಗಿತ್ತು. ಇದೇ ಕೇಡರ್​ನಿಂದ ದೆಹಲಿ ಪೊಲೀಸ್ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗುತ್ತದೆ. ‘ಸಾರ್ವಜನಿಕ ಹಿತದೃಷ್ಟಿಯ ಪ್ರಕರಣವೆಂದು ಪರಿಗಣಿಸಿ ಅವರ ಸೇವೆಯನ್ನು ನಿವೃತ್ತಿ ಹೊಂದಲಿದ್ದ ದಿನದಿಂದ ಆರಂಭಿಕ ಹಂತವಾಗಿ ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

‘ಅಸ್ಥಾನಾ ಅವರ ನೇಮಕಾತಿ ಸುಪ್ರೀಮ್ ಕೋರ್ಟಿನ ಆದೇಶಕ್ಕೆ ವಿರುದ್ಧವಾಗಿ ನಡೆದಿದೆ ಎಂದು ನಾನು ಭಾವಿಸುತ್ತೇನೆ. ಸರ್ವೋಚ್ಛ ನ್ಯಾಯಾಲಯದ ಆದೇಶಗಳನ್ನು ಪಾಲಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಆಗಿದೆ ಮತ್ತು ಅದರ ಅದೇಶಕ್ಕನುಗುಣವಾಗಿಯೇ ನೇಮಕಾತಿಗಳನ್ನು ಅದು ಮಾಡಬೇಕು,’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಹೇಳಿದರು.

ಸಿಬಿಐ ಮುಖ್ಯಸ್ಥನ ಹುದ್ದೆಗೆ ಅಸ್ಥಾನಾ ಅನರ್ಹಗೊಂಡಿರುವ ವರದಿಗಳನ್ನು ಉಲ್ಲೇಖ ಮಾಡಿದ ಕೇಜ್ರಿವಾಲ, ‘ಅವರು ಸಿಬಿಐ ಮುಖ್ಯಸ್ಥನ ಹುದ್ದೆಗೆ ಅನರ್ಹ ಅಂತಾದರೆ, ಅದೇ ಕಾರಣಕ್ಕೆ ಅವರು ದೆಹಲಿ ಪೊಲೀಸ್ ಚೀಫ್ ಆಗಲು ಸಹ ಅನರ್ಹರು,’ ಎಂದಿದಾರೆ.

‘ಮೋದಿ ಸರ್ಕಾರವು ನೇಮಕ ಮಾಡಿದ ಎಲ್ಲ ಕಮೀಶನರ್​ಗಳು ನಿಷ್ಪ್ರಯೋಜಕರು ಅಂತ ಹೇಳುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಮತ್ತು ಕಳೆದ 7 ವರ್ಷಗಳಲ್ಲಿ ಮೊದಲ ಬಾರಿಗೆ ಅದು ಒಬ್ಬ ಉತ್ತಮ ಅಧಿಕಾರಿಯನ್ನು ನೇಮಕ ಮಾಡಿದೆ,’ ಎಂದು ಆಪ್​ ಪಕ್ಷದ ಹಿರಿಯ ನಾಯಕ ಸತ್ಯೆಂದರ್ ಜೈನ್ ಹೇಳಿದರು.

‘ಮಹಾ ನಿರ್ದೇಶಕ ಹಂತದ ಹುದ್ದೆಗಳಿಗೆ ನೇಮಕ ಮಾಡಬೇಕಾದರೆ, ಅಧಿಕಾರಿಯೊಬ್ಬನ ಸೇವೆ ಕೊನೆಗೊಳ್ಳಲು ಕನಿಷ್ಟ 6 ತಿಂಗಳಾದರೂ ಉಳಿದಿರಬೇಕು ಎಂದು ಸುಪ್ರೀಮ್ ಕೋರ್ಟ್ ಆದೇಶ ಸೂಚಿಸುತ್ತದೆ, ಆದರೆ ಅಸ್ಥಾನಾ ನಿವೃತ್ತಗೊಳ್ಳಳು ಕೇವಲ 4 ದಿನ ಬಾಕಿಯುಳಿದಿತ್ತು,’ ಎಂದು ಸತ್ಯೆಂದರ್ ಜೈನ್ ಹೇಳಿದರು,
ಸದರಿ ನೇಮಕಾತಿಯನ್ನು ಕಾಂಗ್ರೆಸ್ ಸಹ ಖಂಡಿಸಿ, ಅಸ್ಥಾನಾ ನೇಮಕಾತಿ ಸುಪ್ರೀಮ್ ಕೋರ್ಟ್​ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದ್ದು, ಸರ್ಕಾರದ ನಿರ್ಧಾರ ಕ್ವಿಡ್ ಪ್ರೊ ಕೊ (ಲಾಭದ ಉದ್ದೇಶವಿಟ್ಟುಕೊಂಡು ಮಾಡುವ ಸಹಾಯ) ಅಗಿದೆಯಾ ಅಂತ ಪ್ರಶ್ನಿಸಿದೆ.

‘ಇದು ಕೇವಲ ಇಂಟರ್-ಕೇಡರ್ ನೇಮಕಾತಿ ಆಗಿರದೆ, ಸುಪ್ರೀಮ್ ಕೋರ್ಟ್ ಆದೇಶ ಮತ್ತು ದೇಶದ ಕಾನೂನು ವ್ಯವಸ್ಥೆ ವಿರುದ್ಧ ಕೇಂದ್ರ ಸರ್ಕಾರ ಹೊಂದಿರುವ ದಿವ್ಯ ನಿರ್ಲಕ್ಷ್ಯವನ್ನು ಸೂಚಿಸುತ್ತದೆ,’ ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.

ಎರಡು ತಿಂಗಳು ಹಿಂದೆ, ಸಿಬಿಐ ಮುಖ್ಯಸ್ಥನ ಹುದ್ದೆಗೆ ಅಸ್ಥಾನಾ ಹೆಸರು ಪ್ರಸ್ತಾಪಗೊಂಡಾಗ ಅವರು ಇಷ್ಟರಲ್ಲೇ ನಿವೃತ್ತಿ ಹೊಂದಲಿದ್ದಾರೆಂಬ ಕಾರಣಕ್ಕೆ ತಿರಸ್ಕೃತಗೊಂಡ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಈ ನಾಯಕರು ಸುಪ್ರೀಮ್ ಕೋರ್ಷಿನ ಆದೇಶವನ್ನು ಉಲ್ಲೇಖಿಸುತ್ತಿದ್ದಾರೆ.

ಸಿಬಿಐ ಮುಖ್ಯಸ್ಥನ ಆಯ್ಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸಮಿತಿ ಸಭೆ ನಡೆದಾಗ ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎನ್​ ವಿ ರಮಣ ಅವರು, ಆರು ತಿಂಗಳಿಗಿಂತ ಕಡಿಮೆ ಸೇವೆ ಬಾಕಿಯಿರುವವರನ್ನು ಪೊಲೀಸ್​ ಮುಖ್ಯಸ್ಥನ ಹುದ್ದೆಗಳಿಗೆ ಪರಿಗಣಿಸಬಾರದೆಂಬ ಸುಪ್ರೀಮ್ ಕೋರ್ಟಿನ ಆದೇಶವನ್ನು ಉಲ್ಲೇಖಿಸಿದ್ದರು.

ಅವರು ಉಲ್ಲೇಖಿಸಿದ ಆದೇಶದಿಂದ ಸರ್ಕಾರ ಶಾರ್ಟ್​ಲಿಸ್ಟ್​ ಮಾಡಿಕೊಂಡಿದ್ದ ಹೆಸರುಗಳಲ್ಲಿ, ಜುಲೈ 31ಕ್ಕೆ ನಿವೃತ್ತರಾಗಲಿದ್ದ ಅಸ್ಥಾನಾ ಅವರ ಹೆಸರೂ ಸೇರಿದಂತೆ ಇಬ್ಬರ ಹೆಸರುಗಳನ್ನು ಕಡೆಗಣಿಸಲಾಗಿತ್ತು.

ಇದನ್ನೂ ಓದಿ: ನಿವೃತ್ತಿಗೆ ಮೂರೇ ದಿನ ಬಾಕಿ ಇರುವಾಗ ದೆಹಲಿ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ರಾಕೇಶ್ ಅಸ್ತಾನಾ !