ಹೈದರಾಬಾದ್, ಮಾರ್ಚ್ 1: ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಮಾತಿನ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ ನಲ್ಲಿ ಬಂದ ಸೂಪರ್ ಹಿಟ್ ಸಿನಿಮಾ ‘ಅತಡು’ ನೆನಪಿದೆಯಾ..? ಸಿಎಂ ಹುದ್ದೆಗಾಗಿ ರಾಜಕೀಯ ನಾಯಕನೊಬ್ಬನ ಸೆಲ್ಫ್ ಮರ್ಡರ್ (Self Murder) ಪ್ಲಾನ್ ಸುತ್ತ ಕಥೆ ಸುತ್ತುತ್ತದೆ. ವಿರೋಧ ಪಕ್ಷದ ನಾಯಕ ಶಿವಾ ರೆಡ್ಡಿ (ಸಯಾಜಿ ಶಿಂಧೆ) ತನ್ನ ಮೇಲೆ ಕೊಲೆ ಯತ್ನ ನಡೆಯುತ್ತದೆ. ಆದರೆ ತಾನು ಸಾಯಬಾರದು. ಹೀಗೆ ಮಾಡಿದರೆ ಜನರ ಅನುಕಂಪದ ಮತಗಳು ಸಿಗುತ್ತವೆ ಎಂದು ತನ್ನ ಹಿಂಬಾಲಕ ಬಾಜಿ ರೆಡ್ಡಿ (ಕೋಟಾ ಶ್ರೀನಿವಾಸ ರಾವ್) ಮತ್ತು ಮತ್ತೊಬ್ಬ ಸ್ನೇಹಿತ ಫಾರೂಕ್ (ಪೋಸಾನಿ ಕೃಷ್ಣಮುರಳಿ) ಜೊತೆಗೂಡಿ ಚುನಾವಣೆ ಗೆಲ್ಲಲು ಯೋಜನೆ ರೂಪಿಸುತ್ತಾನೆ. ಆದರೆ ಬಾಜಿ ರೆಡ್ಡಿ ತನ್ನ ಪ್ಲಾನ್ ಬದಲಿಸಿ ಪಕ್ಕಾ ಯೋಜನೆಯೊಂದಿಗೆ ಶಿವಾ ರೆಡ್ಡಿಯನ್ನು ಕೊಲೆ ಮಾಡುತ್ತಾನೆ. ಟ್ವಿಸ್ಟ್‌ಗಳಿಂದು ಸಾಗುವ ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಆದರೆ, ಆ ಸಿನಿಮಾವನ್ನೇ ಮಾದರಿಯಾಗಿಸಿಕೊಂಡು ಹೈದರಾಬಾದ್ (Hyderabad) ನಗರದ ಬಿಜೆಪಿಯ ಒಬ್ಬ ಯುವ ಮುಖಂಡ ನಿಜ ಜೀವನದಲ್ಲಿ ಇಂತಹುದೇ ಸೆಲ್ಫ್ ಮರ್ಡರ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಚಿತ್ರ ನಿರ್ಮಾಪಕ ಕಮ್ ಬಿಜೆಪಿ ನಾಯಕನ (Telangana BJP Leader Uday Bhaskar Goud) ಈ ಸಿನಿಮೀಯ ಆತ್ಮಹತ್ಯಾ ಯೋಜನೆ ಮೂಲಕ್ಕೇ ಮುಳುಗುನೀರು ತಂದಿದೆ. ಪರಿಣಾಮವಾಗಿ, ಅವರು ಊಹೆಗೂ ಸಿಲುಕದ ರೀತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ನಿಜವಾಗಿಯೂ ಏನಾಯಿತು ಅಂದರೆ..
ರಾಷ್ಟ್ರೀಯ ಹಿಂದೂ ಪ್ರಚಾರ ಸಮಿತಿಯ ಸದಸ್ಯರು, ಬಿಜೆಪಿ ರಾಜ್ಯ ಸ್ವಚ್ಛ ಭಾರತ ಅಭಿಯಾನದ ಸಂಚಾಲಕ ಮತ್ತು ಚಲನಚಿತ್ರ ನಿರ್ಮಾಪಕ ಉದಯ್ ಭಾಸ್ಕರ್ ಗೌಡ್ ಅವರ ಮೇಲೆ ಕಳೆದ ತಿಂಗಳು (ಫೆಬ್ರವರಿ 24) ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದರು. ಈ ದಾಳಿಯಲ್ಲಿ ಉದಯಭಾಸ್ಕರ್ ಗೌಡ್ ಅವರಿಗೆ ಚಾಕು ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ನಂತರ, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆ ಬಳಿಕ ಉಪ್ಪಳ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಕೊಲೆಗೆ ಯತ್ನ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ. ಉದಯಭಾಸ್ಕರ್ ಗೌಡ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು.. ಫೀಲ್ಡಿಗಿಳಿದಿದ್ದಾರೆ. ಬಿಜೆಪಿ ಮುಖಂಡನ ಮೇಲಿನ ಹಲ್ಲೆಯ ಸತ್ಯಾಸತ್ಯತೆ ತನಿಖೆ ನಡೆದಿದೆ.
ಸಂಪೂರ್ಣ ಫ್ಲಾಪ್ ಆದ ಸೆಲ್ಫ್ ಮರ್ಡರ್ ಯೋಜನೆ
ಉದಯ್ ಭಾಸ್ಕರ್ ಹತ್ಯೆ ಯತ್ನದ ಮಾಸ್ಟರ್ ಮೈಂಡ್ ಸ್ವತಃ ಆತನೇ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ತನ್ನ ಕೊಲೆಗೆ ತಾನೇ ಯೋಜನೆ ರೂಪಿಸಿ, ತನ್ನ ಮೇಲೆ ಹತ್ಯಾ ಯತ್ನ ನಡೆಸಲಾಗಿದೆ ಎಂದು ಉದಯ್ ಭಾಸ್ಕರ್ ದೂರು ನೀಡಿದ್ದನ್ನು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ. ಬೋಡುಪ್ಪಲ್ ನಲ್ಲಿ ನೆಲೆಸಿರುವ ಭಾಸ್ಕರ್ ಗೌಡ್ ಸಿನಿಮಾ ನಿರ್ಮಾಪಕರಾಗಿ, ಬಿಜೆಪಿ ಮುಖಂಡರಾಗಿ ಉತ್ತಮ ಹೆಸರು ಗಳಿಸಿದ್ದಾರೆ.
ಭಾಸ್ಕರ್ ಈಗಾಗಲೇ ಸಮಾಜದಲ್ಲಿ ಸ್ವಲ್ಪ ಪ್ರಭಾವ ಇದ್ದುದ್ದರಿಂದ ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ಭಾಸ್ಕರ್ ಗೌಡ್ ಮನಸು ಮಾಡಿದ್ದಾನೆ. ಅದರಿಂದ ತನ್ನ ಗೌರವ ಪ್ರತಿಷ್ಠೆ ಹೆಚ್ಚಾಗಲಿದೆ ಎಂದು ಎಣಿಸಿದ್ದಾನೆ. ಮತ್ತು ಅವನೊಂದಿಗೆ ಇಬ್ಬರು ಗನ್‌ಮೆನ್‌ಗಳಿದ್ದರೆ ಎಲ್ಲರೂ ಅವನನ್ನು ಗೌರವಿಸುತ್ತಾರೆ ಎಂದು ಆತ ಭ್ರಮಿಸಿದ್ದಾನೆ. ಆದರೆ ಪೊಲೀಸ್ ಇಲಾಖೆ ವತಿಯಿಂದ ಗನ್ ಮ್ಯಾನ್ ಗಳನ್ನು ಪಡೆಯಲು ತನ್ನ ಜೀವಕ್ಕೆ ಅಪಾಯವಿದೆ ಎಂದು ಸಾಬೀತುಪಡಿಸಲು ಕತೆಕಟ್ಟಲು ಆಲೋಚಿಸಿದ್ದಾನೆ. ಅದು ಸಕ್ಸಸ್ ಆದರೆ ಪೊಲೀಸರೇ ತನಗೆ ಬಂದೂಕುಧಾರಿಗಳೊಂದಿಗೆ ಭದ್ರತೆ ಒದಗಿಸುತ್ತಾರೆ ಎಂದೂ ಪರಿಭಾವಿಸಿದ್ದಾನೆ.
ಹೇಳಿಕೇಳಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಉದಯ್ ಭಾಸ್ಕರ್ ಸಿನಿಮಾ ರೇಂಜ್ ನಲ್ಲಿ ತನ್ನ ಸೆಲ್ಫ್ ಮರ್ಡರ್ಗೆ ಪ್ಲಾನ್ ಹಾಕಿದ್ದಾರೆ. ಯೋಜನೆಯ ಪ್ರಕಾರ, ಫೆಬ್ರವರಿ 24 ರಂದು ಉಪ್ಪಲ್ ಭಗಾಯತ್ ಬಳಿ ಮರ್ಡರ್ ಯೋಜನೆಯನ್ನು ಕಾರ್ಯಗತಗೊಳಿಸಲಲು ಅಣಿಯಾಗಿದ್ದಾರೆ. ಇದಕ್ಕಾಗಿ ಭಾಸ್ಕರ್ ಗೌಡ್ ಎರಡೂವರೆ ಲಕ್ಷ ರೂ. ವ್ಯವಹಾರ ನಡೆದಿರುವುದು ಸಹ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ವಿಚಾರದಲ್ಲಿ ಅವಳಿ ನಗರದ ಪಿಎಸ್‌ಸಿಗಳಲ್ಲಿ 7 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಬಂದೂಕುಧಾರಿ ಆಪ್ತ ರಕ್ಷಕರನ್ನು ಪಡೆಯುವುದಕ್ಕಾಗಿ ಆಡಿದ್ದ ನಾಟಕ ಬೆಳಕಿಗೆ ಬಂದ ನಂತರ ಪೊಲೀಸರು ಭಾಸ್ಕರ್ ಗೌಡ್ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ. ಯೋಜನೆಗೆ ಬಳಸಿದ್ದ ಇನ್ನೋವಾ ವಾಹನ, ಎರಡು ದ್ವಿಚಕ್ರ ವಾಹನ ಹಾಗೂ 2 ಲಕ್ಷ ರೂ. ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಲ್ಕಾಜಿಗಿರಿ ಡಿಸಿಪಿ ಪದ್ಮಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.