ದೆಹಲಿ: ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್ಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗಾಗಿ ನಟ ದೀಪ್ ಸಿಂಗ್ ಮತ್ತು ರೈತ ನಾಯಕ ಬಲ್ದೇವ್ ಸಿಂಗ್ ಅವರನ್ನು ಸೇರಿ 40 ಜನರಿಗೆ ರಾಷ್ಟ್ರೀಯ ತನಿಖಾ ದಳ ಸಮನ್ಸ್ ಜಾರಿಗೊಳಿಸದೆ. ಇಂದು ರಾಷ್ಟ್ರೀಯ ತನಿಖಾ ದಳದ ಮುಖ್ಯ ಕಚೇರಿಗೆ ಹಾಜರಾಗಲು ಸೂಚಿಸಲಾಗಿದೆ.
ದೆಹಲಿ ಚಲೋ ಹೋರಾಟ ನಿರತ ರೈತರಿಗೆ ಸಮನ್ಸ್ ಜಾರಿಮಾಡಿರುವುದು ಸಹಜವಾಗಿ ರೈತ ಒಕ್ಕೂಟಗಳ ಆಕ್ರೋಶಕ್ಕೆ ಕಾರಣವಾಗಿದೆ. ಶಿರೋಮಣಿ ಅಕಾಲಿದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್, ‘ದೆಹಲಿ ಚಲೋ ಹತ್ತಿಕ್ಕಲು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರೈತ ಚಳುವಳಿಕಾರರು ದೇಶ ವಿರೋಧಿಗಳಲ್ಲ, ಅವರನ್ನು ದೇಶ ವಿರೋಧಿಗಳೆಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
Strongly condemn Centre's attempts to intimidate farmer leaders & supporters of #KisanAndolan by calling them for questioning by #NIA & ED. They aren't anti-nationals. And after failure of talks for the 9th time, it's absolutely clear that GOI is only trying to tire out farmers. pic.twitter.com/3x5T8VNdph
— Sukhbir Singh Badal (@officeofssbadal) January 16, 2021
ಅಮೆರಿಕ ಮೂಲದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆ ಖಲಿಸ್ತಾನ ಪರ ಹೋರಾಟದಲ್ಲಿ ಭಾಗಿಯಾದ ಆರೋಪವಿದೆ. ಸುಪ್ರೀಂ ಕೋರ್ಟ್ ಸಹ ದೆಹಲಿ ಚಲೋದಲ್ಲಿ ದೇಶ ವಿರೋಧಿ ಸಂಘಟನೆ ಭಾಗಿಯಾಗಿದೆಯೇ ಎಂದು ಇತ್ತೀಚಿಗೆ ಪ್ರಶ್ನಿಸಿ ರೈತ ಸಂಘಟನೆಗಳಿಗೆ ಸ್ಪಷ್ಟನೆ ನೀಡಲು ಸೂಚಿಸಿತ್ತು.
ಈಗಿನ ಸದಸ್ಯರು ತಜ್ಞರ ಸಮಿತಿಗೆ ಬೇಡ.. ಹೊಸ ಸದಸ್ಯರನ್ನು ನೇಮಿಸಿ: ಸುಪ್ರೀಂ ಕೋರ್ಟ್ಗೆ ರೈತ ಸಂಘಟನೆ ಮನವಿ
Published On - 11:26 am, Sun, 17 January 21