ಏಕತಾ ಪ್ರತಿಮೆಯೆಡೆಗೆ ತೆರಳುವ 8 ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ
ದೇಶದ ವಿವಿಧ ಮೂಲೆಗಳಿಂದ ಒಂದೇ ಸ್ಥಳಕ್ಕೆ ರೈಲು ಸೇವೆ ಆರಂಭವಾಗಿದೆ. ರೈಲ್ವೆ ಇತಿಹಾಸದಲ್ಲಿ ಈ ರೀತಿಯ ಯೋಜನೆಗೆ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ. ಕೆವಾಡಿಯಾ ಪ್ರವಾಸಿಗರ ತಾಣವಾಗಿ ಹೊರಹೊಮ್ಮುತ್ತಿದೆ. ಏಕತಾ ಪ್ರತಿಮೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದರು.
ಗುಜರಾತ್: ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಏಕತಾ ಪ್ರತಿಮೆ ಇರುವ ಗುಜರಾತ್‌ನ ಕೆವಾಡಿಯಾಗೆ ತೆರಳುವ 8 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 8 ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ವಿವಿಧ ಮೂಲೆಗಳಿಂದ ಒಂದೇ ಸ್ಥಳಕ್ಕೆ ರೈಲು ಸೇವೆ ಆರಂಭವಾಗಿದೆ. ರೈಲ್ವೆ ಇತಿಹಾಸದಲ್ಲಿ ಈ ರೀತಿಯ ಯೋಜನೆಗೆ ಮೊದಲ ಬಾರಿಗೆ ಚಾಲನೆ ನೀಡಲಾಗಿದೆ. ಕೆವಾಡಿಯಾ ಪ್ರವಾಸಿಗರ ತಾಣವಾಗಿ ಹೊರಹೊಮ್ಮುತ್ತಿದೆ. ಏಕತಾ ಪ್ರತಿಮೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದರು.
ರೈಲ್ವೆ ಯೋಜನೆ ಕೇವಲ ಪ್ರವಾಸಿಗರಿಗೆ ಅನುಕೂಲವಾಗಲ್ಲ. ಬದಲಿಗೆ ಕೆವಾಡಿಯಾದ ಬುಡಕಟ್ಟು ಜನಾಂಗಕ್ಕೂ ಅನುಕೂಲವಾಗಲಿದೆ. ಬುಡಕಟ್ಟು ಜನಾಂಗದ ಜೀವನವನ್ನು ಸಹ ಬದಲಿಸಲಿದೆ. ಅಲ್ಲದೆ ಕೆವಾಡಿಯಾಗೆ ಅನೇಕ ಸೌಲಭ್ಯಗಳನ್ನು ತರಲಾಗಿದೆ. ಆದಿವಾಸಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವುದು ಸಹ ಇದರ ಒಂದು ಭಾಗವಾಗಿದೆ.
ಏಕತಾ ಪ್ರತಿಮೆ ನೋಡಲು ಬಂದ ಪ್ರವಾಸಿಗರಿಂದ ಸಂಗ್ರಹಿಸಿದ್ದ ಟಿಕೆಟ್ ಹಣ ದುರುಪಯೋಗ
Published On - 12:26 pm, Sun, 17 January 21