Himanta Biswa Sarma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರಿಗೆ ಖಲಿಸ್ತಾನಿ ಕಿಡಿಗೇಡಿಗಳಿಂದ ಬೆದರಿಕೆ

|

Updated on: Apr 02, 2023 | 9:42 PM

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್​ನಿಂದ ಆಡಿಯೋ ಸಂದೇಶದ ಮೂಲಕ ಬೆದರಿಕೆ ಹಾಕಲಾಗಿದೆ. ಸಿಖ್ಖರನ್ನು ಹಿಂಸಿಸಿ ಕಿರುಕುಳ ನೀಡಲು ಹೋದರೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.

Himanta Biswa Sarma: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರಿಗೆ ಖಲಿಸ್ತಾನಿ ಕಿಡಿಗೇಡಿಗಳಿಂದ ಬೆದರಿಕೆ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾರಿಗೆ ಖಲಿಸ್ತಾನಿ ಕಿಡಿಗೇಡಿಗಳಿಂದ ಬೆದರಿಕೆ
Follow us on

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರಿಗೆ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ (Khalistani outfit) ಸಿಖ್ಸ್ ಫಾರ್ ಜಸ್ಟಿಸ್​ನಿಂದ ಆಡಿಯೋ ಸಂದೇಶದ ರೂಪದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಕೂಡಲೇ ಎಚ್ಚೆತ್ತಿರುವ ಅಸ್ಸಾಂ ಪೊಲೀಸ್ ಇಲಾಖೆ, ಆಡಿಯೋ ಕ್ಲಿಪ್ ಪರಿಶೀಲಿಸುತ್ತಿದ್ದು, ಅಲರ್ಟ್ ಆಗಿರುವಂತೆ ಎಲ್ಲಾ ಜಿಲ್ಲೆಗಳ ಪೊಲೀಸರಿಗೂ ಎಚ್ಚರಿಕೆ ನೀಡಿದೆ. ಉದ್ದೇಶಿತ ಆಡಿಯೊ ಕ್ಲಿಪ್‌ನಲ್ಲಿ, ತಾನು ಸ್ಪೀಕರ್ ಸಿಖ್ ಫಾರ್ ಜಸ್ಟಿಸ್‌ನ (Sikh for Justice) ಗುರುಪತ್ವಾನ್ ಸಿಂಗ್ ಪನ್ನುನ್ ಎಂದು ಹೇಳಿಕೊಂಡಿದ್ದಾನೆ. ಅಸ್ಸಾಂ ಜೈಲಿನಲ್ಲಿರುವ ಅಮೃತಪಾಲ್ ಸಿಂಗ್​ನ ಸಹಚರರಿಗೆ ಅಸ್ಸಾಂ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾನೆ.

“ಈ ಸಂದೇಶವು ಅಸ್ಸಾಂ ಸಿಎಂ ಹಿಮಂತ ಶರ್ಮಾ ಅವರಿಗೆ ಆಗಿದೆ. ನಿಮ್ಮ ಸರ್ಕಾರವು ಅಸ್ಸಾಂನಲ್ಲಿ ಖಲಿಸ್ತಾನ್ ಪರ ಸಿಖ್ಖರಿಗೆ ಕಿರುಕುಳ ನೀಡುತ್ತಿದೆ ಮತ್ತು ಚಿತ್ರಹಿಂಸೆ ನೀಡುತ್ತಿದೆ. ಜೊತೆಗೆ ಜೈಲಿನಲ್ಲಿರುವವರನ್ನೂ ಹಿಂಸಿಸುತ್ತಿದೆ. ಎಚ್ಚರಿಕೆಯಿಂದ ಆಲಿಸಿ ಸಿಎಂ ಶರ್ಮಾ, ಖಲಿಸ್ತಾನ್ ಪರ ಸಿಖ್ಖರು ಮತ್ತು ಭಾರತೀಯ ಆಡಳಿತದ ನಡುವಿನ ಹೋರಾಟ. ಈ ವಿಚಾರದಲ್ಲಿ ತಲೆಹಾಕಬೇಡಿ” ಎಂದು ಹೇಳಿದ್ದಾನೆ.

ಅಲ್ಲದೆ, “ನಾವು ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯ ಶಾಂತಿಯುತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಭಾರತದ ಆಕ್ರಮಣದಿಂದ ಪಂಜಾಬ್ ಅನ್ನು ವಿಮೋಚನೆಗಾಗಿ ಪ್ರಯತ್ನಿಸುತ್ತಿದ್ದೇವೆ. ಶರ್ಮಾ, ನಿಮ್ಮ ಸರ್ಕಾರವು ಸಿಖ್ಖರನ್ನು ಹಿಂಸಿಸಿ ಕಿರುಕುಳ ನೀಡಲು ಹೋದರೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುವುದು”ಎಂದು ಆಡಿಯೋದಲ್ಲಿ ಹೇಳಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗುರ್ಪತ್ವಾನ್ ಸಿಂಗ್ ಪನ್ನುನ್ ಯುಎಸ್ ಮೂಲದ ಸಿಖ್ಸ್ ಫಾರ್ ಜಸ್ಟಿಸ್ ಸಂಸ್ಥಾಪಕರಲ್ಲಿ ಒಬ್ಬ. ಆತನನ್ನು ಯುಎಪಿಎ ಅಡಿಯಲ್ಲಿ ವೈಯಕ್ತಿಕ ಭಯೋತ್ಪಾದಕ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ: Amritpal Singh: ಖಲಿಸ್ತಾನಿ ಬೆಂಬಲಿಗ ಅಮೃತ್​ಪಾಲ್​ಸಿಂಗ್ ಯೂಟ್ಯೂಬ್​ ಲೈವ್​ ಬಂದು ಹೇಳಿದ್ದೇನು?

ಪಂಜಾಬ್ ಸರ್ಕಾರವು ಮಾರ್ಚ್ 18 ರಂದು ವಾರಿಸ್ ಪಂಜಾಬ್ ದೇ ಮತ್ತು ಅದರ ಮುಖ್ಯಸ್ಥ ಅಮೃತಪಾಲ್ ಸಿಂಗ್ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಅಂದಿನಿಂದ ಅಮೃತಪಾಲ್ ಸಿಂಗ್ ತಮ್ಮ ಅನುಯಾಯಿಗಳಿಗಾಗಿ ಕೆಲವು ವೀಡಿಯೊ ಹೇಳಿಕೆಗಳನ್ನು ನೀಡುತ್ತಿದ್ದರೂ ಪೊಲೀಸರ ಕಣ್ಣಿಗೆ ಬೀಳದೆ ತಲೆಮರೆಸಿಕೊಂಡಿದ್ದ. ಕಾರ್ಯಾಚರಣೆಯಲ್ಲಿ ಬಂಧಿತರಾದ ಕೆಲವು ಸಹಚರರನ್ನು ಅಸ್ಸಾಂಗೆ ಕರೆದೊಯ್ಯಲಾಯಿತು. ಅಮೃತಪಾಲ್ ಶರಣಾಗುತ್ತಾನೆ ಎಂಬ ಊಹಾಪೋಹವಿತ್ತು, ಆದರೆ ಇನ್ನೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ.

ಅಸ್ಸಾಂ ಸಿಎಂಗೆ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ಹೊರಬಿದ್ದ ಬಳಿಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಸ್ಸಾಂ ಡಿಜಿಪಿ ತಿಳಿಸಿದ್ದಾರೆ. “ಮುಖ್ಯಮಂತ್ರಿಯವರ ಭದ್ರತಾ ಘಟಕವು ಎಚ್ಚರಿಕೆಯಿಂದ ಇದೆ. ಜಾಗತಿಕ ವಿದ್ಯಮಾನಗಳ ದೃಷ್ಟಿಯಿಂದ, ಬೆದರಿಕೆಯನ್ನು ಅಸ್ಸಾಂ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ” ಎಂದು ಅಸ್ಸಾಂ ಡಿಜಿಪಿ ಜಿಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:42 pm, Sun, 2 April 23