ಅಮೆರಿಕದಲ್ಲಿ ಪ್ರಧಾನಿ ಮೋದಿಯನ್ನು ನಿಂದಿಸಿ, ಭಾರತೀಯ ಪತ್ರಕರ್ತರ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ಹಲ್ಲೆ
ಪಂಜಾಬ್ನಲ್ಲಿ ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ ವಿರುದ್ಧ ಶೋಧ ಕಾರ್ಯಾಚರಣೆ ಶುರುವಾದ ವಿಶ್ವಾದ್ಯಂತ ವಾಸಿಸುವ ಖಲಿಸ್ತಾನಿ ಬೆಂಬಲಿಗರು ಭಯಭೀತರಾಗಿದ್ದಾರೆ.
ಪಂಜಾಬ್ನಲ್ಲಿ ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ ವಿರುದ್ಧ ಶೋಧ ಕಾರ್ಯಾಚರಣೆ ಶುರುವಾದ ವಿಶ್ವಾದ್ಯಂತ ವಾಸಿಸುವ ಖಲಿಸ್ತಾನಿ ಬೆಂಬಲಿಗರು ಭಯಭೀತರಾಗಿದ್ದಾರೆ. ಅಮೆರಿಕದಲ್ಲಿರುವ ಭಾರತದ ದೂತಾವಾಸ ಹಾಗೂ ಬ್ರಿಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಅಮೆರಿಕದಲ್ಲಿ ಭಾರತೀಯ ಪತ್ರಕರ್ತ ಲಲಿತ್ ಕೆ ಝಾ ಅವರು ಖಲಿಸ್ತಾನಿ ಬೆಂಬಲಗರ ರ್ಯಾಲಿ ವೇಳೆ ಪ್ರಶ್ನೆಗಳನ್ನು ಕೇಳಿದಾಗ ಪ್ರಧಾನಿ ಮೋದಿಯವರನ್ನು ನಿಂದಿಸಲು ಪ್ರಾರಂಭಿಸಿದ್ದರು. ನಂತರ ಮಾತಿನ ಚಕಮಕಿ ನಡೆಯಿತು, ಇ ವಿಡಿಯೋವನ್ನು ಪತ್ರಕರ್ತರೊಬ್ಬರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ರಾಯಭಾರಿ ಕಚೇರಿ ಎದುರು ಖಲಿಸ್ತಾನಿ ಬೆಂಬಲಿಗರು ರ್ಯಾಲಿ ನಡೆಸುತ್ತಿದ್ದರು, ಆ ವೇಳೆ ಪ್ರಶ್ನೆಗಳನ್ನು ಕೇಳಿದಾಗ ಅವರು ಕ್ಯಾಮರಾವನ್ನು ಆಫ್ ಮಾಡಿ ಎಂದು ಹೇಳತೊಡಗಿದರು. ಮಾರ್ಚ್ 25 ರಂದು ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಖಲಿಸ್ತಾನಿ ಬೆಂಬಲಿಗರು ಪತ್ರಕರ್ತರ ಕಿವಿಗೆ ಕೋಲುಗಳಿಂದ ಹೊಡೆದಿದ್ದಾರೆ. ಇದಾದ ತಕ್ಷಣ ಪೊಲೀಸ್ ಸಹಾಯವಾಣಿಗೆ ಕರೆ ಮಾಡಲಾಗಿದ್ದು, ತಕ್ಷಣ ಪೊಲೀಸರು ಆಗಮಿಸಿ ಅವರನ್ನು ರಕ್ಷಿಸಿದ್ದಾರೆ.
ಇದಕ್ಕೆ ಕೆಲವು ದಿನಗಳ ಮೊದಲು, ಖಲಿಸ್ತಾನ್ ಬೆಂಬಲಿಗರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತದ ದೂತಾವಾಸವನ್ನು ಧ್ವಂಸಗೊಳಿಸಿದರು. ಮಾರ್ಚ್ 20 ರಂದು ಪ್ರತ್ಯೇಕತಾವಾದಿಗಳು ರಾಯಭಾರಿ ರಾಯಭಾರಿ ಕಚೇರಿಯೊಳಗೆ ಪ್ರವೇಶಿಸಿ ಅಲ್ಲಿದ್ದ ತಡೆಗೋಡೆ ಮುರಿದರು.
ಈ ಸಂದರ್ಭದಲ್ಲಿ, ಅವರು ರಾಯಭಾರಿ ಕಚೇರಿಯನ್ನು ಹಾಳುಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದರು ಮತ್ತು ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರನ್ನು ನಿಂದಿಸಿದರು. ಪ್ರತಿಭಟನಾಕಾರರಲ್ಲಿ ಎಲ್ಲಾ ವಯೋಮಾನದವರಿದ್ದರು ಎಂದು ಲಲಿತ್ ಝಾ ಎಎನ್‌ಐಗೆ ತಿಳಿಸಿದ್ದಾರೆ.
ಅವರು ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಿದರು. ಅವರು DC-ಮೇರಿಲ್ಯಾಂಡ್-ವರ್ಜೀನಿಯಾ (DMV) ಪ್ರದೇಶದ ವಿವಿಧ ಭಾಗಗಳಿಂದ ಬಂದವರಾಗಿದ್ದರು, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಬಳಸಿ ಭಾಷಣ ಮಾಡುತ್ತಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ