Amritpal Singh: ಛತ್ರಿಯಿಂದ ಮುಖ ಮರೆ ಮಾಡಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್, ಸಿಸಿಟಿವಿಯಲ್ಲಿ ಸೆರೆ
ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್(Amritpal Singh) ಛತ್ರಿಯಿಂದ ಮುಖ ಮರೆ ಮಾಡಿಕೊಂಡು ಓಡಾಡುತ್ತಿದ್ದು, ಈ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಖಲಿಸ್ತಾನಿ ಬೆಂಬಲಿಗ ಅಮೃತಪಾಲ್ ಸಿಂಗ್(Amritpal Singh) ಛತ್ರಿಯಿಂದ ಮುಖ ಮರೆ ಮಾಡಿಕೊಂಡು ಓಡಾಡುತ್ತಿದ್ದು, ಈ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಲಿಸ್ತಾನ ಬೆಂಬಲಿಗ ಮತ್ತು ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಪಂಜಾಬ್‌ನಿಂದ ಪರಾರಿಯಾಗಿದ್ದಾರೆ. ಪಂಜಾಬ್ ತೊರೆದ ನಂತರ ಹರ್ಯಾಣದ ಶಹಾಬಾದ್ನಲ್ಲಿ ಮಹಿಳೆಯೊಬ್ಬರ ಮನೆಯಲ್ಲಿ ತಂಗಿದ್ದರು. ಪಂಜಾಬ್ ಮತ್ತು ಹರಿಯಾಣ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಲ್ಜಿತ್ ಕೌರ್ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ.
ಚಂಡೀಗಢದ ಪಂಜಾಬ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಂಜಾಬ್ ಪೊಲೀಸ್ ಐಜಿ (ಹೆಡ್ ಕ್ವಾರ್ಟರ್ಸ್) ಸುಖಚೈನ್ ಸಿಂಗ್ ಗಿಲ್ ಈ ಮಹತ್ವದ ಮಾಹಿತಿ ನೀಡಿದರು. ಅಮೃತಪಾಲ್ ಬಗ್ಗೆ ಪೊಲೀಸರು ಎಲ್ಲಾ ರಾಜ್ಯಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ ಎಂದು ಅವರು ಹೇಳಿದರು. ಆರೋಪಿಗಳನ್ನು ಬಂಧಿಸಲು ಹೊಸ ಛಾಯಾಚಿತ್ರಗಳನ್ನೂ ಕಳುಹಿಸಲಾಗುತ್ತಿದೆ ಎಂದರು.
ಇದರಲ್ಲಿ ಅವರು ಹರಿಯಾಣದ ಮಹಿಳೆಯೊಬ್ಬರ ಮನೆಯಿಂದ ಹೊರಹೋಗುತ್ತಿರುವುದು ಕಂಡುಬಂದಿದೆ. ಈ ಮಹಿಳೆ ಬಲ್ಜಿತ್ ಕೌರ್ ಆಗಿದ್ದು, ಮಾರ್ಚ್ 19 ರ ರಾತ್ರಿ ತನ್ನ ಮನೆಯಲ್ಲಿ ಅಮೃತಪಾಲ್ ಮತ್ತು ಪಾಪಲ್ಪ್ರೀತ್ ಸಿಂಗ್ ಅವರಿಗೆ ಆಶ್ರಯ ನೀಡಿದ್ದರು. ಅಮೃತಪಾಲ್ ತನ್ನ ಮುಖವನ್ನು ಮರೆಮಾಡಲು ಛತ್ರಿಯ ಬೆಂಬಲವನ್ನು ತೆಗೆದುಕೊಂಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುತ್ತದೆ.
#WATCH | CCTV visuals near the house in Kurukshetra, Haryana where Amritpal Singh stayed the night of 19th March. Punjab IGP says that Singh stayed here on the night of 19th & left the next day. One woman, Baljeet Kaur has been arrested in this regard.
(CCTV visuals from March… pic.twitter.com/KcouIO4JtQ
— ANI (@ANI) March 23, 2023
ಈ 34 ಸೆಕೆಂಡುಗಳ ಸಿಸಿಟಿವಿ ದೃಶ್ಯವನ್ನು ಪಂಜಾಬ್ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬ ಛತ್ರಿಯಿಂದ ಮುಖ ಮರೆ ಮಾಡಿಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು. ಈ ವ್ಯಕ್ತಿ ಅಮೃತಪಾಲ್ ಸಿಂಗ್ ಎಂದು ಹೇಳಲಾಗುತ್ತಿದೆ. ಅವರು ಬಿಳಿ ಶರ್ಟ್ ಮತ್ತು ಕಡು ನೀಲಿ ಜೀನ್ಸ್ ಧರಿಸಿದ್ದಾರೆ. ಈ ದೃಶ್ಯಾವಳಿ ಮಾರ್ಚ್ 20 ರಂದು ಮಧ್ಯಾಹ್ನ 12.18 ಕ್ಕೆ ಲಭ್ಯವಾಗಿರುವ ಫೂಟೇಜ್ ಇದಾಗಿದೆ.
ಪೊಲೀಸರು ಪರಾರಿಯಾಗಿರುವ ಅಮೃತ್ಪಾಲ್ ಸಿಂಗ್ ಭಾವಚಿತ್ರವನ್ನು ಎಲ್ಲೆಡೆ ಅಂಟಿಸಿದ್ದಾರೆ. ಈ ವ್ಯಕ್ತಿ ಕಂಡು ಬಂದರೆ ಕೂಡಲೇ ಮಾಹಿತಿ ನೀಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಮತ್ತು ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಅವರಿಗೆ ಕುರುಕ್ಷೇತ್ರ ಜಿಲ್ಲೆಯ ತನ್ನ ಮನೆಯಲ್ಲಿ ಆಶ್ರಯ ನೀಡಿದ ಆರೋಪದ ಮೇಲೆ ಬಲ್ಜಿತ್ ಕೌರ್ ಅವರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಶಹಬಾದ್ ಪ್ರದೇಶದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ