AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Glider Crash : ಧನ್​ಬಾದ್ ವಿಮಾನ ನಿಲ್ದಾಣದಿಂದ ಹಾರಿದ ಜಾಯ್ ಗ್ಲೈಡರ್ ಕೆಲವೇ ಕ್ಷಣಗಳಲ್ಲಿ ಪತನ, ಇಬ್ಬರಿಗೆ ಗಂಭೀರ ಗಾಯ

ಧನಬಾದ್‌ನ ಬರ್ವಡ್ಡಾ ವಿಮಾನ ನಿಲ್ದಾಣದ ಬಳಿ ಮನೆಯೊಂದರ ಮೇಲೆ ಖಾಸಗಿ ಜಾಯ್ ಗ್ಲೈಡರ್ ಪತನಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

Glider Crash : ಧನ್​ಬಾದ್ ವಿಮಾನ ನಿಲ್ದಾಣದಿಂದ ಹಾರಿದ ಜಾಯ್ ಗ್ಲೈಡರ್ ಕೆಲವೇ ಕ್ಷಣಗಳಲ್ಲಿ ಪತನ, ಇಬ್ಬರಿಗೆ ಗಂಭೀರ ಗಾಯ
ಜಾಯ್ ಗ್ಲೈಡರ್
ನಯನಾ ರಾಜೀವ್
|

Updated on: Mar 24, 2023 | 8:08 AM

Share

ಧನಬಾದ್‌ನ ಬರ್ವಡ್ಡಾ ವಿಮಾನ ನಿಲ್ದಾಣದ ಬಳಿ ಮನೆಯೊಂದರ ಮೇಲೆ ಖಾಸಗಿ ಜಾಯ್ ಗ್ಲೈಡರ್ ಪತನಗೊಂಡಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಇಬ್ಬರನ್ನೂ ನಗರದ ಏಷ್ಯನ್ ಜಲನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನ ನಿಲ್ದಾಣದಿಂದ ಗ್ಲೈಡರ್ ಟೇಕಾಫ್ ಆದ ಕೂಡಲೇ ತಾಂತ್ರಿಕ ಸಮಸ್ಯೆ ಉಂಟಾಗಿ ಸುಮಾರು 500 ಮೀಟರ್ ದೂರದಲ್ಲಿ ಬಿರ್ಸಾ ಮುಂಡಾ ಪಾರಕ್​ ಬಳಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ನೀಲೇಶ್ ಕುಮಾರ್ ಎಂಬುವವರ ಮನೆ ಮೇಲೆ ಗ್ಲೈಡರ್ ಬಿದ್ದ ಪರಿಣಾಮ ಗ್ಲೈಡರ್ ನಜ್ಜುಗುಜ್ಜಾಗಿದೆ.

ಈ ಗ್ಲೈಡರ್ ಪತನಗೊಂಡಿರುವ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ಬಂದ ತಕ್ಷಣ, ಜಿಲ್ಲಾಡಳಿತವು ಕಾರ್ಯಪ್ರವೃತ್ತವಾಗಿದೆ. ಪೊಲೀಸರು ಮತ್ತು ಆಡಳಿತ ಮಂಡಳಿ ಸ್ಥಳಕ್ಕೆ ಧಾವಿಸಿ ಸಂಪೂರ್ಣ ತನಿಖೆ ಆರಂಭಿಸಿದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರ ಗುಂಪು ಸ್ಥಳದಲ್ಲಿ ಜಮಾಯಿಸಿತ್ತು. ಗ್ಲೈಡರ್‌ನಲ್ಲಿ ಸಿಲುಕಿದ್ದ ಜನರನ್ನು ಹೊರತೆಗೆದ ಜನರು ಆಂಬ್ಯುಲೆನ್ಸ್ ಮೂಲಕ ಏಷ್ಯನ್ ಜಲನ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಮತ್ತಷ್ಟು ಓದಿ: Nepal Aircraft Crash: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ

ಸಂಜೆ 4.50 ರ ಸುಮಾರಿಗೆ ಬರ್ವಡ್ಡಾ ಏರ್‌ಸ್ಟ್ರಿಪ್‌ನಿಂದ ಟೇಕಾಫ್ ಆದ ನಂತರ ಜಾಯ್‌ರೈಡ್ ಗ್ಲೈಡರ್ ಕಟ್ಟಡಕ್ಕೆ ಅಪ್ಪಳಿಸಿತು ಎಂದು ಬಾರ್ಬಡ್ಡಾ ಪೊಲೀಸ್ ಠಾಣಾಧಿಕಾರಿ ಆಶಿಶ್ ಕುಮಾರ್ ಯಾದವ್ ಹೇಳಿದ್ದಾರೆ. ಪ್ರಯಾಣಿಕನನ್ನು ಪಾಟ್ನಾದ ಕುಶ್ ಸಿಂಗ್ (14) ಎಂದು ಗುರುತಿಸಲಾಗಿದ್ದು, ಆತ ತನ್ನ ತಾಯಿಯ ಚಿಕ್ಕಪ್ಪ ಪವನ್ ಸಿಂಗ್ ಅವರ ಧನಬಾದ್ ಮನೆಗೆ ಬಂದಿದ್ದರು.ಬಾರ್ವಡ್ಡಾ ಏರ್‌ಸ್ಟ್ರಿಪ್‌ನಿಂದ ಖಾಸಗಿ ಏಜೆನ್ಸಿ ನಡೆಸುತ್ತಿದ್ದ ಗ್ಲೈಡರ್‌ನಲ್ಲಿ ಬಾಲಕ ಜಾಯ್‌ರೈಡ್‌ಗೆ ತೆರಳಿದ್ದ.

ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜಾಯ್‌ರೈಡ್ ಗ್ಲೈಡರ್‌ನಲ್ಲಿ, ಕೇವಲ ಇಬ್ಬರು ವ್ಯಕ್ತಿಗಳು – ಒಬ್ಬ ಪೈಲಟ್ ಮತ್ತು ಒಬ್ಬ ಪ್ರಯಾಣಿಕನಿಗೆ ಅವಕಾಶ ಕಲ್ಪಿಸಬಹುದು. ಧನ್ಬಾದ್ ನಗರದ ಜನರು ವಿಮಾನ ಪ್ರಯಾಣವನ್ನು ಆನಂದಿಸಬಹುದು ಮತ್ತು ತಮ್ಮ ನಗರದ ನೋಟವನ್ನು ಆಕಾಶದಿಂದ ನೋಡಬಹುದು. ಈ ಹಿಂದೆಯೂ ಎರಡು ಬಾರಿ ಗ್ಲೈಡರ್ ಮೂಲಕ ಇಂತಹ ವೈಮಾನಿಕ ಪ್ರವಾಸಕ್ಕೆ ಜನರನ್ನು ಕರೆದೊಯ್ಯಲಾಗಿದೆ.

ಆದರೆ, ಈ ಬಾರಿ ಗ್ಲೈಡರ್ ಅಪ್ಪಳಿಸಿದ ಕಾರಣ ವೈಮಾನಿಕ ಪ್ರವಾಸ ಕೈಗೊಂಡು ನಗರದ ವೀಕ್ಷಣೆ ಸಾಧ್ಯವಾಗಿಲ್ಲ. ಸದ್ಯ, ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸದ್ಯ ಈ ಪ್ರಕರಣದ ತನಿಖೆಯನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಡೆಸಲಿದೆ.

ಇತ್ತೀಚಿಗೆ ಬಾಲಾಘಾಟ್‌ನಲ್ಲಿ ಚಾರ್ಟರ್ಡ್ ವಿಮಾನ ಅಪಘಾತಕ್ಕೀಡಾಗಿತ್ತು, ಕಿರ್ನಾಪುರ ಪ್ರದೇಶದ ಭಕ್ಕುಟೋಲಾ ಅರಣ್ಯದಲ್ಲಿ ಚಾರ್ಟರ್ಡ್ ವಿಮಾನದ ಅಪಘಾತ ಸಂಭವಿಸಿತ್ತು. ಈ ಚಾರ್ಟರ್ಡ್ ವಿಮಾನವು ಸುಮಾರು 15 ನಿಮಿಷಗಳ ಹಿಂದೆ ಬಿರ್ಸಿ ಏರ್‌ಕ್ರಾಫ್ಟ್‌ನಿಂದ ಟೇಕಾಫ್ ಆಗಿತ್ತು. ಪತನದ ನಂತರ ವಿಮಾನವು ಬೆಂಕಿಗೆ ಆಹುತಿಯಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಂಆಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್