ಫರ್ಸ್ಟ್‌ ಕ್ಲಾಸ್‌ ಪಾಸಾಗಿರುವ ಬಾಲಕಿಯರಿಗೆ ಸ್ಕೂಟರ್‌ ಗಿಫ್ಟ್‌ ನೀಡಲಿದೆ ಸರ್ಕಾರ!

| Updated By: ಸಾಧು ಶ್ರೀನಾಥ್​

Updated on: Aug 19, 2020 | 2:01 PM

ಗುವಾಹಟಿ: ಆಸ್ಸಾಂ ಸರ್ಕಾರ ರಾಜ್ಯದಲ್ಲಿನ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ನೂತನ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಇದರ ಪ್ರಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 22,000 ಸಾವಿರ ಬಾಲಕಿಯರಿಗೆ ಸ್ಕೂಟರ್‌ ನೀಡಲು ಮುಂದಾಗಿದೆ. ಕಲರ್ ಕಲರ್ ವಿಚ್ ಕಲರ್ ಡು ಯು ಚೂಸ್! ಹೌದು, ಆಸ್ಸಾಂ ಸರ್ಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 12 ಸಾವಿರ ಹೆಣ್ಣುಮಕ್ಕಳಿಗೆ ಸ್ಕೂಟರ್‌ ನೀಡಲಿದೆ. ಈ ಸಂಬಂಧ ಅದು ವೆಬ್‌ಸೈಟ್‌ ಒಂದನ್ನು ತೆರೆದಿದ್ದು, ಅರ್ಹ […]

ಫರ್ಸ್ಟ್‌ ಕ್ಲಾಸ್‌ ಪಾಸಾಗಿರುವ ಬಾಲಕಿಯರಿಗೆ ಸ್ಕೂಟರ್‌ ಗಿಫ್ಟ್‌ ನೀಡಲಿದೆ ಸರ್ಕಾರ!
Follow us on

ಗುವಾಹಟಿ: ಆಸ್ಸಾಂ ಸರ್ಕಾರ ರಾಜ್ಯದಲ್ಲಿನ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ನೂತನ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಇದರ ಪ್ರಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 22,000 ಸಾವಿರ ಬಾಲಕಿಯರಿಗೆ ಸ್ಕೂಟರ್‌ ನೀಡಲು ಮುಂದಾಗಿದೆ.

ಕಲರ್ ಕಲರ್ ವಿಚ್ ಕಲರ್ ಡು ಯು ಚೂಸ್!
ಹೌದು, ಆಸ್ಸಾಂ ಸರ್ಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 12 ಸಾವಿರ ಹೆಣ್ಣುಮಕ್ಕಳಿಗೆ ಸ್ಕೂಟರ್‌ ನೀಡಲಿದೆ. ಈ ಸಂಬಂಧ ಅದು ವೆಬ್‌ಸೈಟ್‌ ಒಂದನ್ನು ತೆರೆದಿದ್ದು, ಅರ್ಹ ಬಾಲಕಿಯರು ಈ ವೆಬ್‌ಸೈಟ್‌ನಲ್ಲಿ ತಮಗಿಷ್ಟದ ಕಲರ್‌ನ ಸ್ಕೂಟರ್‌ ಸೆಲೆಕ್ಟ್‌ ಮಾಡಲು ಅವಕಾಶ ನೀಡಿದೆ. ಹೀಗೆ ಬಾಲಕಿಯರು ಆಯ್ಕೆ ಮಾಡಿಕೊಂಡ ಸ್ಕೂಟರ್‌ ಅನ್ನು ಸರ್ಕಾರ ಅವರ ಮನೆಗೆ ತಲುಪಿಸಲಿದೆ.

ಆದ್ರೆ ಇದಕ್ಕಾಗಿ ಒಂದು ಷರತ್ತನ್ನು ಕೂಡಾ ಆಸ್ಸಾಂ ಸರ್ಕಾರ ಮುಂದಿಟ್ಟಿದೆ. ಸುಮಾರು 50ರಿಂದ 55 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕ್‌ ಸ್ಕೂಟರ್‌ ನೀಡ್ತಿರೋದ್ರಿಂದ, ಸ್ಕೂಟರ್‌ ಪಡೆದ ಬಾಲಕಿ ಕನಿಷ್ಠ ಮೂರು ವರ್ಷ ಆ ಸ್ಕೂಟರ್‌ ಅನ್ನು ಮಾರುವಂತಿಲ್ಲ. ಇದೇನೆ ಇರಲಿ ಬಾಲಕಿಯರಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ಆಸ್ಸಾಂ ಸರ್ಕಾರದ ಈ ನಿರ್ಧಾರ ನಿಜವಾಗಲೂ ಸ್ವಾಗತಾರ್ಹವೆ.

ಅಂದ ಹಾಗೆ ಕರ್ನಾಟಕ ಸರ್ಕಾರ ಈಗಾಗಲೇ ಹೈಸ್ಕೂಲ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರಿಗೆ ರಾಜ್ಯದಲ್ಲಿ ಮಧ್ಯಾಹ್ನದ ಊಟದ ಜೊತೆಗೆ, ಶಾಲೆಗೆ ಹೋಗಿ ಬರಲು ಸೈಕಲ್‌ ನೀಡುತ್ತಿರೋದನ್ನು ಸ್ಮರಿಸಬಹುದು.