ಗಡಿ ವಿವಾದ ಚರ್ಚೆಗೆಂದು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿ ಸಭೆ: ಸಮಿತಿ ವರದಿ ಸಲ್ಲಿಕೆ ಶೀಘ್ರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 06, 2021 | 7:08 PM

ಎರಡೂ ರಾಜ್ಯಗಳ ಸಂಪುಟ ದರ್ಜೆ ಸಚಿವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿ, ಅಂತರರಾಜ್ಯ ಗಡಿವಿವಾದವನ್ನು ಹಂತಹಂತವಾಗಿ ಪರಿಹರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಗಡಿ ವಿವಾದ ಚರ್ಚೆಗೆಂದು ಅಸ್ಸಾಂ, ಮೇಘಾಲಯ ಮುಖ್ಯಮಂತ್ರಿ ಸಭೆ: ಸಮಿತಿ ವರದಿ ಸಲ್ಲಿಕೆ ಶೀಘ್ರ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ
Follow us on

ಗುವಾಹತಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಶುಕ್ರವಾರ ಗುವಾಹತಿಯಲ್ಲಿ ಪರಸ್ಪರ ಭೇಟಿಯಾಗಿ ಅಂತರರಾಜ್ಯ ಗಡಿ ವಿವಾದದ ಬಗ್ಗೆ ಪರಸ್ಪರ ಚರ್ಚಿಸಿದರು. ಸಭೆಯ ನಂತರ ಇಬ್ಬರೂ ಮುಖ್ಯಮಂತ್ರಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಎರಡೂ ರಾಜ್ಯಗಳ ಸಂಪುಟ ದರ್ಜೆ ಸಚಿವರ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿ, ಅಂತರರಾಜ್ಯ ಗಡಿವಿವಾದವನ್ನು ಹಂತಹಂತವಾಗಿ ಪರಿಹರಿಸಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಮಿತಿಗಳು ಐತಿಹಾಸಿದ ವಿಚಾರಗಳು, ಸಂಸ್ಕೃತಿ ಮತ್ತು ಸುಗಮ ಆಡಳಿತಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ 30 ದಿನಗಳ ಒಳಗೆ ವರದಿ ಸಲ್ಲಿಸಲಿವೆ. ಅಸ್ಸಾಂ ರಾಜ್ಯದೊಂದಿಗೆ ಒಟ್ಟು 12 ವಿಚಾರಗಳಲ್ಲಿ ವಿವಾದವಿದೆ. ಈ ಪೈಕಿ 6 ಅಂಶಗಳ ಬಗ್ಗೆ ನಾವು ಇಂದಿನ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿಗೆ ವಿಸ್ತೃತ ವಿವರಣೆ ನೀಡಿದೆವು. ಒಟ್ಟು ಆರು ಪ್ರದೇಶಗಳಲ್ಲಿ ಮೂರು ವಿಚಾರಗಳ ಬಗ್ಗೆ ಬಿನ್ನಮತವಿದೆ. ಮೇಘಾಲಯ ಮತ್ತು ಅಸ್ಸಾಂ ರಾಜ್ಯಗಳ ತಲಾ ಮೂರು ಸಮಿತಿಗಳು ಈ ವಿಚಾರಗಳ ಬಗ್ಗೆ ಗಮನ ಹರಿಸಲಿವೆ ಎಂದು ಸಂಗ್ಮಾ ತಿಳಿಸಿದ್ದಾರೆ.

ತರಬರಿ, ಗಿಜಂಗ್, ಫಲಿಯಾ, ಬಕ್ಲಾಪುರ, ಪಿಲಿಂಗ್​​ಕಟ ಮತ್ತು ಖಾನಾಪಾರಾ ಪ್ರದೇಶಗಳ ವಿವಾದವನ್ನು ಮೊದಲ ಹಂತದಲ್ಲಿ ಪರಿಹರಿಲಾಗುವುದು. ಈ ಪ್ರದೇಶಗಳು ಅಸ್ಸಾಂನ ಕಚರ್, ಕಾಮರೂಪ್ ಮೆಟ್ರೊ ಮತ್ತು ಕಾಮರೂಪ್ ಗ್ರಾಮೀಣ ಜಿಲ್ಲೆಗಳು ಹಾಗೂ ಮೇಘಾಲಯದ ವೆಸ್ಟ್​ ಖಾಸಿ ಹಿಲ್ಸ್​, ರಿ ಭೋಯ್ ಮತ್ತು ಪೂರ್ವ ಜೈಂತಿಯಾ ಹಿಲ್ಸ್​ ಪ್ರದೇಶದಲ್ಲಿವೆ. ಈ ಪ್ರಯತ್ನದ ಮೂಲಕ ಗಡಿಯನ್ನು ಹೊಸದಾಗಿ ಬರೆಯಲು ಎರಡೂ ರಾಜ್ಯಗಳು ಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಒಂದು ವೇಳೆ ಗಡಿರೇಖೆಯನ್ನು ಮರು ರೂಪಿಸುವುದು ಅಗತ್ಯವಿದೆ ಎಂದಾದರೆ ಅದರ ಬಗ್ಗೆ ಸಂಸತ್ತಿಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

ಎರಡೂ ರಾಜ್ಯಗಳ ಸಂಪುಟ ಸಚಿವರ ಜೊತೆಗೆ ಹಿರಿಯ ಅಧಿಕಾರಿಗಳು ಸಮಿತಿಯ ಭಾಗವಾಗಿರುತ್ತಾರೆ ಎಂದು ಸಂಗ್ಮಾ ಹೇಳಿದರು. ವಿವಾದಾತ್ಮಕ ಪ್ರದೇಶಗಳಿಗೆ ಭೇಟಿ ನೀಡಲಿರುವ ಸಮಿತಿಯ ಸದಸ್ಯರು ಸ್ಥಳೀಯ ನಾಗರಿಕ ಸಮಿತಿ ಸದಸ್ಯರೊಂದಿಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಅಸ್ಸಾಂ ಮುಖ್ಯಮಂತ್ರಿಯೊಂದಿಗೆ ಭೇಟಿ ಕುರಿತು ಈ ಮೊದಲು ಟ್ವೀಟ್ ಮಾಡಿದ್ದ ಸಂಗ್ಮಾ ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ಸುದೀರ್ಘ ಗೆಳೆತನಕ್ಕೆ ಮತ್ತಷ್ಟು ಬಲ ತುಂಬುವ ಪ್ರಯತ್ನ ಇದು. ನಾವು ಹಲವು ವಿಚಾರಗಳ ಬಗ್ಗೆ ಸಮಾನ ನೆಲೆಯಲ್ಲಿ ಚರ್ಚಿಸಲಿದ್ದೇವೆ ಎಂದು ಹೇಳಿದರು.

ಮಿಝೋರಾಂ ಗಡಿಯಲ್ಲಿ ವಿವಾದವಿರುವ ಪ್ರದೇಶಗಳ ಬಗ್ಗೆ ಅಸ್ಸಾಂ ಗುರುವಾರ ಒಪ್ಪಂದ ಮಾಡಿಕೊಂಡು ಭದ್ರತಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಮೊದಲ ಸಭೆಯಲ್ಲಿಯೇ ಉಭಯ ರಾಜ್ಯಗಳು ಗಡಿಯಲ್ಲಿ ಶಾಂತಿ ಕಾಪಾಡಲು ಬದ್ಧತೆ ಪ್ರದರ್ಶಿಸಿದ್ದವು. ಕಳೆದ ವಾರ ಅಸ್ಸಾಂ-ಮಿಝೋರಾಂ ಗಡಿಯಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಆರು ಪೊಲೀಸರು ಮೃತಪಟ್ಟಿದ್ದರು. 41 ಮಂದಿ ಗಾಯಗೊಂಡಿದ್ದರು.

(Assam Meghalaya Chief Ministers meet to discuss border row created panels to solve issue)

ಇದನ್ನೂ ಓದಿ: ಗಡಿ ಸಂಘರ್ಷ: ಅಸ್ಸಾಂ ಅಧಿಕಾರಿಗಳ ವಿರುದ್ಧ ಎಫ್ಐಆರ್ ಹಿಂಪಡೆಯಲು ಮಿಜೋರಾಂ ನಿರ್ಧಾರ

ಇದನ್ನೂ ಓದಿ: ಗಡಿ ಸಂಘರ್ಷವನ್ನು ಅಸ್ಸಾಂ ಸಿಎಂ ಪ್ರತಿಷ್ಠೆಯ ವಿಷಯವನ್ನಾಗಿ ಪರಿಗಣಿಸಿದ್ದಾರೆ: ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್​ ಸಂಸದ

Published On - 7:06 pm, Fri, 6 August 21