ಅಸ್ಸಾಂ: ಎಸಿಎಸ್ ಅಧಿಕಾರಿ ನೂಪುರ್ ಮನೆಯಲ್ಲಿ 2 ಕೋಟಿ ರೂ. ನಗದು, ಚಿನ್ನಾಭರಣ ಪತ್ತೆ, ಭೂ ಹಗರಣದಲ್ಲಿ ಅರೆಸ್ಟ್​

ಭೂಹಗರಣದಲ್ಲಿ ಅಸ್ಸಾಂನ ಎಸಿಎಸ್ ಮಹಿಳಾ ಅಧಿಕಾರಿ ನೂಪುರ್ ಬೋರಾ ಅವರನ್ನು ಬಂಧಿಸಲಾಗಿದೆ. ಅವರ ಮನೆಯಲ್ಲಿ 2 ಕೋಟಿ ರೂ. ನಗದು, ಭಾರಿ ಚಿನ್ನಾಭರಣಗಳು ಪತ್ತೆಯಾಗಿವೆ. ಅವರನ್ನು ಬಾರ್ಪೇಟಾ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಅವರು ಹಿಂದೂ ಕುಟುಂಬಗಳ ಭೂಮಿಯನ್ನು ಮುಸ್ಲಿಮರಿಗೆ ಅಕ್ರಮವಾಗಿ ವರ್ಗಾಯಿಸಿದ್ದರು. ಇಷ್ಟೇ ಅಲ್ಲದೆ, ಅವರ ಮನೆಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಸ್ಸಾಂ: ಎಸಿಎಸ್ ಅಧಿಕಾರಿ ನೂಪುರ್ ಮನೆಯಲ್ಲಿ 2 ಕೋಟಿ ರೂ. ನಗದು, ಚಿನ್ನಾಭರಣ ಪತ್ತೆ, ಭೂ ಹಗರಣದಲ್ಲಿ ಅರೆಸ್ಟ್​
ನೂಪುರ್

Updated on: Sep 16, 2025 | 1:00 PM

ಅಸ್ಸಾಂ, ಸೆಪ್ಟೆಂಬರ್ 16: ಭೂಹಗರಣದಲ್ಲಿ ಅಸ್ಸಾಂನ ನಾಗರಿಕ ಸೇವೆ( ಎಸಿಎಸ್)ಗಳ ಮಹಿಳಾ ಅಧಿಕಾರಿ ನೂಪುರ್ ಬೋರಾ ಅವರನ್ನು ಬಂಧಿಸಲಾಗಿದೆ. ಅವರ ಮನೆಯಲ್ಲಿ 2 ಕೋಟಿ ರೂ. ನಗದು, ಭಾರಿ ಚಿನ್ನಾಭರಣಗಳು ಪತ್ತೆಯಾಗಿವೆ. ಅವರನ್ನು ಬಾರ್ಪೇಟಾ ಜಿಲ್ಲೆಯಲ್ಲಿ ನಿಯೋಜಿಸಲಾಗಿತ್ತು, ಅಲ್ಲಿ ಅವರು ಹಿಂದೂ ಕುಟುಂಬಗಳ ಭೂಮಿಯನ್ನು ಮುಸ್ಲಿಮರಿಗೆ ಅಕ್ರಮವಾಗಿ ವರ್ಗಾಯಿಸಿದ್ದರು. ಇಷ್ಟೇ ಅಲ್ಲದೆ, ಅವರ ಮನೆಯಿಂದ 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನ ಮತ್ತು ನೋಟುಗಳ ಬಂಡಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯದ ತನಿಖೆಗೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿಶೇಷ ತಂಡಕ್ಕೆ ಆದೇಶಿಸಿದ್ದಾರೆ.

ಸಾಮಾನ್ಯವಾಗಿ ನೀವು ಸರ್ಕಾರಿ ಅಧಿಕಾರಿಯಾಗಲು ಏಕೆ ಬಯಸುತ್ತೀರಿ ಎಂದು ಕೇಳಿದಾಗಿ ಆಕಾಂಕ್ಷಿಗಳು ನಾನು ದೇಶ ಮತ್ತು ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದೇ ಹೇಳುತ್ತಾರೆ. ಆದರೆ ಅದನ್ನು ಪಾಲಿಸುವವರ ಸಂಖ್ಯೆ ಕಡಿಮೆಯಾದಂತಿದೆ.

ನೂಪುರ್ ಬೋರಾ ಯಾರು?

ನೂಪುರ್ ಬೋರಾ 2019 ರ ಬ್ಯಾಚ್‌ನ ಎಸಿಎಸ್ ಅಧಿಕಾರಿ, ಅವರು ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಜನಿಸಿದರು. ಕಾಮರೂಪ ಜಿಲ್ಲೆಯ ಗೊರೊಯಿಮರಿ ಪ್ರದೇಶದಲ್ಲಿ ಅವರನ್ನು ಸರ್ಕಲ್ ಆಫೀಸರ್ ಆಗಿ ನೇಮಿಸಲಾಯಿತು. ನೂಪುರ್ ಗುವಾಹಟಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಇದರ ನಂತರ, ಅವರು ಕಾಟನ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ನಾಗರಿಕ ಸೇವೆಗೆ ಮೊದಲು, ನೂಪುರ್ ಬೋರಾ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದರು.

ಮತ್ತಷ್ಟು ಓದಿ: ಕೆಐಎಡಿಬಿ ಭೂ ಹಗರಣ: ಮಲ್ಲಿಕಾರ್ಜುನ ಖರ್ಗೆ ಮತ್ತು ಅಳಿಯನ ವಿರುದ್ಧ ಖಾಸಗಿ ದೂರು

ನೂಪುರ್ ಬೋರಾ ಅವರ ಆಡಳಿತಾತ್ಮಕ ವೃತ್ತಿಜೀವನವು ಕರ್ಬಿ ಆಂಗ್ಲಾಂಗ್‌ನಲ್ಲಿ ಸಹಾಯಕ ಆಯುಕ್ತರ ಹುದ್ದೆಯಿಂದ ಪ್ರಾರಂಭವಾಯಿತು. ಅವರು ಮಾರ್ಚ್ 2019 ರಿಂದ ಜೂನ್ 2023 ರವರೆಗೆ ಈ ಹುದ್ದೆಯನ್ನು ಅಲಂಕರಿಸಿದರು. ಇದರ ನಂತರ, ಜೂನ್ 2023 ರಲ್ಲಿ, ಅವರನ್ನು ಬಾರ್ಪೇಟಾದಲ್ಲಿ ವೃತ್ತ ಅಧಿಕಾರಿಯಾಗಿ ನೇಮಿಸಲಾಯಿತು. ಇಲ್ಲಿಂದ ಅವರನ್ನು ಕಾಮರೂಪಕ್ಕೆ ವರ್ಗಾಯಿಸಲಾಯಿತು.

ಭೂ ಹಗರಣ ಆರೋಪ
ಬಾರ್ಪೇಟಾದಲ್ಲಿ ನೂಪುರ್ ಅವರು ಕಾರ್ಯನಿರ್ವಹಿಸುತ್ತಿದ್ದಾಗ ಕೋಟ್ಯಂತರ ರೂಪಾಯಿ ಮೌಲ್ಯದ ಭೂಮಿಯನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಭೂಮಿಗಳು ಸರ್ಕಾರಿ ಮತ್ತು ಧಾರ್ಮಿಕ ಟ್ರಸ್ಟ್‌ಗಳಿಗೆ ಸೇರಿದ್ದು, ಅವುಗಳನ್ನು ಅನುಮಾನಾಸ್ಪದ ಜನರಿಗೆ ಮಾರಾಟ ಮಾಡಲಾಗಿದೆ.

ತನಿಖೆಯಿಂದ ಹೆಚ್ಚಿನ ಭೂಮಿ ಹಿಂದೂಗಳಿಗೆ ಸೇರಿದ್ದು, ಅವುಗಳನ್ನು ಮುಸ್ಲಿಮರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಕೇವಲ 6 ವರ್ಷಗಳ ಕರ್ತವ್ಯದ ಹೊರತಾಗಿಯೂ ಅವರ ಆಸ್ತಿ ತುಂಬಾ ಹೆಚ್ಚಾಗಿದೆ ಎಂಬಂತಹ ಅನೇಕ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.

ಚಿನ್ನ ಮತ್ತು ನಗದು ಎಲ್ಲಿಂದ ಬಂತು?
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಿಶೇಷ ತಂಡವನ್ನು ರಚಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ತಂಡದ ಪ್ರಕಾರ, ನೂಪುರ್ ಬೋರಾ ಅವರ ಮನೆ ಮೇಲೆ ದಾಳಿ ನಡೆಸಿದಾಗ, ಅಲ್ಲಿ 90 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ. ನೂಪುರ್ ಬೋರಾ ಪೊಲೀಸ್ ವಶದಲ್ಲಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:58 pm, Tue, 16 September 25