AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸ್​​ಬಾಲ್ ಬ್ಯಾಟ್​ನಿಂದ ಹೊಡೆದು ಮಹಿಳಾ ಪೊಲೀಸ್​ ಅಧಿಕಾರಿಯ ಹತ್ಯೆಗೈದ ಪತಿ

ಪತಿಯೊಬ್ಬ ಬೇಸ್​​ಬಾಲ್ ಬ್ಯಾಟ್​​ನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆ ಹೆಡ್ ಕಾನ್​​ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದಂಪತಿ ನಡುವೆ ತೀವ್ರ ವಾಗ್ವಾದ ನಡೆದ ನಂತರ ಈ ಘಟನೆ ನಡೆದಿದೆ. ಸವಿತಾ ಸಾಕೇತ್ ಎಂಬುವವರು ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸವಿತಾ ಮತ್ತು ಅವರ ಪತಿ ವೀರೇಂದ್ರ ಸಾಕೇತ್ ಸಿಧಿ ಜಿಲ್ಲೆಯ ಸರ್ಕಾರಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಬೇಸ್​​ಬಾಲ್ ಬ್ಯಾಟ್​ನಿಂದ ಹೊಡೆದು ಮಹಿಳಾ ಪೊಲೀಸ್​ ಅಧಿಕಾರಿಯ ಹತ್ಯೆಗೈದ ಪತಿ
ಆರೋಪಿ
ನಯನಾ ರಾಜೀವ್
|

Updated on: Sep 16, 2025 | 11:54 AM

Share

ಮಧ್ಯಪ್ರದೇಶ, ಸೆಪ್ಟೆಂಬರ್ 16: ಪತಿಯೊಬ್ಬ ಬೇಸ್​​ಬಾಲ್ ಬ್ಯಾಟ್​​ನಿಂದ ಹೊಡೆದು ಪತ್ನಿಯನ್ನು ಹತ್ಯೆ(Murder) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆ ಹೆಡ್ ಕಾನ್​​ಸ್ಟೆಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ದಂಪತಿ ನಡುವೆ ತೀವ್ರ ವಾಗ್ವಾದ ನಡೆದ ನಂತರ ಈ ಘಟನೆ ನಡೆದಿದೆ. ಸವಿತಾ ಸಾಕೇತ್ ಎಂಬುವವರು ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಸವಿತಾ ಮತ್ತು ಅವರ ಪತಿ ವೀರೇಂದ್ರ ಸಾಕೇತ್ ಸಿಧಿ ಜಿಲ್ಲೆಯ ಸರ್ಕಾರಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಗಲಾಟೆಯ ನಡುವೆ, ವೀರೇಂದ್ರ ಬೇಸ್‌ಬಾಲ್ ಬ್ಯಾಟ್ ಎತ್ತಿಕೊಂಡು ತನ್ನ ಹೆಂಡತಿಗೆ ಪದೇ ಪದೇ ಹೊಡೆದಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಪೊಲೀಸರು ಈ ವಿವಾದದ ಹಿಂದಿನ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಮತ್ತೊಂದು ಘಟನೆ

ಮೂರನೇ ಪತ್ನಿಯ ಕೊಲೆ ಮಾಡಿ ಬಸ್​ನಲ್ಲಿ ಲಗೇಜ್ ಎಂದು‌ ಕಳುಹಿಸಿ ಪರಾರಿಯಾಗಿದ್ದ ವೃದ್ಧ ವ್ಯಕ್ತಿಯೊಬ್ಬ ಇಳಿ ವಯಸ್ಸಿನಲ್ಲಿ ತನ್ನ ಮೂರನೇ ಹೆಂಡತಿಯನ್ನು ಹತ್ಯೆ ಮಾಡಿ ಮೃತದೇಹವನ್ನು ಲಗೇಜ್ ಎಂದು ಬಸ್ಸಿನಲ್ಲಿ ಕಳುಹಿಸಿ ಪರಾರಿಯಾಗಿದ್ದಲ್ಲದೆ, ತಲೆಮರೆಸಿಕೊಂಡು ಹಾಯಾಗಿದ್ದ, ಕೃತ್ಯ ಎಸಗಿ 23 ವರ್ಷಗಳ ಬಳಿಕ ರಾಯಚೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮತ್ತಷ್ಟು ಓದಿ: ಬಿಹಾರ: ವಿಧಾನಸಭಾ ಚುನಾವಣೆ ಸನ್ನಿಹಿತವಿರುವಾಗ ಪಾಟ್ನಾದಲ್ಲಿ ಆರ್​​ಜೆಡಿ ನಾಯಕನ ಗುಂಡಿಕ್ಕಿ ಹತ್ಯೆ

ಆರು ತಿಂಗಳ ಹಿಂದೆ ಸ್ವಗ್ರಾಮಕ್ಕೆ ಬಂದಿದ್ದ ಹಂತಕನ ಜಾಡು ಹಿಡಿದು ಶೋಧ ನಡೆಸಿದ ಪೊಲೀಸರು, ಕೊನೆಗೂ ಆತನನ್ನು ಖೆಡ್ಡಾಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ರಾಯಚೂರ ಜಿಲ್ಲೆಯ ಮಾನ್ವಿಯಲ್ಲಿ ಆರೋಪಿ 75 ವರ್ಷದ ಹುಸೇನಪ್ಪನನ್ನು ಬಂಧಿಸಲಾಗಿದೆ.

ಪ್ರಾಥಮಿಕ ಆರೋಗ್ಯ ‌ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿದ್ದ ಹುಸೇನಪ್ಪನ ಮೊದಲ ಪತ್ನಿ ತೀರಿಕೊಂಡಿದ್ದರು. ಅದಾದ ನಂತರ ಆತ, ಎರಡನೇ ವಿವಾಹವಾಗಿದ್ದ. ಆಕೆ ಜಗಳವಾಡಿ ಪತಿಯನ್ನು ತೊರೆದು ಹೋಗಿದ್ದಳು. ನಂತರ, ಸರ್ಕಾರಿ ನೌಕರ ಎಂದು ಹೇಳಿಕೊಂಡು ಕೊಪ್ಪಳ ‌ತಾಲೂಕಿನ‌ ಇಂದರಗಿ ನಿವಾಸಿ ರೇಣುಕಮ್ಮರನ್ನು ಮೂರನೇ ಮದುವೆಯಾಗಿದ್ದ. ಮದುವೆಯಾದ ಬಳಿಕ ಗಂಗಾವತಿಯ‌ ಲಕ್ಷ್ಮೀ ಕ್ಯಾಂಪ್‌ನಲ್ಲಿ ಪತ್ನಿ ಜೊತೆ ವಾಸ ಮಾಡತಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ