ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹೊಗಳಿ, ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ ಕ್ರೇಗ್​ ಕೆಲ್ಲಿ

| Updated By: Lakshmi Hegde

Updated on: Jul 14, 2021 | 10:09 AM

ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಯೋಗಿ ಆದಿತ್ಯನಾಥ್​ ಪ್ರಾರಂಭಿಸಿದ ಆರೋಗ್ಯ ಮತ್ತು ಕಾನೂನು ಸಹಾಯವಾಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಕೂಡ ಕಳೆದ ತಿಂಗಳು ಟ್ವೀಟ್ ಮಾಡಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹೊಗಳಿ, ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ ಕ್ರೇಗ್​ ಕೆಲ್ಲಿ
ಕ್ರೇಗ್​ ಕೆಲ್ಲಿ
Follow us on

ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿನ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ ಶ್ಲಾಘಿಸಿದ್ದಾರೆ. ಅಲ್ಲದೆ, ನಮ್ಮ ಆಸ್ಟ್ರೇಲಿಯಾದಲ್ಲೂ ಕೊರೊನಾ ಸಾಂಕ್ರಾಮಿಕ ನಿಯಂತ್ರಿಸಲು ನೀವು ಸಹಾಯ ಮಾಡಬಹುದಾ ಎಂದು ಕೇಳಿದ್ದಾರೆ.

ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ಎಂಪಿ ಕ್ರೇಗ್​ ಕೆಲ್ಲಿ, ಭಾರತದ ಉತ್ತರಪ್ರದೇಶ ರಾಜ್ಯದಲ್ಲಿ ಕೊರೊನಾ 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸರ್ಕಾರ ತುಂಬ ಪರಿಣಾಮಕಾರಿಯಾಗಿ ಶ್ರಮಿಸಿದೆ. ಕೊರೊನಾ ಸೋಂಕನ್ನು ತಡೆಗಟ್ಟಲು ಉತ್ತರ ಪ್ರದೇಶ ಐವರ್ಮೆಕ್ಟಿನ್​​ನ್ನು ಪರಿಚಯಿಸಿದ್ದು ನಿಜಕ್ಕೂ ಅತ್ಯುತ್ತಮ ಕೆಲಸ ಎಂದು ಹೇಳಿದ್ದಾರೆ. ಹಾಗೇ ಇನ್ನೊಂದು ಟ್ವೀಟ್​ನಲ್ಲಿ, ನಮ್ಮಲ್ಲಿ ಮೊದಲಿದ್ದವರು ಸೃಷ್ಟಿಸಿದ ಅವ್ಯವಸ್ಥೆಯನ್ನು ಹೋಗಲಾಡಿಸಿ, ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸಲು ಉತ್ತರ ಪ್ರದೇಶದ ಜನರು ಅವರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ನಮಗೆ ಸಾಲ ಕೊಡಬಹುದಾ ಎಂದು ಹೊಗಳಿಕೆ ರೂಪದಲ್ಲಿ ಪ್ರಶ್ನಿಸಿದ್ದಾರೆ.

ಕಳೆದ ತಿಂಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಶ್ಲಾಘಿಸಿದ್ದರು. ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಯೋಗಿ ಆದಿತ್ಯನಾಥ್​ ಪ್ರಾರಂಭಿಸಿದ ಆರೋಗ್ಯ ಮತ್ತು ಕಾನೂನು ಸಹಾಯವಾಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Accident; ಕ್ಯಾಂಟರ್‌ಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸವಾರ ಸಾವು, ಹಿಂಬದಿ ಸವಾರನಿಗೆ ಗಂಭೀರ ಗಾಯ

Australian MP Craig Kelly has asked Yogi Adityanath to help his country in tackling the Corona pandemic

Published On - 10:07 am, Wed, 14 July 21