ಬಾಬರಿ ಮಸೀದಿ ಕೆಡವಿದ್ದಕ್ಕೆ ಪ್ರತೀಕಾರ , ದೆಹಲಿಯ ಎನ್​ಸಿಆರ್​ನಲ್ಲಿ ಡಿ.6ರಂದು 6 ಕಡೆ ಸ್ಫೋಟಕ್ಕೆ ನಡೆದಿತ್ತು ಸಂಚು

ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಸ್ಫೋಟ(Blast)ದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಕೆಲವು ಭಯಾನಕ ವಿಚಾರಗಳು ತಿಳಿದುಬಂದಿವೆ.  ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ವೈದ್ಯರನ್ನು ಒಳಗೊಂಡ ಶಂಕಿತ ಭಯೋತ್ಪಾದಕ ಘಟಕವು ಡಿಸೆಂಬರ್ 6 ರಂದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಆರು ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜಿಸಿತ್ತು ಎಂಬ ಮಾಹಿತಿ ತಿಳಿದುಬಂದಿದೆ

ಬಾಬರಿ ಮಸೀದಿ ಕೆಡವಿದ್ದಕ್ಕೆ ಪ್ರತೀಕಾರ , ದೆಹಲಿಯ ಎನ್​ಸಿಆರ್​ನಲ್ಲಿ ಡಿ.6ರಂದು 6 ಕಡೆ ಸ್ಫೋಟಕ್ಕೆ ನಡೆದಿತ್ತು ಸಂಚು
ದೆಹಲಿ
Image Credit source: Zubair Ahmad- X account

Updated on: Nov 13, 2025 | 9:37 AM

ನವದೆಹಲಿ, ನವೆಂಬರ್ 13: ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ನಡೆದ ಸ್ಫೋಟ(Blast)ದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಕೆಲವು ಭಯಾನಕ ವಿಚಾರಗಳು ತಿಳಿದುಬಂದಿವೆ.  ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ವೈದ್ಯರನ್ನು ಒಳಗೊಂಡ ಶಂಕಿತ ಭಯೋತ್ಪಾದಕ ಘಟಕವು ಡಿಸೆಂಬರ್ 6 ರಂದು ರಾಷ್ಟ್ರೀಯ ರಾಜಧಾನಿ ಪ್ರದೇಶದ ಆರು ಸ್ಥಳಗಳಲ್ಲಿ ಸ್ಫೋಟಗಳನ್ನು ನಡೆಸಲು ಯೋಜಿಸಿತ್ತು ಎಂಬ ಮಾಹಿತಿ ತಿಳಿದುಬಂದಿದೆ.

ಈ ದಿನಾಂಕ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡವಿದ ದಿನ. ಬಾಬರಿ ಮಸೀದಿ ನೆಲಸಮ ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಬಯಸಿದ್ದರಿಂದ ದಿನಾಂಕವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಹೇಳಲಾಗಿದೆ.

ಉನ್ನತ ಗುಪ್ತಚರ ಮೂಲಗಳ ಪ್ರಕಾರ, ಶಂಕಿತ ಭಯೋತ್ಪಾದಕ ಘಟಕದ ಸದಸ್ಯರು ವಿಚಾರಣೆಯ ಸಮಯದಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಹಂತವಾರು ಯೋಜನೆಯನ್ನು ಸಿದ್ಧಪಡಿಸಿದ್ದರು ಎಂದು ಹೇಳಿದ್ದಾರೆ. ಅಧಿಕಾರಿಗಳು ಐದು ಹಂತದ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಓದಿ: ದೆಹಲಿ ನಿಗೂಢ ಸ್ಫೋಟ: ಡಾ. ಉಮರ್ ಹಾಗೂ ಇತರೆ ಉಗ್ರರಿಗೆ ಟರ್ಕಿಶ್ ಹ್ಯಾಂಡ್ಲರ್ ‘ಯುಕಾಸಾ’ ಜತೆ ಇತ್ತು ನಂಟು

ಹಂತ 1: ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಜೊತೆ ಸಂಪರ್ಕ ಹೊಂದಿದ ಭಯೋತ್ಪಾದಕ ಮಾಡ್ಯೂಲ್ ರಚನೆ.
ಹಂತ 2: ಸುಧಾರಿತ ಸ್ಫೋಟಕ ಸಾಧನಗಳನ್ನು (IED) ಜೋಡಿಸಲು ಮತ್ತು ಮದ್ದುಗುಂಡುಗಳನ್ನು ಜೋಡಿಸಲು ಕಚ್ಚಾ ವಸ್ತುಗಳ ಖರೀದಿ, ಇದನ್ನು ಹರಿಯಾಣದ ನುಹ್ ಮತ್ತು ಗುರುಗ್ರಾಮದಿಂದ ಪಡೆಯಲಾಗುತ್ತದೆ.
ಹಂತ 3: ಮಾರಕ ರಾಸಾಯನಿಕ ಐಇಡಿಗಳ ತಯಾರಿಕೆ ಮತ್ತು ಸಂಭಾವ್ಯ ಗುರಿ ಸ್ಥಳಗಳ ಸುತ್ತ ಓಡಾಡುವುದು.
ಹಂತ 4: ಸ್ಥಳಾನ್ವೇಷಣೆಯ ನಂತರ ಮಾಡ್ಯೂಲ್ ಸದಸ್ಯರ ನಡುವೆ ಜೋಡಿಸಲಾದ ಬಾಂಬ್‌ಗಳ ವಿತರಣೆ
ಹಂತ 5 (ಅಂತಿಮ): ದೆಹಲಿಯ ಆರರಿಂದ ಏಳು ಸ್ಥಳಗಳಲ್ಲಿ ಸಂಘಟಿತ ಬಾಂಬ್ ದಾಳಿಗಳ ಕಾರ್ಯಗತಗೊಳಿಸುವಿಕೆಯಾಗಿತ್ತು.

ತನಿಖಾಧಿಕಾರಿಗಳ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲಿ ದಾಳಿಗಳನ್ನು ನಡೆಸುವುದು ಮೂಲ ಯೋಜನೆಯಾಗಿತ್ತು, ಆದರೆ ಕಾರ್ಯಾಚರಣೆಯ ವಿಳಂಬದ ನಂತರ ಹೊಸ ದಿನಾಂಕವನ್ನು ಆಯ್ಕೆ ಮಾಡಲಾಯಿತು ಅದು ಡಿಸೆಂಬರ್ 6.

16 ನೇ ಶತಮಾನದ ಮಸೀದಿಯನ್ನು ಭಗವಾನ್ ರಾಮನ ಜನ್ಮಸ್ಥಳದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದನ್ನು ಡಿಸೆಂಬರ್ 6, 1992 ರಂದು  ಸುಪ್ರೀಂಕೋರ್ಟ್​ ನಿರ್ದೇಶನದ ಮೇರೆಗೆ ಕೆಡವಲಾಯಿತು. . ಸುಪ್ರೀಂ ಕೋರ್ಟ್‌ನಲ್ಲಿ ಸುದೀರ್ಘವಾದ ಹೋರಾಟದ ನಂತರ, ಅದೇ ಸ್ಥಳದಲ್ಲಿ ಹೊಸ ರಾಮ ದೇವಾಲಯವನ್ನು ನಿರ್ಮಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ