ದೆಹಲಿ ನಿಗೂಢ ಸ್ಫೋಟ: ಡಾ. ಉಮರ್ ಹಾಗೂ ಇತರೆ ಉಗ್ರರಿಗೆ ಟರ್ಕಿಶ್ ಹ್ಯಾಂಡ್ಲರ್ ‘ಯುಕಾಸಾ’ ಜತೆ ಇತ್ತು ನಂಟು
ದೆಹಲಿಯ ಕೆಂಪು ಕೋಟೆ ಬಳಿ ನಡೆದ ನಿಗೂಢ ಸ್ಫೋಟ(Blast)ದ ವಿಚಾರವಾಗಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಸ್ಫೋಟಗೊಂಡ ಕಾರಿನಲ್ಲಿದ್ದ ಡಾ. ಉಮರ್ ಹಾಗೂ ಇತ್ತೀಚೆಗೆ ಪೊಲೀಸರು ಬಂಧಿಸಿರುವ ಉಗ್ರನಿಗೆ ಟರ್ಕಿಶ್ ಹ್ಯಾಂಡ್ಲರ್ ಯುಕಾಶಾ ಜತೆ ನಂಟಿತ್ತು ಎಂಬುದು ತಿಳಿದುಬಂದಿದೆ. ‘ಯುಕಾಸಾ' ಎಂಬುದು ಹ್ಯಾಂಡ್ಲರ್ ತಮ್ಮ ಗುರುತನ್ನು ಮರೆಮಾಡಲು ಬಳಸುವ ಕೋಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ನವದೆಹಲಿ, ನವೆಂಬರ್ 13: ದೆಹಲಿಯ ಕೆಂಪು ಕೋಟೆ ಬಳಿ ನಡೆದ ನಿಗೂಢ ಸ್ಫೋಟ(Blast)ದ ವಿಚಾರವಾಗಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ. ಸ್ಫೋಟಗೊಂಡ ಕಾರಿನಲ್ಲಿದ್ದ ಡಾ. ಉಮರ್ ಹಾಗೂ ಇತ್ತೀಚೆಗೆ ಪೊಲೀಸರು ಬಂಧಿಸಿರುವ ಉಗ್ರನಿಗೆ ಟರ್ಕಿಶ್ ಹ್ಯಾಂಡ್ಲರ್ ಯುಕಾಶಾ ಜತೆ ನಂಟಿತ್ತು ಎಂಬುದು ತಿಳಿದುಬಂದಿದೆ. ‘ಯುಕಾಸಾ’ ಎಂಬುದು ಹ್ಯಾಂಡ್ಲರ್ ತಮ್ಮ ಗುರುತನ್ನು ಮರೆಮಾಡಲು ಬಳಸುವ ಕೋಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಹ್ಯಾಂಡ್ಲರ್‌ನ ಸ್ಥಳವು ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಪತ್ತೆಯಾಗಿದೆ. ಮಾರ್ಚ್ 2022 ರಲ್ಲಿ ಭಾರತದಿಂದ ಹಲವಾರು ಮಂದಿ ಅಂಕಾರಾಗೆ ಪ್ರಯಾಣಿಸಿದ್ದಾರೆ ಎಂಬ ವರದಿಗಳನ್ನು ಏಜೆನ್ಸಿಗಳು ಪರಿಶೀಲಿಸುತ್ತಿವೆ. ಈ ಸಮಯದಲ್ಲಿ ಅವರನ್ನು ಬ್ರೈನ್‌ವಾಶ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ.
ಸೆಷನ್ ಆ್ಯಪ್ ಎಂದು ಕರೆಯಲ್ಪಡುವ ಎನ್‌ಕ್ರಿಪ್ಟ್ ಮಾಡಲಾದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೂಲಕ ಡಾ. ಉಮರ್ ಮತ್ತು ಬಂಧಿತ ಭಯೋತ್ಪಾದಕ ತಮ್ಮ ಹ್ಯಾಂಡ್ಲರ್‌ನೊಂದಿಗೆ ಸಂವಹನ ನಡೆಸುತ್ತಿದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಕೆಂಪು ಕೋಟೆ ಬಳಿ ಸ್ಫೋಟಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಕಾರ್ಯಾಚರಣೆಗಳನ್ನು ಸಂಘಟಿಸಲು ಈ ಆ್ಯಪ್ ಅನ್ನು ಬಳಸಲಾಗಿದೆ ಎಂದು ನಂಬಲಾಗಿದೆ. ಡಾ. ಉಮರ್ i20 ಚಲಾಯಿಸುತ್ತಿದ್ದರು ಎಂದು ಡಿಎನ್ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಮತ್ತಷ್ಟು ಓದಿ: ದೆಹಲಿ ನಿಗೂಢ ಸ್ಫೋಟ: ಸ್ಫೋಟಗೊಂಡ ಐ20 ಕಾರು ಚಲಾಯಿಸುತ್ತಿದ್ದುದು ಉಮರ್, ಡಿಎನ್ಎ ಪರೀಕ್ಷೆಯಲ್ಲಿ ದೃಢ
ಕೆಂಪು ಕೋಟೆ ಬಳಿ ಸ್ಫೋಟಗೊಂಡ ಹುಂಡೈ ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಡಾ. ಉಮರ್ ಮೊಹಮ್ಮದ್ ಎಂದು ಡಿಎನ್ಎ ಪರೀಕ್ಷೆಗಳು ದೃಢಪಡಿಸಿವೆ. ಪೊಲೀಸ್ ಮೂಲಗಳ ಪ್ರಕಾರ, ಡಾ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳು ಸುಟ್ಟ ಕಾರಿನಿಂದ ದೊರೆತ ಮೂಳೆ ಮತ್ತು ಹಲ್ಲಿನ ತುಣುಕುಗಳೊಂದಿಗೆ ಹೋಲಿಕೆಯಾಗಿವೆ.
ತೀವ್ರಗೊಂಡ ತನಿಖೆ
ಅಂಕಾರಾಗೆ ಕರೆದೊಯ್ಯುವ ಹ್ಯಾಂಡ್ಲರ್‌ನ ಡಿಜಿಟಲ್ ಹಾದಿ ಮತ್ತು ಚಾಲಕನ ಗುರುತು ದೃಢಪಟ್ಟ ನಂತರ, ತನಿಖಾ ಸಂಸ್ಥೆಗಳು ಈಗ ಭಯೋತ್ಪಾದಕ ಸಂಚಿನ ಹಿಂದಿನ ಜಾಲವನ್ನು ಬಹಿರಂಗಪಡಿಸುವತ್ತ ಗಮನಹರಿಸಿವೆ. ಅಧಿಕಾರಿಗಳ ಪ್ರಕಾರ, ಶಂಕಿತರೊಂದಿಗೆ ಸಂಬಂಧಿಸಿದ ಆರ್ಥಿಕ ಸಂಪರ್ಕಗಳು ಮತ್ತು ಸಂವಹನ ಮಾರ್ಗಗಳನ್ನು ಪತ್ತೆಹಚ್ಚಲು ಎನ್ಐಎ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕದ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ.
ದೆಹಲಿ ಕಾರು ಸ್ಫೋಟ ಸೋಮವಾರ ಸಂಜೆ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸಲಾಗಿದ್ದ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ತೀವ್ರ ಸ್ಫೋಟದಲ್ಲಿ ಕನಿಷ್ಠ 10ಕ್ಕೂ ಅಧಿಕ ಜನರು ಸಾವನ್ನಪ್ಪಿದರು, 20 ಕ್ಕೂ ಹೆಚ್ಚು ಜನರು ಗಾಯಗೊಂಡರು ಮತ್ತು ಹಲವಾರು ವಾಹನಗಳು ಸುಟ್ಟುಹೋಗದ್ದವು. ಈ ಸ್ಫೋಟದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡು ಹತ್ತಿರದ ಕಾರುಗಳಿಗೆ ಬೇಗನೆ ಹರಡಿತ್ತು.
ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಈ ಘಟನೆ ಸಂಭವಿಸಿದೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟವನ್ನು ಭಯೋತ್ಪಾದಕ ಘಟನೆ ಎಂದು ಕರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




