AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!

ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!

ಸುಷ್ಮಾ ಚಕ್ರೆ
|

Updated on: Nov 12, 2025 | 10:53 PM

Share

ದೇವಾಲಯದೊಳಗೆ ವೃದ್ಧನೊಬ್ಬ ಕುಸಿದು ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಯಾವುದೇ ನೋವಿಲ್ಲದೆ, ಒದ್ದಾಟವಿಲ್ಲದೆ ಮೌನವಾಗಿಯೇ ವೃದ್ಧ ಇಹಲೋಕ ತ್ಯಜಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆ ವೃದ್ಧ ಬಹಳ ಅದೃಷ್ಟವಂತ, ಅವರು ಮಾಡಿದ ಕರ್ಮವೇ ಅವರಿಗೆ ಇಷ್ಟು ಒಳ್ಳೆಯ ಸಾವನ್ನು ಕರುಣಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ನವದೆಹಲಿ, ನವೆಂಬರ್ 12: ದೇವಸ್ಥಾನದೊಳಗೆ ವೃದ್ಧರೊಬ್ಬರು ಪೂಜೆ ಸಲ್ಲಿಸಲು ಬಂದಿದ್ದರು. ಈ ವೇಳೆ ದೇವರೆದುರು ಕೆಲವು ಸೆಕೆಂಡುಗಳ ಕಾಲ ತಟಸ್ಥವಾಗಿ ನಿಂತಿದ್ದ ವೃದ್ಧರೊಬ್ಬರು ನಂತರ ಅಲ್ಲೇ ಕುಳಿತಿದ್ದಾರೆ. ಅದಾದ ಕೆಲವು ನಿಮಿಷಗಳ ನಂತರ ಹಿಂದಕ್ಕೆ ಗೋಡೆಗೆ ಒರಗಿ ಕುಳಿತಿದ್ದಾರೆ. 10 ನಿಮಿಷ ಹಾಗೆಯೇ ಕುಳಿತಿದ್ದ ಆ ಅಜ್ಜ ಅಲ್ಲೇ ಪ್ರಾಣಬಿಟ್ಟಿದ್ದಾರೆ. ಅಲ್ಲಿದ್ದ ಇತರೆ ಭಕ್ತರು ಅನುಮಾನದಿಂದ ಆ ವೃದ್ಧನ ಹತ್ತಿರ ಹೋಗಿ ನೋಡುವಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಈ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ (CCTV Video) ಸೆರೆಯಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆ ವೃದ್ಧ ಬಹಳ ಅದೃಷ್ಟವಂತ, ಅವರು ಮಾಡಿದ ಕರ್ಮವೇ ಅವರಿಗೆ ಇಷ್ಟು ಒಳ್ಳೆಯ ಸಾವನ್ನು ಕರುಣಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More