ಹಿಂದು ಹುಡುಗಿಯರಿಗೆ ದೌರ್ಜನ್ಯ ಎಸಗಿದರೆ, ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತೇನೆ ಎಂದಿದ್ದ ಬಜರಂಗ ಮುನಿಗೆ ಜಾಮೀನು

ಏಪ್ರಿಲ್​ 2ರಂದು ಬಜರಂಗ ಮುನಿ ದಾಸ್​ ಭಾಷಣ ಮಾಡಿದ್ದರು.  ಮಸೀದಿಯೊಂದರ ಹೊರಗೆ ನಿಂತು ಮಾತನಾಡಿದ್ದ ಅವರು ಮುಸ್ಲಿಂ ಸಮುದಾಯವನ್ನು ಜಿಹಾದಿಗಳು ಎಂದು ಉಲ್ಲೇಖಿಸಿದ್ದರು.

ಹಿಂದು ಹುಡುಗಿಯರಿಗೆ ದೌರ್ಜನ್ಯ ಎಸಗಿದರೆ,  ಮುಸ್ಲಿಂ ಮಹಿಳೆಯರ ಮೇಲೆ  ಅತ್ಯಾಚಾರ ಮಾಡುತ್ತೇನೆ ಎಂದಿದ್ದ ಬಜರಂಗ ಮುನಿಗೆ ಜಾಮೀನು
ಬಜರಂಗ ಮುನಿ ದಾಸ್​
Edited By:

Updated on: Apr 24, 2022 | 3:59 PM

ಉತ್ತರ ಪ್ರದೇಶದ ಸೀತಾಪುರದಲ್ಲಿ ದ್ವೇಷ ಭಾಷಣ ಮಾಡಿದ್ದಲ್ಲದೆ, ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರ ಬೆದರಿಕೆ ಹಾಕಿ, ಜೈಲು ಸೇರಿದ್ದ ಮಹಾಋಷಿ ಶ್ರೀ ಲಕ್ಷ್ಮಣ ದಾಸ ಉದಾಸಿ ಆಶ್ರಮದ ಬಜರಂಗ ಮುನಿ ದಾಸ್​ಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಶನಿವಾರ ಜಿಲ್ಲಾ ನ್ಯಾಯಾಧೀಶ ಸಂಜಯ್​ ಕುಮಾರ್​ ಅವರು ಬಜರಂಗ ಮುನಿಗೆ ಜಾಮೀನು ನೀಡಿದ್ದರು. ಅವರು ಇಂದು ಮುಂಜಾನೆ ಜೈಲಿನಿಂದ ಹೊರಬಂದಿದ್ದಾರೆ.   ಜೈಲಿನಿಂದ ಬಿಡುಗಡೆಯಾದ ಬಳಿಕ ಮಾತನಾಡಿದ ಅವರು, ನಾನು ಏನು ಮಾತನಾಡಿದ್ದೆನೋ ಅದರ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ನನ್ನ ಧರ್ಮವನ್ನು ಮತ್ತು ಧರ್ಮದ ಮಹಿಳೆಯ ಸುರಕ್ಷತೆಗಾಗಿ ಹೋರಾಡುತ್ತೇನೆ. ಎಷ್ಟು ಬಾರಿ ಜೈಲಿಗೆ ಹೋಗಲೂ ಹಿಂಜರಿಯುವುದಿಲ್ಲ. ಯಾರೇ ದಾಳಿ ಮಾಡಿದರೂ ಹೆದರುವುದಿಲ್ಲ ಎಂದಿದ್ದಾರೆ. 

ಏಪ್ರಿಲ್​ 2ರಂದು ಬಜರಂಗ ಮುನಿ ದಾಸ್​ ಭಾಷಣ ಮಾಡಿದ್ದರು.  ಮಸೀದಿಯೊಂದರ ಹೊರಗೆ ನಿಂತು ಮಾತನಾಡಿದ್ದ ಅವರು ಮುಸ್ಲಿಂ ಸಮುದಾಯವನ್ನು ಜಿಹಾದಿಗಳು ಎಂದು ಉಲ್ಲೇಖಿಸಿದ್ದರು. ಹಾಗೇ, ಆ ಸಮುದಾಯದಿಂದ ಹಿಂದು ಹುಡುಗಿಯರು ದೌರ್ಜನ್ಯಕ್ಕೆ ಒಳಗಾದರೆ ನಾನೇ ಸ್ವತಂ ಹಿಜಾದಿ ಸಮುದಾಯದ ಮಹಿಳೆಯರನ್ನು ಅತ್ಯಾಚಾರ ಮಾಡುತ್ತೇನೆ ಎಂದು ಮುನಿ ದಾಸ್ ಭಾಷಣದಲ್ಲಿ ಹೇಳಿದ್ದರು. ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿ, ವಿವಾದ ಸೃಷ್ಟಿಸಿತ್ತು. ಅದಾದ ಬಳಿಕ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ನಾನು ಈ ಬಗ್ಗೆ ಕ್ಷಮೆ ಕೇಳುತ್ತೇನೆ ಎಂದು ಮುನಿ ದಾಸ್​ ಹೇಳಿದ ವಿಡಿಯೋವೂ ವೈರಲ್ ಆಗಿತ್ತು. ರಾಮ್​ ನರೇಶ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್ ದಾಖಲಾಗಿ, ಏಪ್ರಿಲ್​ 13ರಂದು ಬಜರಂಗ ಮುನಿದಾಸ್​ ಅವರನ್ನು ಅರೆಸ್ಟ್ ಮಾಡಲಾಗಿತ್ತು.

ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಮಾತಾಡಿದಂತೆ ನಾನು ಮಾತಾಡಲು ಬರಲ್ಲ, ನಾನು ಸರ್ಕಾರದ ಭಾಗ; ಸಚಿವ ಮುರಗೇಶ ನಿರಾಣಿ

Published On - 3:11 pm, Sun, 24 April 22