Holi Festival: ಕ್ಯಾಂಪಸ್​​ನಲ್ಲಿ ಹೋಳಿ ಆಚರಣೆ ನಿಷೇಧಿಸಿದ ಬನಾರಸ್ ಹಿಂದೂ ವಿವಿ; ವರದಿ

|

Updated on: Mar 04, 2023 | 11:02 PM

ಕ್ಯಾಂಪಸ್​​ನಲ್ಲಿ ಹೋಳಿ ಆಚರಿಸುವುದು, ಮ್ಯೂಸಿಲ್ ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಎಚ್​ಯು ಆಡಳಿತ ಮಂಡಳಿ ನೋಟಿಸ್ ಬಿಡುಗಡೆ ಮಾಡಿದೆ.

Holi Festival: ಕ್ಯಾಂಪಸ್​​ನಲ್ಲಿ ಹೋಳಿ ಆಚರಣೆ ನಿಷೇಧಿಸಿದ ಬನಾರಸ್ ಹಿಂದೂ ವಿವಿ; ವರದಿ
ಸಾಂದರ್ಭಿಕ ಚಿತ್ರ
Follow us on

ಲಖನೌ: ಉತ್ತರ ಪ್ರದೇಶದ ವಾರಾಣಸಿ ಮೂಲದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU) ಕ್ಯಾಂಪಸ್​​ನಲ್ಲಿ ಹೋಳಿ ಹಬ್ಬ (Holi festivities) ಆಚರಿಸುವುದನ್ನು ನಿಷೇಧಿಸಿದೆ ಎಂದು ವರದಿಯಾಗಿದೆ. ವಿಶ್ವವಿದ್ಯಾಲಯದ ಈ ಕ್ರಮಕ್ಕೆ ಹಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದ್ದು, ಇದು ಹಿಂದೂ ವಿರೋಧಿ ಕ್ರಮ ಎಂಬ ಆಕ್ಷೇಪ ವ್ಯಕ್ತವಾಗಿದೆ. ಕ್ಯಾಂಪಸ್​​ನಲ್ಲಿ ಹೋಳಿ ಆಚರಿಸುವುದು, ಮ್ಯೂಸಿಲ್ ಪ್ಲೇ ಮಾಡುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಬಿಎಚ್​ಯು ಆಡಳಿತ ಮಂಡಳಿ ನೋಟಿಸ್ ಬಿಡುಗಡೆ ಮಾಡಿದೆ. ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಮತ್ತು ವಸತಿ ನಿಲಯಗಳ ವಾರ್ಡನ್​ಗಳಿಗೆ ಸೂಚಿಸಲಾಗಿದೆ.

ಕೆಲವು ದಿನಗಳ ಹಿಂದೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಈ ನೋಟಿಸ್ ಬಿಡುಗಡೆ ಮಾಡಿತ್ತು ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಹೋಳಿ ಎಂಬುದು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದರ ಆಚರಣೆಯನ್ನು ವಿಶ್ವವಿದ್ಯಾಲಯ ಅದ್ಹೇಗೆ ನಿಷೇಧಿಸಲು ಸಾಧ್ಯ ಎಂದು ವಿಶ್ವ ಹಿಂದೂ ಪರಿಷತ್​ನ ಸ್ಥಳೀಯ ನಾಯಕ ವಿನೋದ್ ಬನ್ಸಲ್ ಪ್ರಶ್ನಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಸನಾತನ (ಹಿಂದೂ) ಭಾರತದಲ್ಲಿ ಇಂತಹ ನಿಷೇಧವನ್ನು ಯಾರಾದರೂ ಊಹಿಸಬಹುದೇ… ಹೋಳಿಯನ್ನು ಆಚರಿಸದಿರುವ ಬಗ್ಗೆ ಜನ ತಾವಾಗಿಯೇ ನಿರ್ಧಾರ ಕೈಗೊಳ್ಳಬಹುದು. ಆದರೆ, ಹಬ್ಬವನ್ನು ಆಚರಿಸದಂತೆ ಇತರರಿಗೆ ನಿರ್ದೇಶಿಸುವುದು, ಅದೂ ಕೂಡ ಭಾರದಲ್ಲಿ ಕಲ್ಪನೆಗೂ ಮೀರಿದ ಸಂಗತಿಯಾಗಿದೆ ಎಂದು ವಿನೋದ್ ಬನ್ಸಲ್ ಹೇಳಿದ್ದಾರೆ.

ಇದನ್ನೂ ಓದಿ: ಶೀತ ಜ್ವರ ಪ್ರಕರಣಗಳಲ್ಲಿ ಭಾರೀ ಹೆಚ್ಚಳ; ಎಚ್ಚರಿಕೆ ವಹಿಸಲು ಐಸಿಎಂಆರ್ ಸಲಹೆ

ಈ ನಿರ್ಧಾರವು ವಿಶ್ವವಿದ್ಯಾಲಯದಿಂದ ‘ಹಿಂದೂ’ ಪದವನ್ನು ತೆಗೆದುಹಾಕುವ ಪ್ರಯತ್ನಗಳ ಪ್ರಾರಂಭದಂತೆ ಗೋಚರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ವಿಶ್ವವಿದ್ಯಾಲಯ ಹೇಳುವುದೇನು?

ಹೋಳಿ ಸಂಭ್ರಮಾಚರಣೆಯಲ್ಲಿ ತೊಡಗಿರುವವರು ಗಲಾಟೆ ಸೃಷ್ಟಿಸುವುದರ ಜತೆಗೆ ಎಲ್ಲರ ಮೇಲೆ ಬಣ್ಣ ಎರಚುವುದನ್ನು ಗಮನಿಸಲಾಗಿದೆ. ಈ ಹಿಂದೆ ಹೋಳಿ ಆಚರಣೆಯ ಸಂದರ್ಭ ಕಿರುಕುಳದ ಪ್ರಕರಣಗಳೂ ವರದಿಯಾಗಿದ್ದವು. ಹೀಗಾಗಿ ಕ್ಯಾಂಪಸ್​ ಒಳಗೆ ಮಾತ್ರ ಹೋಳಿ ಆಚರಿಸಬಾರದು ಎಂದು ನಿರ್ದೇಶಿಸಲಾಗಿದೆ ಎಂಬುದಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Sat, 4 March 23