AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ ಮರಿಯನ್ ಬಯೋಟೆಕ್ ಪರವಾನಗಿ ರದ್ದುಗೊಳಿಸಲು ಕೇಂದ್ರ ಸೂಚನೆ

ಕಂಪನಿಯಿಂದ ಪರೀಕ್ಷೆಗಾಗಿ ಪಡೆಯಲಾದ 36 ಮಾದರಿಗಳ ಪೈಕಿ 22ರಲ್ಲಿ ಎಥಿಲೀನ್ ಗ್ಲೈಕೋಲ್ ಕಲಬೆರಕೆಯಾಗಿರುವುದು ಕಂಡುಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ

ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ ಮರಿಯನ್ ಬಯೋಟೆಕ್ ಪರವಾನಗಿ ರದ್ದುಗೊಳಿಸಲು ಕೇಂದ್ರ ಸೂಚನೆ
ಕೆಮ್ಮಿನ ಸಿರಪ್
ಗಣಪತಿ ಶರ್ಮಾ
|

Updated on: Mar 04, 2023 | 9:33 PM

Share

ನವದೆಹಲಿ: ಉಜ್ಬೇಕಿಸ್ತಾನದಲ್ಲಿ (Uzbekistan) ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ತಯಾರಿಕಾ ಕಂಪನಿ ಮರಿಯನ್ ಬಯೋಟೆಕ್ (Marion biotech) ಪರವಾನಗಿ ರದ್ದುಗೊಳಿಸುವಂತೆ ಉತ್ತರ ಪ್ರದೇಶ ರಾಜ್ಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಕೇಂದ್ರ ಸರ್ಕಾರ ಸೂಚಿಸಿದೆ. ಕಂಪನಿಯಿಂದ ಪರೀಕ್ಷೆಗಾಗಿ ಪಡೆಯಲಾದ 36 ಮಾದರಿಗಳ ಪೈಕಿ 22ರಲ್ಲಿ ಎಥಿಲೀನ್ ಗ್ಲೈಕೋಲ್ (Ethylene glycol) ಕಲಬೆರಕೆಯಾಗಿರುವುದು ಕಂಡುಬಂದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಗೌತಮ ಬುದ್ಧ ನಗರದ ಡ್ರಗ್ ಇನ್​ಸ್ಪೆಕ್ಟರ್ ತಿಳಿಸಿದ್ದಾರೆ. ಕೆಮ್ಮಿನ ಔಷಧಿ ಸೇವಿಸಿ 18 ಮಕ್ಕಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉಜ್ಬೇಕಿಸ್ತಾನದಲ್ಲಿ ಜನವರಿಯಲ್ಲಿ ನಡೆದಿತ್ತು. ಇದರ ಬೆನ್ನಲ್ಲೇ, ಭಾರತದ 2 ಕೆಮ್ಮಿನ ಸಿರಪ್​ಗಳನ್ನು ಬಳಸದಂತೆ ಉಜ್ಬೇಕಿಸ್ತಾನಕ್ಕೆ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿತ್ತು.

ಮೆರಿಯನ್ ಬಯೋಟೆಕ್‌ನಿಂದ ತಯಾರಿಸಲ್ಪಟ್ಟ ಉತ್ಪನ್ನಗಳು ಗುಣಮಟ್ಟದ ಮಾನದಂಡಗಳು ಅಥವಾ ವಿಶೇಷಣಗಳನ್ನು ಪೂರೈಸಲು ವಿಫಲವಾಗಿವೆ. ಹೀಗಾಗಿ ಅವುಗಳನ್ನು ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಇದಕ್ಕೂ ಮುನ್ನೆ ಕೆಮ್ಮಿನ ಔಷಧ ಸೇವಿಸಿ ಗ್ಯಾಂಬಿಯಾದಲ್ಲಿಯೂ ಮಕ್ಕಳು ಮೃತಪಟ್ಟಿದ್ದರು.

ಇದನ್ನೂ ಓದಿ: Cough Syrup Makers: ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿ ರದ್ದುಗೊಳಿಸಿದ ಸರ್ಕಾರ

ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿ ರದ್ದುಗೊಳಿಸಿದ ಬೆನ್ನಲ್ಲೇ ಮೆರಿಯನ್ ಬಯೋಟೆಕ್‌ ಪರವಾನಗಿ ರದ್ದತಿ ನಿರ್ಧಾರವೂ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿ 6 ಕೆಮ್ಮು ಸಿರಪ್ ತಯಾರಕರ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ 108 ಕೆಮ್ಮು ಸಿರಪ್ ತಯಾರಕರ ಪೈಕಿ 84 ತಯಾರಕರ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆಯನ್ನು ಪ್ರಾರಂಭಿಸಿದೆ ಎಂದು ಸಚಿವ ಸಂಜಯ್ ರಾಥೋಡ್ ಶನಿವಾರ ಬೆಳಿಗ್ಗೆ ತಿಳಿಸಿದ್ದರು.

ನಿಯಮಗಳನ್ನು ಉಲ್ಲಂಘಿಸಿದ 17 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದ್ದರು. ಭಾರತದಿಂದ ಆಮದು ಮಾಡಿಕೊಂಡ ಕೆಮ್ಮು ಸಿರಪ್‌ನಿಂದಾಗಿ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವನ್ನಪ್ಪಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು