Holi 2023: ಹೋಳಿ ಹಬ್ಬದ ವಿಶೇಷ ಮೃದುವಾದ ಮಲ್ಪುರಿ ಮನೆಯಲ್ಲಿಯೇ ತಯಾರಿಸಿ, ರೆಸಿಪಿ ಇಲ್ಲಿದೆ

ಈ ಮಲ್ಪುರಿ ಅಥವಾ ಮಾಲ್ಪುವಾದ ಒಂದು ವಿಶಿಷ್ಟವಾದ ವೈಶಿಷ್ಟ್ಯವೆಂದರೆ ಅದು ಸುತ್ತಲೂ ಗರಿಗರಿಯಾಗಿ ಮತ್ತು ಮಧ್ಯದಲ್ಲಿ ಮೃದುವಾಗಿರುತ್ತದೆ. ರುಚಿಯಂತೂ ಅಧ್ಭುತ. ಆದ್ದರಿಂದ ರುಚಿಯಾದ ಮಲ್ಪುರಿ ಮಾಡುವ ಸುಲಭ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

Holi 2023: ಹೋಳಿ ಹಬ್ಬದ ವಿಶೇಷ  ಮೃದುವಾದ ಮಲ್ಪುರಿ ಮನೆಯಲ್ಲಿಯೇ ತಯಾರಿಸಿ, ರೆಸಿಪಿ ಇಲ್ಲಿದೆ
ಹೋಳಿ ಹಬ್ಬದ ವಿಶೇಷ ಮಲ್ಪುರಿ Image Credit source: Chitra's Food Book
Follow us
|

Updated on: Mar 04, 2023 | 7:00 AM

ಮೃದುವಾದ ಮತ್ತು ಗರಿಗರಿಯಾದ ಮಲ್ಪುರಿ ಅಥವಾ ಮಾಲ್ಪುವಾ ಮನೆಯಲ್ಲಿಯೇ ತಯಾರಿಸಿ, ಆರೋಗ್ಯಕರವಾಗಿ ಹಬ್ಬವನ್ನು ಆಚರಿಸಿ. ಹೋಳಿ ಸಮಯದಲ್ಲಿ ಉತ್ತರ ಭಾರತದಲ್ಲಿ ಪ್ರತಿ ಮನೆಯಲ್ಲಿಯೂ ಈ ಸಿಹಿಯನ್ನು ತಯಾರಿಸಲಾಗುತ್ತದೆ. ಅತ್ಯಂತ ಜನಪ್ರಿಯ ಪ್ರಾದೇಶಿಕ ಸಿಹಿತಿಂಡಿಯಾಗಿರುವ ಮಲ್ಪುರಿ ಈ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಈ ಮಲ್ಪುರಿ ಅಥವಾ ಮಾಲ್ಪುವಾದ ಒಂದು ವಿಶಿಷ್ಟವಾದ ವೈಶಿಷ್ಟ್ಯವೆಂದರೆ ಅದು ಸುತ್ತಲೂ ಗರಿಗರಿಯಾಗಿ ಮತ್ತು ಮಧ್ಯದಲ್ಲಿ ಮೃದುವಾಗಿರುತ್ತದೆ. ರುಚಿಯಂತೂ ಅಧ್ಭುತ. ಆದ್ದರಿಂದ ರುಚಿಯಾದ ಮಲ್ಪುರಿ ಮಾಡುವ ಸುಲಭ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ.

ಮಲ್ಪುರಿ ಮಾಡಲು ಬೇಕಾಗುವ ಪದಾರ್ಥಗಳು:

1 ಕಪ್ – ಮೈದಾ ಹಿಟ್ಟು 1/2 ಕಪ್ – ರವೆ 2 1/2 ಕಪ್- ಸಕ್ಕರೆ 2 ಕಪ್ – ಹಾಲು ನೀರು – 1 ಕಪ್ ಏಲಕ್ಕಿ ಪುಡಿ – 1/2 ಟೀಸ್ಪೂನ್ ಫುಡ್​​ ಕಲರ್​ – 1/2 ಟೀಸ್ಪೂನ್

ಇದನ್ನೂ ಓದಿ: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ

ಮಲ್ಪುರಿ ಮಾಡುವ ವಿಧಾನ:

ಹಂತ:1 

ಮಿಕ್ಸಿಂಗ್ ಬೌಲ್ ತೆಗೆದುಕೊಂಡು 1 ಕಪ್ ಸಂಸ್ಕರಿಸಿದ ಮೈದಾ ಹಿಟ್ಟು, ರವೆ, ಅರ್ಧ ಕಪ್​​ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಅಗತ್ಯಕ್ಕೆ ಅನುಗುಣವಾಗಿ ಬೆಚ್ಚಗಿನ ಹಾಲನ್ನು ಸೇರಿಸಿ. ನಂತರ 30 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

ಹಂತ: 2

ಈಗ ಸಕ್ಕರೆ ಪಾಕವನ್ನು ತಯಾರಿಸಲು, ಬಾಣಲೆಯಲ್ಲಿ 2 ಕಪ್ ಸಕ್ಕರೆ ಮತ್ತು 1 ಕಪ್ ನೀರು ಸೇರಿಸಿ, ಒಟ್ಟಿಗೆ ಮಿಶ್ರಣ ಮಾಡಿ ಮತ್ತು 2 ನಿಮಿಷಗಳ ಕಾಲ ಅಥವಾ ಸಕ್ಕರೆ ಚೆನ್ನಾಗಿ ಕರಗುವವರೆಗೆ ತಳ ಹಿಡಿಯದಂತೆ ಕೈ ಅಲ್ಲಾಡಿಸುತ್ತೀರಿ. ನಂತರ ಇದಕ್ಕೆ ಏಲಕ್ಕಿ ಪುಡಿ ಮತ್ತು ಫುಡ್​​ ಕಲರ್​​​ ಸೇರಿಸಿ. ಇನ್ನೊಂದು 2 ನಿಮಿಷ ಅದು ಜಿಗುಟಾದ ಸ್ಥಿರತೆಯನ್ನು ಪಡೆಯುವವರೆಗೆ ಬೇಯಿಸಿ. ಈಗ ಪಾಕ ಸಿದ್ದವಾಗಿದೆ.

ಹಂತ: 3 

ಈಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಈಗಾಗಲೇ ಮಾಡಿಟ್ಟ (ಹಂತ 1) ಹಿಟ್ಟನ್ನು ಚಿಕ್ಕ ಚಮಚದಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ. ಅಂಚುಗಳು ಗೋಲ್ಡನ್ ಬ್ರೌನ್ ಆಗುವವರೆಗೆ ನೋಡಿ ಹಾಗೂ ಮಧ್ಯಮ ಉರಿಯಲ್ಲಿ ಎರಡೂ ಬದಿಗಳಲ್ಲಿ ಫ್ರೈ ಮಾಡಿ. ಈಗ ಬೆಚ್ಚಗಿನ ಸಕ್ಕರೆ ಪಾಕದಲ್ಲಿ ಫ್ರೈ ಮಾಡಿದ ಮಾಲ್ಪುವಾ ಅಥವಾ ಮಲ್ಪುರಿ ಸೇರಿಸಿ ಮತ್ತು ಸುಮಾರು 20-30 ಸೆಕೆಂಡುಗಳ ಕಾಲ ಅದನ್ನು ನೆನೆಸಲು ಬಿಡಿ. ಅಂತಿಮವಾಗಿ, ಅದನ್ನು ಪಿಸ್ತಾ ಮತ್ತು ಬಾದಾಮಿಗಳಿಂದ ಅಲಂಕರಿಸಿ. ಈಗ ರುಚಿಯಾದ ಹೋಳಿ ಹಬ್ಬದ ವಿಶೇಷ ಮಲ್ಪುರಿ ಸಿದ್ಧವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ :