Updated on:Feb 05, 2023 | 2:00 PM
ಪಶ್ಚಿಮ ಬಂಗಾಳ ಅಲ್ಲಿನ ಸಿಹಿತಿಂಡಿಗಳಿಂದಲೇ ಜನರನ್ನು ಆಕರ್ಷಿಸುತ್ತಿದೆ. ಅಲ್ಲಿನ ಪ್ರತಿಯೊಂದು ಸಮಾರಂಭಗಳಲ್ಲಿಯೂ ಕೂಡ ಸಾಕಷ್ಟು ಬಗೆಯ ವಿಶೇಷ ಸಿಹಿ ಭಕ್ಷ್ಯಗಳನ್ನು ಕಾಣಬಹುದು. ಅಂತಹ ಕೆಲವು ಜನಪ್ರಿಯ ಸಿಹಿ ತಿಂಡಿಗಳ ಕುರಿತು ಮಾಹಿತಿ ಇಲ್ಲಿದೆ.
ರಸಗುಲ್ಲಾ: ಕೋಲ್ಕತ್ತಾದ ಪ್ರಸಿದ್ಧ ರಸಗುಲ್ಲಾಗಳು ದೇಶದಾದ್ಯಂತ ಜನಪ್ರಿಯವಾಗಿವೆ. ಸಕ್ಕರೆಯ ಪಾಕದಲ್ಲಿ ಈ ರಸಗುಲ್ಲಾ ನೋಡಿದಾಕ್ಷಣ ಬಾಯಲ್ಲಿ ನಿರೂರುವುದಂತೂ ಖಂಡಿತಾ.
ಲಿಯಾಂಗ್ಚಾ: ಇದು ಒಂದು ರೀತಿಯ ಗುಲಾಬ್ ಜಾಮೂನು ಅಂತಾನೇ ಹೇಳಬಹುದು. ಲಿಯಾಂಗ್ಚಾವನ್ನು ಎಣ್ಣೆ, ಹಿಟ್ಟು, ಸಕ್ಕರೆ ಪಾಕ, ಹಾಲಿನ ಪುಡಿ, ಮೊಸರು ಮತ್ತು ಖೋವಾ ಖೀರ್‌ನಿಂದ ತಯಾರಿಸಲಾಗುತ್ತದೆ.
ಮೋವಾ: ಇದು ಬೆಲ್ಲ, ತುಪ್ಪ, ಒಣದ್ರಾಕ್ಷಿ, ಡ್ರೈ ಫ್ರೂಟ್ಸ್ ಹಾಗೂ ಏಲಕ್ಕಿ ಪುಡಿ ಬಳಸಿ ತಯಾರಿಸಲಾಗುತ್ತದೆ. ಮದುವೆ ಸಮಾರಂಭಗಳಲ್ಲಿ ಈ ಸಿಹಿಯನ್ನು ನೀವು ಕಾಣಬಹುದು, ಇದು ಲಡ್ಡುಗಳನ್ನು ಹೋಲುತ್ತದೆ.
ಚಾನರ್ ಜಿಲಿಪಿ: ಇದನ್ನು ಪನೀರ್ ಜಲೇಬಿ ಎಂದೂ ಕರೆಯುತ್ತಾರೆ. ಉತ್ತರ ಭಾರತದಾದ್ಯಂತ ಜನಪ್ರಿಯ ಸಿಹಿತಿಂಡಿಗಳಲ್ಲಿ ಇದು ಪ್ರಮುಖವಾಗಿದೆ.
ಬಾಬರ್ಶಾ: ಇದು ಬಂಗಾಳದ ಮಿಡ್ನಾಪುರ ಜಿಲ್ಲೆಯ ನಗರವೊಂದರಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಈ ಸಿಹಿಯನ್ನು ಹಾಲಿನಿಂದ ತಯಾರಿಸಲಾಗುತ್ತದೆ ಹಾಗೂ ಜೇನುತುಪ್ಪದೊಂದಿಗೆ ಸವಿದರೆ ಅಧ್ಬುತ ರುಚಿ ನೀಡುತ್ತದೆ.
ಸೋಂದೇಶ್: ಮತ್ತೊಂದು ಸುಪ್ರಸಿದ್ಧ ಬಂಗಾಳಿ ಸಿಹಿತಿಂಡಿ. ಇದನ್ನು ಬೇಳೆ ಹಿಟ್ಟು, ಏಲಕ್ಕಿ ಪುಡಿ, ಗೋಡಂಬಿ, ತುಪ್ಪ ಹಾಗೂ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಇದು ಕಡಿಮೆ ಸಿಹಿಯನ್ನು ಹೊಂದಿದೆ ಮತ್ತು ಆರೋಗ್ಯಕರ ಸಿಹಿಯಾಗಿದೆ.
Published On - 1:59 pm, Sun, 5 February 23