- Kannada News Lifestyle Food festivals 2023: Here are the details of food events for the month of February
Food festivals 2023: ಆಹಾರಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ, ಫೆಬ್ರವರಿ ತಿಂಗಳ ಫುಡ್ ಇವೆಂಟ್‌ಗಳ ವಿವರ ಇಲ್ಲಿದೆ
ಈ ಫೆಬ್ರವರಿ ತಿಂಗಳಿನಲ್ಲಿ ಆಹಾರ ಮೇಳಗಳು ನಡೆಯುತ್ತಿದೆ. ಆಹಾರಪ್ರಿಯರಿಗೆ ಇದು ಹೇಳಿ ಮಾಡಿಸಿದ ಉತ್ಸವವಾಗಿದೆ. ಕೆಲವೊಂದು ಆಹಾರ ಮೇಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ವೀಕೆಂಡ್‌ನ್ನು ಆನಂದಿಸಿ.
Updated on:Feb 05, 2023 | 4:20 PM

ವೀಕೆಂಡ್ ಬಂದೇಬಿಟ್ಟಿದೆ. ಈ ವಾರಂತ್ಯದಲ್ಲಿ ಆಹಾರ ಉತ್ಸವಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಸಮಯವನ್ನು ಕಳೆಯಬಹುದು. ಈ ಫೆಬ್ರವರಿ ತಿಂಗಳಲ್ಲಿ ಹಲವಾರು ಆಹಾರ ಉತ್ಸವಗಳು ನಡೆಯುತ್ತಿದೆ. ನಗರದಲ್ಲಿ ನಡೆಯುತ್ತಿರುವ ಉತ್ತಮವಾದ ಫುಡ್ ಇವೆಂಟ್‌ಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.

ಪ್ಯಾಲೇಟ್ ಫೆಸ್ಟ್ 2023, ದೆಹಲಿ: ಎರಡು ದಿನಗಳ ಕಾಲ ನಡೆಯುವ ಈ ಆಹಾರಮೇಳವು ಏರೋಸಿಟಿ ಗ್ರೌಂಡ್‌ನಲ್ಲಿ ಮಿರ್ಚಿ ಲೈವ್‌ನ ಸಹಯೋಗದಲ್ಲಿ ನಡೆಯಲಿದೆ. ಈ ಫೆಸ್ಟ್ ಫೆಬ್ರವರಿ 4 ಮತ್ತು 5 ನೇ ತಾರೀಕಿನಂದು ಬೆಳಗ್ಗೆ 11 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಆಹಾರ ಉತ್ಸವದಲ್ಲಿ ನಗರದ ಪಂಚತಾರ ಹೋಟೇಲ್‌ಗಳಾದ ಹಯಾಟ್, ಸೌಲಿನೈರ್ ಐಹೆಚ್‌ಸಿಎಲ್, ಅಂಬಾಸಿಡರ್ ಮತ್ತು ಹೆಚ್ಚಿನ ಹೋಟೆಲ್‌ಗಳು ಸ್ಟಾಲ್‌ಗಳನ್ನು ತೆರೆಯಲಿದೆ.

ಲಾ ಫಿಜ್ಜೆಯರ್ ಲಿಮಿಟೆಡ್ ಎಡಿಷನ್ ಮೆನು, ಬೆಂಗಳೂರು : ಇದು ಇಟಾಲಿಯನ್ ಖಾದ್ಯಗಳ ಆಹಾರ ಉತ್ಸವವಾಗಿದೆ. ಪಿಜ್ಜಾ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜೆ ಡಬ್ಲ್ಯೂ ಮ್ಯಾರಿಯೊಟ್‌ನಲ್ಲಿ ಆಯೋಜಿಸಿದ ಈ ಫುಡ್ ಫೆಸ್ಟ್ ಫೆಬ್ರವರಿ 12ರವರೆಗೆ ನಡೆಯಲಿದೆ. ಇಟಾಲಿಯನ್ ಫುಡ್‌ಗಳ ಜೊತೆಗೆ ಪನೀರ್ ಟಿಕ್ಕ ಪಿಜ್ಜಾವನ್ನು ಕೂಡಾ ಇಲ್ಲಿ ಸವಿಯಬಹುದು

ಹೈದರಬಾದ್ ಫುಡ್ ಫೆಸ್ಟಿವಲ್- ಕೆ3 ಮ್ಯಾರಿಯೋಟ್ ನವದೆಹಲಿ: ಏರೋಸಿಟಿ ‘ನಿಜಾಮ್ಸ್’ ಆಯೋಜಿಸುತ್ತಿರುವ ಈ ಹೈದರಬಾದ್ ಫುಡ್ ಫೆಸ್ಟಿವಲ್ ಫೆಬ್ರವರಿ 1 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 15 ರವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ಮಾಸ್ಟರ್ ಚೆಫ್ ಮುಜೀಬ್ ಉರ್ ರೆಹೆಮಾನ್ ಮತ್ತು ಅವರ ತಂಡದಿಂದ ತಯಾರಾಗುವ ರುಚಿಕರವಾದ ತಿನಿಸುಗಳನ್ನು ಸವಿಯಬಹುದು.

ವಿಂಟರ್ ಸ್ಟ್ರೀಟ್ ಫೆಸ್ಟಿವಲ್ ದೆಹಲಿ: ಫೆಬ್ರವರಿ 18 ರವರೆಗೆ ನಡೆಯಲಿದೆ. ಚಳಿಗಾಲದ ಈ ಆಹಾರ ಮೇಳದಲ್ಲಿ ವೆಜ್ ಕಬಾಬ್, ಅವಕಾಡೊ ಟೋಸ್ಟ್, ಆಂಧ್ರ ಗಂಟೂರ್ ಮಶ್ರೂಮ್ ಚಿಲ್ಲಿ, ಪೇಶಾವರಿ ಪನೀರ್ ಟಿಕ್ಕಾ ಜೊತೆಗೆ ಸಾಕಷ್ಟು ಸ್ಟ್ರೀಟ್ ಫುಡ್ಗಳನ್ನು ಸವಿಯಬಹುದು.

ಖುಬಾನಿಯ ಟರ್ಕಿಶ್ ಫುಡ್ ಫೆಸ್ಟಿವಲ್: ಅಂದಾಜ್ ಹೋಟೆಲ್ ದೆಹಲಿಯಲ್ಲಿ ಟರ್ಕಿಶ್ ಫುಡ್ ಫೆಸ್ಟಿವಲ್ ಫೆಬ್ರವರಿ 15ರ ವರೆಗೆ ನಡೆಯಲಿದ್ದು, ಟರ್ಕಿ ದೇಶದ ಬಾನಸಿಗರಿಂದ ತಯಾರಾಗುವ ಆಹಾರಗಳನ್ನು ನೀವಿಲ್ಲಿ ಸವಿಯಬಹುದು. ಸಾಂಪ್ರದಾಯಿಕ ಟರ್ಕಿಶ್ ಚಹಾದಿಂದ ಹಿಡಿದು ಎಲ್ಲಾ ಬಗೆಯ ಆಹಾರಗಳನ್ನು ಇಲ್ಲಿ ಕಾಣಬಹುದು.

ದಕ್ಷಿಣ ಆಫ್ರಿಕಾದ ಆಹಾರ ಉತ್ಸವ: ನೋಯ್ಡಾದ ಕ್ರೌನ್ ಪ್ಲಾಜಾದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ಫುಡ್ ಫೆಸ್ಟಿವಲ್ ಫೆಬ್ರವರಿ 3 ರಿಂದ ಫೆಬ್ರವರಿ 9 ರವರೆಗೆ ನಡೆಯಲಿದೆ. ಇಲ್ಲಿ ನೀವು ಚೆಫ್ ಅಬಿಗೈಲ್ ಮತ್ತು ಚೆಫ್ ಸಿಫೋಕಾಜಿ ತಯಾರಿಸಿದ ದಕ್ಷಿಣ ಆಫ್ರಿಕಾದ ಖಾದ್ಯವನ್ನು ಸವಿಯಬಹದು.

ಶ್ರೀಲಂಕಾ ಫುಡ್ ಫೆಸ್ಟಿವಲ್- ಹೋಟೆಲ್ ರಾಯಲ್ ಆರ್ಕಿಡ್ ಬೆಂಗಳೂರು: ಈ ತಿಂಗಳಲ್ಲಿ ಬೆಂಗಳೂರಿನ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ಶ್ರೀಲಂಕಾದಲ್ಲಿನ ಆಹಾರಗಳ ಮೇಳ ನಡೆಯಲಿದೆ. ಫೆಬ್ರವರಿ 3 ರಿಂದ 12ನೇ ತಾರೀಕಿನ ವರೆಗೆ ನಡೆಯುವ ಈ ಫುಡ್ ಫೆಸ್ಟ್ನಲ್ಲಿ ಲಂಕಾದ ಮೀನಿನ ಭಕ್ಷ್ಯದಿಂದ ಹಿಡಿದು ಉಪ್ಪಿನಕಾಯಿಯವರೆಗೆ ಎಲ್ಲಾ ರೀತಿಯ ಶ್ರೀಲಂಕಾದ ಭಕ್ಷ್ಯವನ್ನು ತಯಾರಿಸಲಾಗುತ್ತದೆ.
Published On - 4:20 pm, Sun, 5 February 23



















