Healthy Relationship: ನಿಮ್ಮಿಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿಂಪಲ್​​ ಟಿಪ್ಸ್​​ ಫಾಲೋ ಮಾಡಿ

ನೀವು ಪ್ರತಿದಿನವೂ ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ವಿಶೇಷ ಕ್ಷಣಗಳನ್ನು ಒಟ್ಟಿಗೆ ಕಳೆದರೆ ನಿಮ್ಮ ಬಂಧ ಗಟ್ಟಿಯಾಗುತ್ತದೆ. ಇಂತಹ ಅಮೂಲ್ಯ ಕ್ಷಣವನ್ನು ಕಳೆಯಲು ಪ್ರೇಮಿಗಳ ದಿನ, ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ವಿಶೇಷ ಸಂದರ್ಭಗಳ ಅಗತ್ಯವಿಲ್ಲ.

Healthy Relationship: ನಿಮ್ಮಿಬ್ಬರ ನಡುವಿನ  ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿಂಪಲ್​​ ಟಿಪ್ಸ್​​ ಫಾಲೋ ಮಾಡಿ
ಸಾಂದರ್ಭಿಕ ಚಿತ್ರImage Credit source: FamilyToday
Follow us
| Updated By: Digi Tech Desk

Updated on:Feb 06, 2023 | 6:17 PM

ನೀವು ಪ್ರತಿದಿನವೂ ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ವಿಶೇಷ ಕ್ಷಣಗಳನ್ನು ಒಟ್ಟಿಗೆ ಕಳೆದರೆ ನಿಮ್ಮ ಬಂಧ ಗಟ್ಟಿಯಾಗುತ್ತದೆ. ಇಂತಹ ಅಮೂಲ್ಯ ಕ್ಷಣವನ್ನು ಕಳೆಯಲು ಪ್ರೇಮಿಗಳ ದಿನ, ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ವಿಶೇಷ ಸಂದರ್ಭಗಳ ಅಗತ್ಯವಿಲ್ಲ.ಅನೇಕ ದಂಪತಿಗಳು ತಮ್ಮ ಜೀವನದಲ್ಲಿ ಒಬ್ಬ ಬೆಂಗಲಿಗ ವ್ಯಕ್ತಿಯನ್ನು ಪಡೆಯಲು ಬಯಸುತ್ತಾರೆ. ಆದರೆ ಕಾಲಾನಂತರದಲ್ಲಿ ಪರಿಪೂರ್ಣ ದಂಪತಿಗಳು ಅರ್ಹವಾದ ಗಮನವನ್ನು ಪರಸ್ಪರ ನೀಡದಿದ್ದರೆ, ಅವರ ಮಧ್ಯೆ ಬಿರುಕು ಮೂಡಬಹುದು. ಪ್ರತಿನಿತ್ಯ ನಿಮ್ಮ ಸಂಗಾತಿಯ ಜೊತೆಗೆ ಅರ್ಥಪೂರ್ಣ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವುದು, ಅವರ ಪ್ರಯತ್ನಗಳಿಗಾಗಿ ಅವರನ್ನು ಶ್ಲಾಘಿಸುವುದು ಇವೆಲ್ಲವೂ ಸಂಬಂಧದಲ್ಲಿ ಭಾವನಾತ್ಮಕ ಅನ್ಯೋನ್ಯತೆಯನ್ನು ಗಾಢವಾಗಿಸುತ್ತದೆ.

ನೀವು ಪ್ರತಿದಿನವೂ ನಿಮ್ಮ ಸಂಗಾತಿಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಂಡು ವಿಶೇಷ ಕ್ಷಣಗಳನ್ನು ಒಟ್ಟಿಗೆ ಕಳೆದರೆ ನಿಮ್ಮ ಬಂಧ ಗಟ್ಟಿಯಾಗುತ್ತದೆ. ಇಂತಹ ಅಮೂಲ್ಯ ಕ್ಷಣವನ್ನು ಕಳೆಯಲು ಪ್ರೇಮಿಗಳ ದಿನ, ಹುಟ್ಟುಹಬ್ಬ ಅಥವಾ ವಿವಾಹ ವಾರ್ಷಿಕೋತ್ಸವದ ವಿಶೇಷ ಸಂದರ್ಭಗಳ ಅಗತ್ಯವಿಲ್ಲ. ಇಂತಹ ಪ್ರತಿನಿತ್ಯದ ಮಾತುಕತೆ ನಿಮ್ಮ ದಾಂಪತ್ಯ ಜೀವನ ಅಥವಾ ಪ್ರೀತಿಯ ಸಂಬಂಧವನ್ನು ಉತ್ತಮಗೊಳಿಸುತ್ತದೆ. ಸಂಬಂಧಗಳು ಪ್ರೀತಿ, ವಿಶ್ವಾಸ ಮತ್ತು ಪರಸ್ಪರ ಮೆಚ್ಚುಗೆಯ ಮೆಲೆ ನಿರ್ಮಿಸಲ್ಪಟ್ಟಿವೆ. ನಿಮ್ಮ ಸಂಗಾತಿಗೆ ಪ್ರತಿದಿನ ವಿಶೇಷ ಭಾವನೆ ಮೂಡಿಸುವುದು, ಬಲವಾದ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಇದು ಯಾವುದು ದುಬಾರಿಯಾದುದಲ್ಲ, ಪ್ರೀತಿಯ ಸೂಕ್ಷ್ಮ ವಿಚಾರವಾಗಿದೆ ಎಂದು ಎನ್ಸೊ ವೆಲ್‌ನೆಸ್‌ನ ಸಂಸ್ಥಾಪಕ ಅರೌಬಾ ಕಬೀರ್ ಹೇಳುತ್ತಾರೆ.

ಇದನ್ನೂ ಓದಿ: ಪ್ರೇಮಿಗಳ ದಿನ ಸಮೀಪಿಸುತ್ತಿದೆ, ವಾರಪೂರ್ತಿಯ ವಿಶೇಷತೆಗಳು ಇಲ್ಲಿವೆ

ನಿಮ್ಮ ಸಂಗಾತಿಗೆ ಪ್ರತಿದಿನ ವಿಶೇಷ ಭಾವನೆ ಮೂಡಿಸುವ ಸಿಂಪಲ್​​ ಟಿಪ್ಸ್​​​ ಇಲ್ಲಿವೆ:

ಕೃತಜ್ಞತಾ ಭಾವ ರೂಡಿಸಿಕೊಳ್ಳಿ:

ನೀವು ನಿಮ್ಮ ಸಂಗಾತಿಯಲ್ಲಿ ಮೆಚ್ಚುವ ವಿಷಯದ ಬಗ್ಗೆ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ದಿನವನ್ನು ಪ್ರಾರಂಭಿಸಿ. ಅದು ಅವರ ವ್ಯಕ್ತಿತ್ವ ಆಗಿರಬಹುದು, ಸಾಧನೆಯಾಗಿರಬಹುದು ಏನೇ ಆಗಿರಬಹುದು. ನೀವು ತಿಳಿಸುವ ಅಭಿನಂದನೆಗಳು ಸಂಗಾತಿಯ ಮನಸ್ಸಿಗೆ ಖುಷಿ ಕೊಡುತ್ತದೆ.

ದೈಹಿಕ ವಾತ್ಸಲ್ಯವನ್ನು ತೋರಿಸಿ:

ಅಪ್ಪುಗೆಗಳು, ಚುಂಬನಗಳು ಹಾಗೂ ಕೈಗಳನ್ನು ಹಿಡಿದುಕೊಳ್ಳುವಂತಹ ದೈಹಿಕ ವಾತ್ಸಲ್ಯವು ನಿಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುವಂತೆ ಮಾಡುತ್ತದೆ.

ಅವರ ಮಾತುಗಳನ್ನು ಆಲಿಸಿ:

ನಿಮ್ಮ ಸಂಗಾತಿ ಹೇಳುವ ಮಾತುಗಳನ್ನು ಸಮಯ ತೆಗೆದುಕೊಂಡು ಕೇಳಿ. ಅವರ ಆಲೋಚನೆಗಳು ಮತ್ತು ಭಾವನೆಗಳಲ್ಲಿ ನೀವು ಕುಡಾ ಆಸಕ್ತಿ ಹೊಂದಿದ್ದೀರಿ ಎಂದು ತೋರಿಸಿ.

ಚಿಕ್ಕ ವಿಷಯಗಳಿಗೆ ಮೆಚ್ಚುಗೆಯನ್ನು ತೋರಿಸಿ:

ಕೆಲಸದಿಂದ ಮನೆಗೆ ಹೋಗುವ ದಾರಿಯಲ್ಲಿ ದಿನಸಿ ಸಾಮಾನುಗಳನ್ನು ತೆಗೆದುಕೊಂಡು ತೆಗೆದುಕೊಂಡು ಹೋಗುವಂತಹದ್ದು, ರಾತ್ರಿ ಊಟಕ್ಕೆ ಅಡುಗೆ ಮಾಡುವುದು, ಮನೆ ಕೆಲಸಗಳಿಗೆ ಸಹಾಯ ಮಾಡುವುದು ಈ ರೀತಿಯಾಗಿ ನಿಮ್ಮ ಸಂಗಾತಿಯು ನಿಮ್ಮ ಜೀವನವನ್ನು ಸುಲಭಗೊಳಿಸಲು ಮಾಡುವ ಸಣ್ಣ ಸಣ್ಣ ಪ್ರಯತ್ನಗಳಿಗೂ ಪ್ರಶಂಸಿಸಿ.

ಉಡುಗೊರೆಗಳನ್ನು ನೀಡಿ:

ನಿಮ್ಮ ಸಂಗಾತಿಗೆ ವಿಶೇಷವಾದ್ದನ್ನು ನೀಡಿ, ಅದು ಉಡುಗೊರೆಯಾಗಿರಲಿ, ಪ್ರವಾಸವಾಗಿರಲಿ ಅಥವಾ ಲಾಂಗ್ ಡ್ರೈವ್​​​ ಆಗಿರಲಿ ಈ ರೀತಿಯಾದ ಆಶ್ಚರ್ಯಕರವಾದುದನ್ನು ಸಂಗಾತಿಗೆ ನೀಡುತ್ತಿರಿ.

ಬೆಂಬಲವಾಗಿರಿ:

ನಿಮ್ಮ ಸಂಗಾತಿಯು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನೀವು ಬೆಂಬಲವಾಗಿ ನಿಂತುಕೊಳ್ಳಬೇಕು ಹಾಗೂ ಸಲಹೆಗಳನ್ನು ನೀಡಬೇಕು.ನೀವು ಅವರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅವರಿಗೆ ತಿಳಿಸಿ. ಅವರು ನಿಮಗೆ ಎಷ್ಟು ಅರ್ಥವಾಗಿದ್ದಾರೆ ಎಂಬುದರ ಬಗ್ಗೆ ಮಾತನಾಡಿ. ಹಾಗೂ ನಿಮ್ಮ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:58 pm, Sun, 5 February 23