White Hair Remedies: ಬಿಳಿ ಕೂದಲಿಂದ ಬೇಸತ್ತಿದ್ದೀರಾ?; ದಾಳಿಂಬೆ ಎಣ್ಣೆಯಲ್ಲಿದೆ ನೈಸರ್ಗಿಕ ಪರಿಹಾರ

pomegranate oil: ಬಿಳಿ ಕೂದಲನ್ನು ತೊಡೆದುಹಾಕಲು ಮತ್ತು ಶಾಶ್ವತವಾಗಿ ಕೂದಲಿನ ಬಣ್ಣವನ್ನು ಕಪ್ಪಾಗಿಸಲು ನೀವು ಮನೆಯಲ್ಲಿ ದಾಳಿಂಬೆ ಎಣ್ಣೆಯನ್ನು ತಯಾರಿಸಿಕೊಂಡು, ಹಚ್ಚಿಕೊಳ್ಳಬಹುದು.

White Hair Remedies: ಬಿಳಿ ಕೂದಲಿಂದ ಬೇಸತ್ತಿದ್ದೀರಾ?; ದಾಳಿಂಬೆ ಎಣ್ಣೆಯಲ್ಲಿದೆ ನೈಸರ್ಗಿಕ ಪರಿಹಾರ
ಬಿಳಿ ಕೂದಲು
Follow us
ಸುಷ್ಮಾ ಚಕ್ರೆ
|

Updated on: Feb 06, 2023 | 11:34 AM

ಮೊದಲೆಲ್ಲ 50 ವರ್ಷ ದಾಟಿದ ಮೇಲೆ ಬಿಳಿ ಕೂದಲು (White Hair) ಮೂಡುತ್ತಿತ್ತು. ಬಿಳಿಕೂದಲಾದರೆ ವಯಸ್ಸಾಯ್ತು ಎಂದು ಲೆಕ್ಕಾಚಾರ ಹಾಕಲಾಗುತ್ತಿತ್ತು. ಆದರೆ, ಈಗಿನ ಜೀವನಶೈಲಿ (Lifestyle), ಆಹಾರ ಕ್ರಮದಿಂದ ಮಕ್ಕಳಿಗೂ ಬಿಳಿ ಕೂದಲು ಹೆಚ್ಚಾಗುತ್ತಿದೆ. ಈ ಬಿಳಿ ಕೂದಲನ್ನು ಮರೆಮಾಚಲು ಎಲ್ಲರೂ ಸಾಕಷ್ಟು ಪ್ರಯತ್ನ ಪಡುತ್ತಾರೆ. ಕೆಲವರು ಹೇರ್ ಡೈ, ಮೆಹಂದಿ, ಕಲರಿಂಗ್ ಮುಂತಾದ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ, ನೈಸರ್ಗಿಕವಾಗಿಯೂ ಬಿಳಿ ಕೂದಲನ್ನು ನಿಯಂತ್ರಿಸಲು ಸಾಧ್ಯವಿದೆ.

ಬಿಳಿ ಕೂದಲನ್ನು ತೊಡೆದುಹಾಕಲು ಮತ್ತು ಶಾಶ್ವತವಾಗಿ ಕೂದಲಿನ ಬಣ್ಣವನ್ನು ಕಪ್ಪಾಗಿಸಲು ನೀವು ಮನೆಯಲ್ಲಿ ದಾಳಿಂಬೆ ಎಣ್ಣೆಯನ್ನು ತಯಾರಿಸಿಕೊಂಡು, ಹಚ್ಚಿಕೊಳ್ಳಬಹುದು. ಇದು ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ. ಇದರಿಂದ ಆಗುವ ಅಡ್ಡಪರಿಣಾಮಗಳು ಕೂಡ ಕಡಿಮೆ.

ಇದನ್ನೂ ಓದಿ: Curry Leaves for Hair: ಕರಿಬೇವಿನ ಎಲೆಗಳಿಂದ ನಿಮ್ಮ ಕೂದಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಹುದು

ದಾಳಿಂಬೆ ಎಣ್ಣೆ ನಿಮ್ಮ ಕೂದಲಿಗೆ ಬಣ್ಣ ನೀಡುವುದಲ್ಲದೆ, ಈ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಣ್ಣೆಗೆ ಸೇರಿಸುವ ಅಜ್ವೈನ್ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿಫಂಗಲ್ ಮತ್ತು ಆ್ಯಂಟಿವೈರಲ್ ಗುಣಗಳನ್ನು ಹೊಂದಿದೆ, ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.

ಒಣ ಮತ್ತು ನಿರ್ಜೀವ ಕೂದಲಿಗೆ ಈ ಎಣ್ಣೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಎಣ್ಣೆಯು ತೆಂಗಿನಕಾಯಿಯ ಗುಣಗಳನ್ನು ಸಹ ಹೊಂದಿದೆ. ಇದು ಕೂದಲನ್ನು ತೇವಗೊಳಿಸಲು ಮತ್ತು ಕೂದಲಿನ ತೇವಾಂಶವನ್ನು ಹಿಡಿದಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಕೂದಲು ಆರೋಗ್ಯಕರವಾಗಿ ಹೊಳೆಯುತ್ತದೆ.

ಇದನ್ನೂ ಓದಿ: Cooking Oil: ಹೃದಯದ ಆರೋಗ್ಯ ಸುಧಾರಿಸಲು ಈ 5 ಅಡುಗೆ ಎಣ್ಣೆಯನ್ನು ಟ್ರೈ ಮಾಡಿ

ದಾಳಿಂಬೆ ಎಣ್ಣೆ ತಯಾರಿಸುವುದು ಹೇಗೆ?: ದಾಳಿಂಬೆ ಸಿಪ್ಪೆ, ಹಸಿ ನೆಲ್ಲಿ ಕಾಯಿ, ಕಲೋಂಜಿ, ಕರಿಬೇವಿನ ಎಲೆಗಳು, ಬೀಟ್ರೂಟ್, ದಾಸವಾಳದ ಹೂವುಗಳು, ಸೆಲರಿ ಮತ್ತು ಗೋರಂಟಿ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಉರಿಯಲ್ಲಿ ಕುದಿಸಿ. ಎಲೆಗಳು ಮತ್ತು ಬೀಜಗಳು ಒಣಗಿ ಕಪ್ಪು ಬಣ್ಣಕ್ಕೆ ತಿರುಗಿದಾಗ ಈ ಎಣ್ಣೆಯನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈ ಎಣ್ಣೆಯನ್ನು ಹಚ್ಚಿದ ನಂತರ ಕನಿಷ್ಠ 36 ಗಂಟೆಗಳ ಕಾಲ ನಿಮ್ಮ ಕೂದಲನ್ನು ತೊಳೆಯಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ