- Kannada News Photo gallery Curry Leaves for Hair: Curry leaves can cure all your Hair Problems, Kannada Beauty Tips
Curry Leaves for Hair: ಕರಿಬೇವಿನ ಎಲೆಗಳಿಂದ ನಿಮ್ಮ ಕೂದಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಹುದು
ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುವಲ್ಲಿ ಕರಿಬೇವು ಎಷ್ಟು ಪ್ರಯೋಜನಕಾರಿ? ಹಾಗೂ ಕರಿಬೇವಿನ ಎಲೆಗಳನ್ನು ಕೂದಲಿಗೆ ಉಪಯೋಗಿಸುವ ಕ್ರಮಗಳ ಕುರಿತು ಮಾಹಿತಿ ಇಲ್ಲಿದೆ.
Updated on:Jan 31, 2023 | 5:28 PM

ಸಾಮಾನ್ಯವಾಗಿ ಒಗ್ಗರಣೆಯಲ್ಲಿ ಕರಿಬೇವಿನ ಎಲೆಗಳನ್ನು ಬಳಸಲಾಗುತ್ತದೆ. ಆದರೆ ಇದು ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ?

. ನಿಮ್ಮ ಕೂದಲಿಗೆ ಪೋಷಣೆಯನ್ನು ನೀಡುವಲ್ಲಿ ಕರಿಬೇವು ಎಷ್ಟು ಪ್ರಯೋಜನಕಾರಿ? ಹಾಗೂ ಉಪಯೋಗಿಸುವ ಕ್ರಮಗಳ ಕುರಿತು ಮಾಹಿತಿ ಇಲ್ಲಿದೆ.

ಹಾನಿಗೊಳಗಾದ ಕೂದಲಿಗೆ ಪೋಷಣೆಯನ್ನು ನೀಡುತ್ತದೆ: ಕರಿಬೇವಿನ ಎಲೆಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಒಣ ಕೂದಲಿನ ಎಳೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಕೂದಲು ಆರೋಗ್ಯಕರವಾಗಿ ಇರಲು ಹಾಗೂ ಹೊಳಪು ಉಳಿಸಿಕೊಳ್ಳಲು ಸಹಾಯಕವಾಗಿದೆ.

ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ: ಕರಿಬೇವಿನ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ, ಮತ್ತು ಬಿ, ಪ್ರೋಟೀನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ನೆತ್ತಿಯಲ್ಲಿ ರಕ್ತ ಪರಿಚಲನೆ ಮತ್ತು ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಕೂದಲ ಬೆಳವಣೆಗೆಗೆ ಸಹಾಯಕವಾಗಿದೆ. ಒಂದು ಬಟ್ಟಲಿನಲ್ಲಿ ಸಮಾನ ಪ್ರಮಾಣದಲ್ಲಿ ಮೆಂತ್ಯ ಮತ್ತು ಕರಿಬೇವಿನ ಎಲೆಗಳನ್ನು ಹಾಗೂ ನೆಲ್ಲಿಕಾಯಿಯನ್ನು ಸೇರಿಸಿ. ದಪ್ಪ ಪೇಸ್ಟ್ ಮಾಡಲು ಪದಾರ್ಥಗಳನ್ನು ಪುಡಿಮಾಡಿ. ಈ ಪೇಸ್ಟ್ನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು 30 ರಿಂದ 45 ನಿಮಿಷಗಳ ಕಾಲ ಬಿಡಿ. ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ತಲೆ ಹೊಟ್ಟು ಸಮಸ್ಯೆಯನ್ನು ನಿವಾರಿಸುತ್ತದೆ: ಕರಿಬೇವಿನ ಎಲೆಗಳು ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು ಅದು ನೆತ್ತಿಯಿಂದ ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ಒಂದು ಹಿಡಿ ಕರಿಬೇವಿನ ಎಲೆಗಳನ್ನು ದಪ್ಪ ಪೇಸ್ಟ್ ಮಾಡಿ ಮತ್ತು ಅದಕ್ಕೆ ಮೊಸರು ಸೇರಿಸಿ. ತಲೆಗೆ ಹಚ್ಚಿ ಹಾಗೂ ಕನಿಷ್ಠ ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಸೀಳು ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ: ವಿಟಮಿನ್ ಬಿ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು ಕೂದಲು ತುದಿ ಸೀಳು ಬಿಡುವ ಸಮಸ್ಯೆಯನ್ನು ನಿವಾರಿಸುತ್ತದೆ. ನೀವು ಕರಿಬೇವಿನ ಎಲೆಗಳ ಎಣ್ಣೆಯನ್ನು ತಯಾರಿಸಿ ಕೂದಲಿಗೆ ಹಚ್ಚಬಹುದಾಗಿದೆ.

ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ: ವಿಟಮಿನ್‌ಗಳು, ಪ್ರೋಟೀನ್‌ಗಳು ಮತ್ತು ಅಗತ್ಯ ಪೋಷಕಾಂಶಗಳ ಸಮೃದ್ಧ ಮೂಲ, ಕರಿಬೇವಿನ ಎಲೆಗಳು ನೆತ್ತಿಯನ್ನು ಪೋಷಿಸಲು, ಕೂದಲಿನ ಕಿರುಚೀಲಗಳನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 10 ರಿಂದ 15 ತಾಜಾ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನಯವಾದ ಪೇಸ್ಟ್ ಮಾಡಿ. ನಂತರ ಇದಕ್ಕೆ ಇರುಳ್ಳಿ ರಸವನ್ನು ಸೇರಿಸಿ. ಒಂದು ಗಂಟೆಯ ಕಾಲ ಹಾಗೆಯೇ ಬಿಡಿ ಮತ್ತು ನಿಮ್ಮ ಆಯ್ಕೆಯ ಶ್ಯಾಂಪೂ ಬಳಸಿ, ಕೂದಲು ತೊಳೆಯಿರಿ.
Published On - 5:28 pm, Tue, 31 January 23




