- Kannada News Photo gallery Cricket photos Dinesh Karthik shares romantic post: Fans Brutally Troll Murali Vijay
Dinesh Karthik: ಮುರಳಿ ವಿಜಯ್ ನಿವೃತ್ತಿ ಬೆನ್ನಲ್ಲೇ ರೋಮ್ಯಾಂಟಿಕ್ ಫೋಟೋ ಹಂಚಿಕೊಂಡ DK
Dinesh Karthik - Murali Vijay:
Updated on:Jan 31, 2023 | 4:04 PM

ಜನವರಿ 30 ರಂದು ಟೀಮ್ ಇಂಡಿಯಾ ಆಟಗಾರ ಮುರಳಿ ವಿಜಯ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ರೋಮ್ಯಾಂಟಿಕ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಇಲ್ಲಿ ಮುರಳಿ ವಿಜಯ್ ಅವರ ನಿವೃತ್ತಿ ಬೆನ್ನಲ್ಲೇ ಡಿಕೆ ಉದ್ದೇಶಪೂರ್ವಕವಾಗಿ ಫೋಟೋ ಶೇರ್ ಮಾಡಿದ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಮುರಳಿ ವಿಜಯ್ ಹಾಗೂ ದಿನೇಶ್ ಕಾರ್ತಿಕ್ ತಮಿಳುನಾಡು ಮೂಲದ ಕ್ರಿಕೆಟಿಗರು. ಆದರೆ ಮುರಳಿ ವಿಜಯ್, ಡಿಕೆಯ ಪತ್ನಿಯನ್ನೇ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಸುಖಸಂಸಾರದಲ್ಲಿ ಹುಳಿ ಹಿಂಡಿದ್ದರು. ಈ ಅನೈತಿಕ ಸಂಬಂಧ ಗೊತ್ತಾಗುತ್ತಿದ್ದಂತೆ ದಿನೇಶ್ ಕಾರ್ತಿಕ್ ಪತ್ನಿಗೆ ಡೈವೋರ್ಸ್ ನೀಡಿದ್ದರು.

ಆ ಬಳಿಕ ಡಿಕೆಯ ಮೊದಲ ಪತ್ನಿಯನ್ನು ಮುರಳಿ ವಿಜಯ್ ವಿವಾಹವಾಗಿದ್ದರು. ಇದಾದ ಬಳಿಕ ಖಿನ್ನತೆಗೆ ಒಳಗಾಗಿದ್ದ ದಿನೇಶ್ ಕಾರ್ತಿಕ್ 2015ರಲ್ಲಿ ಭಾರತೀಯ ಸ್ಕ್ವ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾದರು. ಆ ಬಳಿಕ ಡಿಕೆ-ದೀಪಿಕಾ ಪ್ರೀತಿಸಿ ವಿವಾಹವಾಗಿದ್ದರು.

ಇತ್ತ ಮದುವೆಯ ಬಳಿಕ ಮುರಳಿ ವಿಜಯ್ ಅವರ ಕ್ರಿಕೆಟ್ ಕೆರಿಯರ್ ಅಧಃಪತನದತ್ತ ಸಾಗಿದರೆ, ಅತ್ತ ದಿನೇಶ್ ಕಾರ್ತಿಕ್ ಭರ್ಜರಿಯಾಗಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದರು. ಇದೀಗ ಐಪಿಎಲ್ನಲ್ಲೂ ಅವಕಾಶ ಸಿಗದೇ ಮುರಳಿ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.

ಮುರಳಿ ವಿಜಯ್ ಅವರ ಈ ನಿವೃತ್ತಿ ಘೋಷಣೆ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಪತ್ನಿಗೆ ಮುತ್ತಿಕ್ಕುವ ರೋಮ್ಯಾಂಟಿಕ್ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಡಿಕೆ ಮುರಳಿ ವಿಜಯ್ ಅವರನ್ನು ಟ್ರೋಲ್ ಮಾಡಲೆಂದೇ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಈ ಫೋಟೋವನ್ನು ಮುಂದಿಟ್ಟುಕೊಂಡು ಇದೀಗ ನೆಟ್ಟಿಗರು ಮುರಳಿ ವಿಜಯ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
Published On - 3:57 pm, Tue, 31 January 23



















