Holi 2023: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ

ಚರ್ಮಶಾಸ್ತ್ರಜ್ಞರಾದ ಅನಿತಾ ಸಿಂಗ್ ಮನೆಯಲಿಯೇ ಬಣ್ಣಗಳನ್ನು ತಯಾರಿಸಿ ಆರೋಗ್ಯಕರವಾಗಿ ಸಂಭ್ರಮಿಸಿ ಎಂದು ಹೇಳುತ್ತಾರೆ. ಹಳದಿ ಬಣ್ಣವನ್ನು ಪಡೆಯಲು ಅರಿಶಿನ ಪುಡಿಯನ್ನು ಹಿಟ್ಟಿನೊಂದಿಗೆ ಬೆರೆಸಿ ಬಣ್ಣಗಳನ್ನು ತಯಾರಿಸಬಹುದು ಎಂದು ಹೇಳುತ್ತಾರೆ.

Holi 2023: ಹೋಳಿ ಹಬ್ಬ ಸಮೀಪಿಸುತ್ತಿದೆ, ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ
ಹೋಳಿ ಬಣ್ಣಗಳುImage Credit source: Free Walking Tours
Follow us
|

Updated on:Feb 28, 2023 | 10:39 AM

ಇನ್ನೇನು ಹೋಳಿ ಹಬ್ಬ(Holi Festival) ಸಮೀಪಿಸುತ್ತಿದೆ. ನೀವು ನಿಮ್ಮ ಕುಟುಂಬ, ಸ್ನೇಹಿತರೊಂದಿಗೆ ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ. ಹೌದು ಹೋಳಿ ಹಬ್ಬದ ಸಮಯದಲ್ಲಿ ಬಳಸಲಾಗುವ ಕೆಮಿಕಲ್​​ಯುಕ್ತ ಬಣ್ಣಗಳು ನಿಮ್ಮ ಚರ್ಮದ ಆರೋಗ್ಯವನ್ನು ಕೆಡಿಸುವುದು ಮಾತ್ರವಲ್ಲದೇ, ಚರ್ಮದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ ಚರ್ಮಶಾಸ್ತ್ರಜ್ಞರು ಎಚ್ಚರಿಕೆ ನೀಡುತ್ತಾರೆ.

ಚರ್ಮಶಾಸ್ತ್ರಜ್ಞರಾದ ಡಾ ಮಮತಾ ಭುರಾ ಅವರ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡದ ಬಣ್ಣಗಳು ಹೆಚ್ಚಿನ ಕ್ರೋಮಿಯಂ, ಸಿಲಿಕಾ ಮತ್ತು ಸೀಸ ಒಳಗೊಂಡಿರುತ್ತವೆ. ಗಾಢವಾದ ಮತ್ತು ದೀರ್ಘಾವಧಿಯ ಬಣ್ಣಗಳಿಗಾಗಿ ರಾಸಾಯನಿಕಗಳು ಮತ್ತು ಲೋಹದ ಆಕ್ಸೈಡ್ಗಳನ್ನು ಮಿಶ್ರಣ ಮಾಡಲಾಗುತ್ತದೆ. ಇವುಗಳು ಆರೋಗ್ಯದ ಮೇಲೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸುತ್ತಾರೆ. ಕೆಂಪು ಬಣ್ಣವನ್ನು ಪಡೆಯಲು ಪಾದರಸ ಆಕ್ಸೈಡ್, ಗುಲಾಬಿಗೆ ರೋಡಮೈನ್ ಬಿ, ಕಿತ್ತಳೆಗೆ ಕ್ರೋಮಿಯಂ ಅಯೋಡೈಡ್, ಹಳದಿಗೆ ಔರಮೈನ್, ಹಸಿರು ಮತ್ತು ಕಪ್ಪು ಬಣ್ಣಕ್ಕೆ ತಾಮ್ರದ ಸಲ್ಫೇಟ್ ಮುಂತಾದ ಸಂಶ್ಲೇಷಿತ ಬಣ್ಣಗಳಲ್ಲಿ ಬಳಸುವ ಕೆಲವು ವಿಷಕಾರಿ ರಾಸಾಯನಿಕಗಳನ್ನು ತಜ್ಞರು ಪಟ್ಟಿ ಮಾಡಿದ್ದಾರೆ. ಈ ವಿಷಕಾರಿ ರಾಸಾಯನಿಕಗಳು ಚರ್ಮದ ಕಾಯಿಲೆಗಳು, ಕಣ್ಣಿನ ಸೋಂಕು, ತಾತ್ಕಾಲಿಕ ಕುರುಡುತನ, ಮೂತ್ರಪಿಂಡ ವೈಫಲ್ಯ, ಅಸ್ತಮಾ ಮತ್ತು ಚರ್ಮದ ಕ್ಯಾನ್ಸರ್​​​ಗೆ ಕಾರಣವಾಗುತ್ತವೆ. ಇದು 24-ಗಂಟೆಗಳ ತುರಿಕೆ ಮತ್ತು ನಂತರದ ಊತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೋಳಿ ಹಬ್ಬದ ಸಮಯದಲ್ಲಿ ಭಾರತದ ಈ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು

ಚರ್ಮಶಾಸ್ತ್ರಜ್ಞರಾದ ಅನಿತಾ ಸಿಂಗ್ ಮನೆಯಲಿಯೇ ಬಣ್ಣಗಳನ್ನು ತಯಾರಿಸಿ ಆರೋಗ್ಯಕರವಾಗಿ ಸಂಭ್ರಮಿಸಿ ಎಂದು ಹೇಳುತ್ತಾರೆ. ಹಳದಿ ಬಣ್ಣವನ್ನು ಪಡೆಯಲು ಅರಿಶಿನ ಪುಡಿಯನ್ನು ಹಿಟ್ಟಿನೊಂದಿಗೆ ಬೆರೆಸಿ ಬಣ್ಣಗಳನ್ನು ತಯಾರಿಸಬಹುದು ಎಂದು ಹೇಳುತ್ತಾರೆ. ಆದ್ದರಿಂದ ಈ ವರ್ಷದ ಹೋಳಿ ಇನ್ನೇನು ಸಮೀಪಿಸುತ್ತಿದೆ. ಬಣ್ಣಗಳನ್ನು ಮಾರುಕಟ್ಟೆಗಳಿಂದ ಖರೀದಿಸುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಿ ಮಾರಣಾಂತಿಕ ರೋಗಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಜೀವನಶೈಲಿಗೆ ಸಂಬಂಧಪಟ್ಟ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:39 am, Tue, 28 February 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ