ಬ್ಯಾಂಕುಗಳು ಸೇವಾ ಶುಲ್ಕವನ್ನು ಹೆಚ್ಚಿಸಿದೆಯಂತೆ, ಹೌದಾ?

|

Updated on: Nov 03, 2020 | 4:10 PM

ಬ್ಯಾಂಕುಗಳು ಸೇವಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆಯಂತೆ ಎಂಬ ಮಾತು ಮಾಧ್ಯಮಗಳೂ ಸೇರಿದಂತೆ ಎಲ್ಲೆಡೆ ಕೇಳಿಬರುತ್ತಿದೆ. ಅದು ನಿಜವಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನೋಡಿದಾಗ.. ಏಕಾಏಕಿ ನವೆಂಬರ್​ 1 ರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳು ಗ್ರಾಹಕರಿಗೆ ತೀರಾ ಅನಿವಾರ್ಯವಾಗಿರುವ ಸೇವೆಗಳ ಮೇಲೆ ಯಾವುದೇ ಮುಲಾಜಿಲ್ಲದೆ ಭಾರೀ ಪ್ರಮಾಣದಲ್ಲಿ ಶುಲ್ಕ ವಿಧಿಸುತ್ತಿದೆಯಂತೆ ಎಂಬ ಸುದ್ದಿಯಿದೆ.. ಈ ಬಗ್ಗೆ ಅಧಿಕೃತ ಮೂಲಗಳಿಂದ ಸ್ಪಷ್ಟನೆಯೊಂದು ಹೊರಬಿದ್ದಿದೆ. RBI ಮಾರ್ಗಸೂಚಿಯಂತೆ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಬ್ಯಾಂಕು ತನ್ನ […]

ಬ್ಯಾಂಕುಗಳು ಸೇವಾ ಶುಲ್ಕವನ್ನು ಹೆಚ್ಚಿಸಿದೆಯಂತೆ, ಹೌದಾ?
ಪ್ರಾತಿನಿಧಿಕ ಚಿತ್ರ
Follow us on

ಬ್ಯಾಂಕುಗಳು ಸೇವಾ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆಯಂತೆ ಎಂಬ ಮಾತು ಮಾಧ್ಯಮಗಳೂ ಸೇರಿದಂತೆ ಎಲ್ಲೆಡೆ ಕೇಳಿಬರುತ್ತಿದೆ. ಅದು ನಿಜವಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನೋಡಿದಾಗ..

ಏಕಾಏಕಿ ನವೆಂಬರ್​ 1 ರಿಂದ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳೂ ಸೇರಿದಂತೆ ಎಲ್ಲ ಬ್ಯಾಂಕುಗಳು ಗ್ರಾಹಕರಿಗೆ ತೀರಾ ಅನಿವಾರ್ಯವಾಗಿರುವ ಸೇವೆಗಳ ಮೇಲೆ ಯಾವುದೇ ಮುಲಾಜಿಲ್ಲದೆ ಭಾರೀ ಪ್ರಮಾಣದಲ್ಲಿ ಶುಲ್ಕ ವಿಧಿಸುತ್ತಿದೆಯಂತೆ ಎಂಬ ಸುದ್ದಿಯಿದೆ.. ಈ ಬಗ್ಗೆ ಅಧಿಕೃತ ಮೂಲಗಳಿಂದ ಸ್ಪಷ್ಟನೆಯೊಂದು ಹೊರಬಿದ್ದಿದೆ.

RBI ಮಾರ್ಗಸೂಚಿಯಂತೆ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಬ್ಯಾಂಕು ತನ್ನ ಗ್ರಾಹಕರ ಮೇಲೆ ಸೇವಾಶುಲ್ಕವನ್ನು ವಿಧಿಸಬಹುದಾಗಿದೆಯಾದರೂ ಈಗ ಕೊರೊನಾ ಸಂಕಷ್ಟ ಪರಿಸ್ಥಿತಿ ನೆಲೆಸಿರುವುದರಿಂದ ಯಾವುದೇ ಬ್ಯಾಂಕ್ ತನ್ನ ಸೇವಾ ಶುಲ್ಕದಲ್ಲಿ ಬದಲಾವಣೆಯಾಗಲಿ ಅಥವಾ ಹೆಚ್ಚಳವಾಗಲಿ ಮಾಡಿಲ್ಲ.

RBI ನಿಗದಿಪಡಿಸಿರುವಂತೆ ಜನ್​ ಧನ್​ (Jan Dhan) ಖಾತೆ ಸೇರಿದಂತೆ ಉಳಿತಾಯ ಖಾತೆಯ ಮೇಲಿನ Basic Savings Bank Deposit (BSBD) ಸೇವಾ ಶುಲ್ಕ ಅನ್ವಯವಾಗುವುದಿಲ್ಲ. ಇನ್ನು, ಸಾಮಾನ್ಯ ಉಳಿತಾಯ ಖಾತೆ, ಚಾಲ್ತಿ ಖಾತೆ, ನಗದು ಸಾಲ ಖಾತೆ, ಓವರ್​ ಡ್ರಾಫ್ಟ್​​ ಖಾತೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ ಮಾಡಿಲ್ಲ.

ಆದರೆ ಬ್ಯಾಂಕ್​ ಆಫ್​ ಬರೋಡಾ ಮಾತ್ರ ನವೆಂಬರ್ 1ರಿಂದ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಒಂದು ತಿಂಗಳಲ್ಲಿ ನಗದು ಠೇವಣಿ ಇಡುವುದು ಮತ್ತು ನಗದು ವಾಪಸಾತಿ ಸಂಖ್ಯೆಗಳ ಪ್ರಮಾಣವನ್ನು ಕಡಿಮೆಗೊಳಿಸಿದೆ. ಈ ಹಿಂದೆ 5 ಬಾರಿ ಈ ಸೇವೆಗಳನ್ನು ಪಡೆಯಬಹುದಾಗಿತ್ತು. ಆದ್ರೆ ಇನ್ಮುಂದೆ 3 ಬಾರಿ ಮಾತ್ರವೇ ಈ ಸೇವೆಗಳನ್ನು ಪಡೆಯಬೇಕಾಗುತ್ತದೆ. 3 ಕ್ಕಿಂತ ಹೆಚ್ಚು ಬಾರಿ ಈ ಸೇವೆಗಳನ್ನು ಪಡೆದರೆ ಈ ಹಿಂದಿನಂತೆ ನಿರ್ದಿಷ್ಟ ಶುಲ್ಕವನ್ನು ಭರಿಸಬೇಕಾಗುತ್ತದೆ ಎಂಬ ಸುದ್ದಿಯಿತ್ತು. ಆದ್ರೆ ಕೊರೊನಾ ಸಂಕಷ್ಟ ಕಾಲದಲ್ಲಿ ಈ ಮಾರ್ಪಾಡುಗಳನ್ನು ಬ್ಯಾಂಕ್​ ಆಫ್​ ಬರೋಡಾ ವಾಪಸ್​ ಪಡೆದಿದೆ. ಉಳಿದಂತೆ ಇತರೆ ಯಾವುದೇ ಬ್ಯಾಂಕ್​ ಸಹ ಈ ರೀತಿ ಸೇವಾ ಶುಲ್ಕವನ್ನೇನೂ ಹೆಚ್ಚಿಸಿಲ್ಲ ಎಂದೂ ಸ್ಪಷ್ಟನೆ ಹೊರಬಿದ್ದಿದೆ.