
ಲಕ್ನೋ: ರಾಮ ಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಕಾಟದಿಂದ ಸಮಾರಂಭಕ್ಕೆ ಹಲವರು ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಆದರೂ, ಬರುವ ದಿನಗಳಲ್ಲಿ ಮಹಾಮಾರಿಯ ಅಬ್ಬರ ಕೊಂಚ ತಗ್ಗಿದಾಗ ನೂರಾರು ಭಕ್ತರು ಕಾಮಗಾರಿ ವೀಕ್ಷಿಸಲು ಬರುವುದಂತೂ ಖಂಡಿತ.
ಈ ಕಾಮಗಾರಿಯ ವಿಶೇಷವೆಂದರೆ, ರೇಲ್ವೇ ನಿಲ್ದಾಣದ ಪ್ರವೇಶ ದ್ವಾರದ ಗೋಪುರದಲ್ಲಿ ಸೀತಾ-ರಾಮರ ಅಮೋಘವಾದ ಚಿತ್ರಪಟವನ್ನು ಬಿಡಿಸಲಾಗಿದೆ. ಮೂವರು ಸಹೋದರರು ಹಾಗು ಆಂಜನೇಯ ಸಮೇತ ಕಾಣಿಸುವ ರಾಮನ ಸುಂದರ ಚಿತ್ರಕಲೆಯನ್ನ ಬಿಡಿಸಲು ನಾಲ್ಕು ಜನ ಕಲಾವಿದರ ತಂಡ 7 ದಿನಗಳನ್ನ ತೆಗೆದುಕೊಂಡಿದೆ.
Published On - 3:49 pm, Mon, 3 August 20