AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಿ ಹೆಣ್ಣುಮಕ್ಕಳು ಭಾರತೀಯ ಹೆಣ್ಣುಮಕ್ಕಳಿಗಿಂತ ಸುಂದರವಾಗಿದ್ದಾರೆ: ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ

ಸಾಮಾನ್ಯವಾಗಿ ನ್ಯಾಯಮೂರ್ತಿಗಳು ನಿವೃತ್ತಿ ಬಳಿಕ ಸಾರ್ವಜನಿಕ ಜೀವನದಿಂದ ದೂರವಿರುತ್ತಾರೆ. ಆದರೆ 2004 ರಿಂದ 2011 ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಶೈಲಿಯೇ ಬೇರೆ. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಮ್ಮ ವೈಯಕ್ತಿಕ ಅಭಿಪ್ರಾಯವೊಂದು ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳ ಮಳೆಯನ್ನು ಸುರಿಸಿದೆ.

ಪಾಕಿಸ್ತಾನಿ ಹೆಣ್ಣುಮಕ್ಕಳು ಭಾರತೀಯ ಹೆಣ್ಣುಮಕ್ಕಳಿಗಿಂತ ಸುಂದರವಾಗಿದ್ದಾರೆ: ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ
ಕಾಟ್ಜು -ಸಾಂದರ್ಭಿಕ Image Credit source: Google Gemini
ನಯನಾ ರಾಜೀವ್
|

Updated on:Apr 20, 2026 | 12:48 PM

Share

ನವದೆಹಲಿ, ಏಪ್ರಿಲ್ 19: ಸಾಮಾನ್ಯವಾಗಿ ನ್ಯಾಯಮೂರ್ತಿಗಳು ನಿವೃತ್ತಿ ಬಳಿಕ ಸಾರ್ವಜನಿಕ ಜೀವನದಿಂದ ದೂರವಿರುತ್ತಾರೆ. ಆದರೆ 2004 ರಿಂದ 2011 ರವರೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರ ಶೈಲಿಯೇ ಬೇರೆ. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ತಮ್ಮ ವೈಯಕ್ತಿಕ ಅಭಿಪ್ರಾಯವೊಂದು ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳ ಮಳೆಯನ್ನು ಸುರಿಸಿದೆ.

ಕಾಟ್ಜು ಅವರು  ಪಾಕಿಸ್ತಾನಿ ಮಹಿಳೆಯರು ಭಾರತೀಯ ಮಹಿಳೆಯರಿಗಿಂತ ಸುಂದರವಾಗಿದ್ದಾರೆ ಎಂಬ ಧಾಟಿಯಲ್ಲಿ ತಮಾಷೆಯಾಗಿ ಪೋಸ್ಟ್ ಮಾಡಿದ್ದರು. ಇದು ಕೇವಲ ಸೌಂದರ್ಯದ ಬಗೆಗಿನ ಅಭಿಪ್ರಾಯವಾಗಿರದೆ, ಅವರ ಎಂದಿನ ವ್ಯಂಗ್ಯಭರಿತ ಶೈಲಿಯಿಂದ ಕೂಡಿತ್ತು. ಕಾಟ್ಜು ಅವರ ಪೋಸ್ಟ್‌ಗೆ ಭಾರತೀಯರು ಅತ್ಯಂತ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಸರ್, ಈ ಪೋಸ್ಟ್ ನೋಡಿದ ಮೇಲೆ ನಿಮ್ಮ ಹಳೆಯ ನ್ಯಾಯಾಂಗ ತೀರ್ಪುಗಳನ್ನೂ ನಾವು ಒಮ್ಮೆ ಮರುಪರಿಶೀಲಿಸಬೇಕಾಗುತ್ತದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ನಿಮ್ಮೊಳಗಿನ ತುಂಟತನ ಇನ್ನು ಹೋಗಿಲ್ಲ ಎಂದು ಇನ್ನು ಕೆಲವರು ಕಾಲೆಳೆದಿದ್ದಾರೆ.

ಕಾಟ್ಜು ಅವರ ವಾದಕ್ಕೆ ಪಾಕಿಸ್ತಾನದ ನೆಟ್ಟಿಗರು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರು ತಮ್ಮ ದೇಶದ ಪುರುಷರ ಪರವಾಗಿ ಬ್ಯಾಟ್ ಬೀಸಿದರು. ನಮ್ಮ ದೇಶದ ಪುರುಷರು ಭಾರತೀಯರಿಗಿಂತ ಹೆಚ್ಚು ಹ್ಯಾಂಡ್ಸಮ್ ಆಗಿದ್ದಾರೆ ಎಂದು ಕೆಲವರು ಫೋಟೋಗಳನ್ನು ಹಂಚಿಕೊಂಡು ವಾದಕ್ಕಿಳಿದರೆ, ಸೌಂದರ್ಯ ಎಂಬುದು ನೋಡುವವರ ಕಣ್ಣಿನಲ್ಲಿರುತ್ತದೆ ಎಂದು ಇನ್ನು ಕೆಲವರು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಮತ್ತು ಗಡಿ ಉದ್ವಿಗ್ನತೆ ಸದಾ ಇರುತ್ತದೆ. ಆದರೆ, ಕಾಟ್ಜು ಅವರ ಈ ಪೋಸ್ಟ್ ಚರ್ಚೆಯು ಯಾವುದೇ ದ್ವೇಷಕ್ಕೆ ಅವಕಾಶ ನೀಡದೆ, ಸಂಪೂರ್ಣವಾಗಿ ಲಘು ಹಾಸ್ಯದಿಂದ ಕೂಡಿತ್ತು. ಪ್ರಾದೇಶಿಕ ಹೆಮ್ಮೆ ಮತ್ತು ಸೌಂದರ್ಯದ ಕುರಿತಾದ ಈ ಚರ್ಚೆಯು ಎರಡೂ ಕಡೆಯ ಜನರನ್ನು ಸ್ವಲ್ಪ ಕಾಲ ನಗಿಸುವಂತೆ ಮಾಡಿತು. ಆದರೆ ಅವರ ಎಕ್ಸ್ ಖಾತೆಯಲ್ಲಿದ್ದ ಆ ಪೋಸ್ಟ್​ ಅನ್ನು ಡಿಲೀಟ್ ಮಾಡಲಾಗಿದ್ದು, ಜನರು ಸ್ಕ್ರೀನ್ ಶಾಟ್​​ಗಳನ್ನು ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:17 pm, Sun, 19 April 26

Follow Us