Delhi Chaloಗೆ ಸ್ಪೂರ್ತಿಗೀತೆಯಾದ ಇಟಲಿಯ Bella Ciao

|

Updated on: Dec 26, 2020 | 12:14 PM

ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ದೆಹಲಿ ಚಲೋಗೆ ಇಟಲಿ ಮೂಲದ Bella Ciao ಸ್ಪೂರ್ತಿಗೀತವಾಗಿದೆ. ಬಿಡುಗಡೆಯಾದ ಒಂದೇ ವಾರದಲ್ಲಿ ಯೂಟ್ಯೂಬ್​ನಲ್ಲಿ 2.7 ಲಕ್ಷ ವೀಕ್ಷಣೆ ಗಳಿಸಿದೆ.

Delhi Chaloಗೆ ಸ್ಪೂರ್ತಿಗೀತೆಯಾದ ಇಟಲಿಯ Bella Ciao
Bella Ciao ಪಂಜಾಬಿ ಆವೃತ್ತಿಯ ಒಂದು ದೃಶ್ಯ
Follow us on

ದೆಹಲಿ: ಚಳುವಳಿಗಳು ಕಾವು ನಿರಂತರವಾಗಿ ಮುಂದುವರಿಯಲು ಒಂದಿಲ್ಲೊಂದು ಸ್ಪೂರ್ತಿ ಚಿಲುಮೆಯ ಅಗತ್ಯವಿದೆ. ಚಳುವಳಿಗಳನ್ನು ತಣ್ಣಗಾಗಿಸಲು ಆಡಳಿತಗಳು ಪ್ರಯತ್ನಿಸುವುದು ಸಹಜ. ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ದೆಹಲಿ ಚಲೋಗೆ ಇಟಲಿ ಮೂಲದ Bella Ciao ಸ್ಪೂರ್ತಿಗೀತವಾಗಿದೆ.

Bella Ciao 19ನೇ ಶತಮಾನದಲ್ಲಿ ಉತ್ತರ ಇಟಲಿಯ ಭತ್ತದ ಗದ್ದೆಗಳಲ್ಲಿ ದುಡಿದ ಮಹಿಳೆಯರಿಂದ ಹುಟ್ಟಿದ ಹಾಡು. ಎಲ್ಲಿಯ ಇಟಲಿ? ಎಲ್ಲಿಯ ಪಂಜಾಬ್? ಎಷ್ಟೋ ಚಳುವಳಿಗಳನ್ನು ಜಾಗೃತವಾಗಿಟ್ಟ Bella Ciao ಹಾಡಿನ ಕಥಾನಕವನ್ನು ಟಿವಿ9 ಕನ್ನಡ ಡಿಜಿಟಲ್ ತೆರೆದಿಟ್ಟಿದೆ.

27 ವರ್ಷದ ಗಣಿತ ಶಿಕ್ಷಕ ಪೂಜನ್ ಸಾಹಿಲ್ ರಚಿಸಿರುವ Bella Ciao ದ ಪಂಜಾಬಿ ಆವೃತ್ತಿ ‘Karwaan-e-Mohabbat’ ಯೂಟ್ಯೂಬ್​ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಒಂದೇ ವಾರಕ್ಕೆ 2.7ಲಕ್ಷ ವೀಕ್ಷಣೆಗಳೊಂದಿಗೆ ಜಗತ್ತಿನಾದ್ಯಂತ ಶೇರ್ ಆಗುತ್ತಿದೆ. ಚಳುವಳಿ ನಿರತ ಪಂಜಾಬಿ ರೈತರಿಗೆ ಬೆಂಬಲವಾಗಿ ಈ ಆವೃತ್ತಿಯನ್ನು ಹೊರತಂದಿರುವುದಾಗಿ ಅವರು ಹೇಳಿದ್ದಾರೆ. ಎಲ್ಲವನ್ನೂ ತೊರೆದು ನೂತನ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಲು ಆಗಮಿಸಿರುವ ರೈತರ ಕುರಿತು ಸಾಹಿತ್ಯ ರಚಿಸಿದ್ದಾರೆ ಪೂಜನ್ ಸಾಹಿಲ್.

ಕಳೆದ ವರ್ಷ ಸಿಎಎ ಪ್ರತಿಭಟನೆಯ ವೇಳೆಯೂ ಅವರು Bella Ciaದ ಹಿಂದಿ ಆವೃತ್ತಿ ರಚಿಸಿದ್ದರು. ಹಿಂದಿ ಆವೃತ್ತಿ ‘ವಾಪಸ್ ಜಾವೋ’ ದೇಶದ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳಲ್ಲಿ ಬಳಸಿಕೊಂಡಿದ್ದವು. ಪಂಜಾಬ್ ರೈತರ ಚಳುವಳಿಗೂ ಸ್ಪೂರ್ತಿದಾಯಕವಾಗಬಹುದು ಎಂದು ಈಗ ಪಂಜಾಬಿ ಆವೃತ್ತಿ ರಚಿಸಿದೆ ಎಂದು ಪೂಜನ್ ಸಾಹಿಲ್ ತಿಳಿಸಿದ್ದಾರೆ. ‘ಚಳುವಳಿಯ ಕಾವನ್ನು ನಿರಂತರವಾಗಿ ಜೀವಂತವಿರಿಸಲು Belli Ciaoವಿನ ಪಂಜಾಬಿ ಆವೃತ್ತಿ ಸಹಕಾರಿಯಾಗಿದೆ. ನಾನು ರಚಿಸಿದ ಸಾಹಿತ್ಯ,ಗೀತೆ ರೈತ ಹೋರಾಟಗಾರರಿಗೆ ಸ್ಪೂರ್ತಿಯಾದರೆ ನನ್ನ ಶ್ರಮ ಸಾರ್ಥಕ’ಎಂದು ಹೇಳುತ್ತಾರೆ ಸಾಹಿಲ್.

Bella Ciaoದ ಮೂಲವೆಲ್ಲಿ?
19ನೇ ಶತಮಾನದ ಉತ್ತರಾರ್ಧವದು. ಉತ್ತರ ಇಟಲಿಯ ಭತ್ತದ ಗದ್ದೆಗಳಲ್ಲಿ ಕೆಳವರ್ಗದ ಮಹಿಳೆಯರು ಅತ್ಯಂತ ಕಠಿಣವಾಗಿ ಕೆಲಸ ನಿರ್ವಹಿಸುತ್ತಿದ್ದರು. ಮಳೆಗಾಲದಲ್ಲಿ ಗದ್ದೆಗಳಲ್ಲಿ ನೀರು ತುಂಬುತ್ತಿತ್ತು. ನೀರಲ್ಲೇ ನಿಂತು ಕಳೆ ಸ್ವಚ್ಛಗೊಳಿಸಬೇಕಿತ್ತು. ಇದರ ವಿರುದ್ಧ ಬಂಡೆದ್ದ ಮಹಿಳೆಯರು ರಚಿಸಿದ ಗೀತೆಯೇ Bella Cia. ಫ್ಯಾಸಿಸ್ಟ್ ಆಡಳಿತದ ವಿರೋಧ ಚಳುವಳಿಗಳಲ್ಲೂ ರೈತ ಮಹಿಳೆಯರ ಈ ಗೀತೆ ಬಳಕೆಯಾಯಿತು. ತಮ್ಮ ಸಮಸ್ಯೆ, ಬೇಡಿಕೆಗಳನ್ನೇ ಸಾಹಿತ್ಯವಾಗಿಸಿಕೊಂಡು ವಿಶ್ವದಾದ್ಯಂತ ಹಲವು ಚಳವಳಿಗಳು Bella Ciao ಗೀತೆಯನ್ನು ರಚಿಸಿಕೊಂಡವು. Bella Ciao ಅಂದರೆ Goodbye Beautifull ಎಂದರ್ಥ.

Inside Story ದೆಹಲಿ ಚಲೋ ರೈತ ಚಳವಳಿಯ ಪರ-ವಿರೋಧ ಚರ್ಚೆಯ ತಿರುಳೇನು?

Published On - 11:39 am, Sat, 26 December 20