ಅಪ್ಲಿಕೇಶನ್​ನಲ್ಲಿ ಇಲ್ಲ ಮರಾಠಿ ಭಾಷೆ ಆಯ್ಕೆ; ರೊಚ್ಚಿಗೆದ್ದ MNS ಕಾರ್ಯಕರ್ತರಿಂದ ಅಮೇಜಾನ್ ಕಚೇರಿ ಧ್ವಂಸ

ಅಮೆಜಾನ್ ಇ-ಕಾಮರ್ಸ್ ರಿಟೈಲರ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ದಾಳಿ ನಡೆಸಿರುವ MNS ಕಾರ್ಯಕರ್ತರು, ಪುಣೆಯ ಕೋಂಧ್ವಾ ಹಾಗೂ ಮುಂಬೈನ ಚಂಡಿವ್ಲಿ ಪ್ರದೇಶದ ಅಮೆಜಾನ್ ಕಚೇರಿ ಮತ್ತು ಗೋದಾಮುಗಳನ್ನು ಧ್ವಂಸ ಮಾಡಿದ್ದಾರೆ.

ಅಪ್ಲಿಕೇಶನ್​ನಲ್ಲಿ ಇಲ್ಲ ಮರಾಠಿ ಭಾಷೆ ಆಯ್ಕೆ; ರೊಚ್ಚಿಗೆದ್ದ MNS ಕಾರ್ಯಕರ್ತರಿಂದ ಅಮೇಜಾನ್ ಕಚೇರಿ ಧ್ವಂಸ
ಅಮೆಜಾನ್ ಕಚೇರಿ ಮೇಲೆ MNS ಕಾರ್ಯಕರ್ತರ ದಾಳಿ
TV9kannada Web Team

| Edited By: ganapathi bhat

Apr 06, 2022 | 11:20 PM

ಮುಂಬೈ: ಭಾಷಾವಾರು ವಿಚಾರವಾಗಿ ಆಕ್ರೋಶ ಹೊರಹಾಕಿರುವ ರಾಜ್ ಠಾಕ್ರೆ ನಾಯಕತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಕಾರ್ಯಕರ್ತರು, ಮುಂಬೈ ಹಾಗೂ ಪುಣೆಯ ಅಮೇಜಾನ್ ರಿಟೈಲರ್ ಕಚೇರಿ ಮತ್ತು ಗೋದಾಮುಗಳನ್ನು ಧ್ವಂಸ ಮಾಡಿದ್ದಾರೆ. ಅಮೇಜಾನ್ ಇ-ಕಾಮರ್ಸ್ ರಿಟೈಲರ್ ಅಪ್ಲಿಕೇಷನ್​ನಲ್ಲಿ ಮರಾಠಿ ಭಾಷೆಯ ಅವಕಾಶ ನೀಡದಿರುವುದಕ್ಕೆ ಈ ಕೃತ್ಯ ಎಸಗಲಾಗಿದೆ.

ಅಮೆಜಾನ್ ಇ-ಕಾಮರ್ಸ್ ರಿಟೈಲರ್ ವಿರುದ್ಧ ಘೋಷಣೆಗಳನ್ನು ಕೂಗುತ್ತ ದಾಳಿ ನಡೆಸಿರುವ MNS ಕಾರ್ಯಕರ್ತರು, ಪುಣೆಯ ಕೋಂಧ್ವಾ ಹಾಗೂ ಮುಂಬೈನ ಚಂಡಿವ್ಲಿ ಪ್ರದೇಶದ ಅಮೇಜಾನ್ ಕಚೇರಿ ಮತ್ತು ಗೋದಾಮುಗಳನ್ನು ಧ್ವಂಸ ಮಾಡಿದ್ದಾರೆ.

ಈಗಾಗಲೇ , ಅಮೇಜಾನ್ ರಿಟೈಲರ್​ನ ಪೋಸ್ಟರ್​ಗಳನ್ನು ಹರಿದು ಹಾಕಿದ್ದಾರೆ ಎಂಬ ಆರೋಪವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಎದುರಿಸುತ್ತಿದ್ದಾರೆ. ಈ ವಿಚಾರವಾಗಿ ಅಮೆಜಾನ್ ಸಂಸ್ಥೆ ಕೋರ್ಟ್ ಮೆಟ್ಟಿಲೇರಿದ್ದು, ತನಿಖೆ ನಡೆಯುತ್ತಿದೆ. ಜನವರಿ 5ರಂದು ಕೋರ್ಟ್ ಮುಂದೆ ಹಾಜರಿರುವಂತೆ ರಾಜ್ ಠಾಕ್ರೆಗೆ ನ್ಯಾಯಾಲಯ ಆದೇಶವನ್ನೂ ನೀಡಿದೆ. ರಾಜ್ ಠಾಕ್ರೆಗೆ ಕೋರ್ಟ್ ನೋಟೀಸ್ ನೀಡಿದ ಬೆನ್ನಲ್ಲೇ MNS ಕಾರ್ಯಕರ್ತರು ಈ ದುಷ್ಕೃತ್ಯ ಎಸಗಿದ್ದಾರೆ.

ಮರಾಠಿಗರ ಭಾಷಾವಾರು ಸ್ವಾಭಿಮಾನ ಅಥವಾ ದುರಭಿಮಾನದ ಕೃತ್ಯಗಳು ಹೊಸದೇನಲ್ಲ. ಹಿಂದೆಯೂ ಹಲವು ಬಾರಿ ಭಾಷೆಯ ವಿಷಯದಲ್ಲಿ ಮರಾಠಿಗರು ತಗಾದೆ ತೆಗೆದಿದ್ದಾರೆ. ಕರ್ನಾಟಕ ಗಡಿ ಭಾಗದಲ್ಲೂ ಮರಾಠಿ-ಕನ್ನಡ ಭಾಷಾ ವಿವಾದಗಳು ಆಗಿವೆ. ಇದೀಗ,  ಅಮೇಜಾನ್ ರಿಟೈಲರ್ ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ವಿರುದ್ಧ ಗುದ್ದಾಟಗಳು ಶುರುವಾಗಿದೆ.

ಕರ್ನಾಟಕ ಬಂದ್​ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada