ದೆಹಲಿ ಜನವರಿ 02: ಎಎಪಿ ನಾಯಕ ಭಗವಂತ್ ಮಾನ್ (Bhagwant Mann) ಅವರ ವಾಗ್ದಾಳಿಗೆ ಮಂಗಳವಾರ ಕಾಂಗ್ರೆಸ್ (Congress) ಪ್ರತಿಕ್ರಿಯಿಸಿದ್ದು, ಎಎಪಿಯನ್ನು (AAP) ತಿಹಾರ್ ಜೈಲಿನಲ್ಲಿ ಸಿಗುವ ಪಕ್ಷ ಎಂದು ಕರೆಯಲಾಗುತ್ತದೆ ಎಂದಿದೆ. ಮಾನ್ ಅವರು ಕಾಂಗ್ರೆಸ್ ಪಕ್ಷವನ್ನು ‘ಏಕ್ ಥೀ ಕಾಂಗ್ರೆಸ್’ (ಒಂದು ಕಾಲದಲ್ಲಿ ಕಾಂಗ್ರೆಸ್ ಇತ್ತು)ಎಂದು ಹೇಳಿದ್ದು, ಈ ಹೇಳಿಕೆಗೆ ಪ್ರತಿಕ್ರಿಯಿಸಿದ ದೆಹಲಿಯ ಮಾಜಿ ಸಂಸದ ಸಂದೀಪ್ ದೀಕ್ಷಿತ್, ಆಪ್ ಮಿತ್ರಪಕ್ಷವಾಗಿ “ವಿಶ್ವಾಸಕ್ಕೆ ಅರ್ಹವಲ್ಲ”.ಅದರ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮೈತ್ರಿ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಎಎಪಿ ಇಂಡಿಯಾ ಬ್ಲಾಕ್ ನಲ್ಲಿರುವ ಪಕ್ಷಗಳಾಗಿದ್ದು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಂಜಾಬ್ ಮತ್ತು ದೆಹಲಿಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾರೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಅವರು ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಎಎಪಿಗೆ ಮಾತ್ರ ತಿಳಿದಿದೆ. ಅವರು (ಎಎಪಿ) ವಿಶ್ವಾಸಾರ್ಹವಲ್ಲ ಎಂದು ನಾವು ನಿರಂತರವಾಗಿ ಹೇಳುತ್ತಿದ್ದೇವೆ. ದುರದೃಷ್ಟವಶಾತ್, ಅರವಿಂದ್ ಕೇಜ್ರಿವಾಲ್ ಅವರಿಗೆ ಮೈತ್ರಿ ರಾಜಕೀಯ ಏನು ಎಂದು ಅರ್ಥವಾಗುತ್ತಿಲ್ಲ. ಅವರು (ಎಎಪಿ) ಇಂಡಿಯಾ ಮೈತ್ರಿಕೂಟದ ಭಾಗವಾಗಲು ಬಯಸಿದರೆ ಅವರು ಇತರ ರಾಜಕೀಯ ಪಕ್ಷಗಳೊಂದಿಗೆ ಕೆಲಸ ಮಾಡಬೇಕಾಗುತ್ತದೆ ಎಂದು ಪಿಐಟಿ ಜತೆ ಮಾತನಾಡಿದ ಸಂದೀಪ್ ಹೇಳಿದ್ದಾರೆ.
#WATCH | On Punjab CM Bhagwant Mann’s statement ‘Ek thi Congress’, Congress leader Sandeep Dikshit says, “…In the coming time, mothers will say that there was a party which can now be found in Tihar jail. Tell me which party has 40% of its leadership in jail and the rest are… https://t.co/m5Wkh7511w pic.twitter.com/ip3D4JNmkB
— ANI (@ANI) January 2, 2024
ಮದ್ಯ ನೀತಿ ಹಗರಣದ ಬಗ್ಗೆ ಹಿರಿಯ ಎಎಪಿ ನಾಯಕರ ಜೈಲುವಾಸವನ್ನು ಉಲ್ಲೇಖಿಸಿದ ದೀಕ್ಷಿತ್ ಮುಂಬರುವ ಸಮಯದಲ್ಲಿ, ಅಮ್ಮಂದಿರು ತಿಹಾರ್ ಜೈಲಿನಲ್ಲಿ ಈಗ ಒಂದು ಪಕ್ಷವಿದೆ ಎಂದು ಹೇಳುತ್ತಾರೆ. ಯಾವ ಪಕ್ಷದಲ್ಲಿನ ಶೇ40 ನಾಯಕರು ಜೈಲಿನಲ್ಲಿದ್ದಾರೆ ಮತ್ತು ಜೈಲಿಗೆ ಹೋಗಲು ಸಿದ್ಧರಿದ್ದಾರೆ ಹೇಳಿ ಎಂದಿದ್ದಾರೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಇತಿಹಾಸವಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸೋಮವಾರ ಹೇಳಿದ್ದಾರೆ.
ಎಎಪಿ ಜತೆಗೆ ರಾಜ್ಯ ಕಾಂಗ್ರೆಸ್ ನಾಯಕರು ಮೈತ್ರಿ ಮಾಡಿಕೊಳ್ಳಲು ಹಿಂಜರಿಯುತ್ತಾರೆ ಎಂಬ ಸುದ್ದಿ ಬಗ್ಗೆ ಕೇಳಿದಾಗ ಭಗವಂತ್ ಮಾನ್, “ಪಂಜಾಬ್ ಮತ್ತು ದೆಹಲಿಯಲ್ಲಿ, ತಾಯಂದಿರು ತಮ್ಮ ಮಕ್ಕಳಿಗೆ ಪ್ರಪಂಚದ ಚಿಕ್ಕ ಕಥೆಯನ್ನು ಹೇಳಬಹುದು – ಏಕ್ ಥಿ ಕಾಂಗ್ರೆಸ್ ಎಂದು ವ್ಯಂಗ್ಯವಾಡಿದ್ದರು.
ಇದನ್ನೂ ಓದಿ: ಮೈಸೂರು: ಅರುಣ್ ಯೋಗಿರಾಜ್ ಕುಟುಂಬಸ್ಥರನ್ನು ಸನ್ಮಾನಿಸಿದ ಕಾಂಗ್ರೆಸ್ ಮುಖಂಡರು
ಎಎಪಿ ಮತ್ತು ಕಾಂಗ್ರೆಸ್ ನಾಯಕರು ಹಲವಾರು ಸಂದರ್ಭಗಳಲ್ಲಿ ಮೈತ್ರಿ ಬಗ್ಗೆ ತಮ್ಮ ಆತಂಕಗಳನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದಾರೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಎರಡು ಪಕ್ಷಗಳು ಕಡುವೈರಿಗಳಾಗಿವೆ. ಆದಾಗ್ಯೂ, ಅವರು ಇಂಡಿಯಾ ಬ್ಲಾಕ್‌ನ ಭಾಗವಾಗಿದ್ದಾರೆ. ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕೂಡ ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ.
ಆಮ್ ಆದ್ಮಿ ಪಕ್ಷವು ದೆಹಲಿ ಮತ್ತು ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಿತ್ತು. 2010ರಿಂದ 2012ರ ನಡುವಿನ ಭ್ರಷ್ಟಾಚಾರದ ವಿರುದ್ಧ ಕೇಂದ್ರದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಪ್ರತಿಭಟನೆ ನಡೆಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ