ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ ಭಾರತ್ ಬಯೋಟೆಕ್

|

Updated on: May 24, 2021 | 10:57 PM

ಒಂದುವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆತಲ್ಲಿ ಕೊವ್ಯಾಕ್ಸಿನ್​ ಲಸಿಕೆಗೂ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿದೆ. ಮುಂದಿನ ದಿನಗಳಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ಗುಜರಾತ್​ನ ಅಂಕ್ಲೇಶ್ವರ್ ನಗರಗಳಲ್ಲಿ ಲಸಿಕೆ ಉತ್ಪಾದಿಸಲು ಭಾರತ್ ಬಯೋಟೆಕ್ ತೀರ್ಮಾನಿಸಿದೆ.

ಕೊವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದ ಭಾರತ್ ಬಯೋಟೆಕ್
ಪ್ರಾತಿನಿಧಿಕ ಚಿತ್ರ
Follow us on

ಹೈದರಾಬಾದ್: ವಿಶ್ವ ಆರೋಗ್ಯ ಸಂಸ್ಥೆಯಿಂದ ತುರ್ತು ಬಳಕೆಗೆ ಅನುಮೋದನೆ ಪಡೆಯಲು ಕೊವ್ಯಾಕ್ಸಿನ್ ಲಸಿಕೆ ತಯಾರಿಕಾ ಕಂಪನಿ ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿದೆ. ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ಪಡೆಯಲು ವಿಶ್ವ ಆರೋಗ್ಯ ಸಂಸ್ಥೆಗೆ ಭಾರತ್ ಬಯೋಟೆಕ್ ಕಂಪನಿ ಅರ್ಜಿ ಸಲ್ಲಿಸಿದೆ. ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿರುವ ಅರ್ಜಿಯಲ್ಲಿ ಶೇಕಡಾ 90ರಷ್ಟು ದಾಖಲೆಗಳನ್ನು ನೀಡಿದ್ದು, ಇನ್ನೂ ಹೆಚ್ಚಿನ ದಾಖಲೆಗಳನ್ನು ಜೂನ್ ತಿಂಗಳಲ್ಲಿ ಸಲ್ಲಿಸಲಿದೆ.

ಸದ್ಯದ ಮಾಹಿತಿಗಳ ಪ್ರಕಾರ ಕೊವ್ಯಾಕ್ಸಿನ್ ಲಸಿಕೆಯನ್ನು 10ಕ್ಕಿಂತ ಕಡಿಮೆ ದೇಶಗಳು ಅಂಗೀಕರಿಸಿವೆ. ವಿಶ್ವದ ಬಹುತೇಕ ದೇಶಗಳು ಸದ್ಯ ಆಕ್ಸ್​ಫರ್ಡ್-ಆಸ್ಟ್ರೋಜೆನೆಕಾದ ಕೊವಿಶೀಲ್ಡ್ ಲಸಿಕೆಯನ್ನು ಅಧಿಕೃತವಾಗಿ ಅಂಗೀಕರಿಸಿದ್ದು, ತಮ್ಮ ದೇಶಕ್ಕೆ ಆಗಮಿಸುವ ಪ್ರಯಾಣಿಕರಿರು ಕೊವಿಶೀಲ್ಡ್ ಲಸಿಕೆ ಪಡೆದಿರಬೇಕು ಎಂದು ಸೂಚಿಸುತ್ತವೆ. ಒಂದುವೇಳೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆತಲ್ಲಿ ಕೊವ್ಯಾಕ್ಸಿನ್​ ಲಸಿಕೆಗೂ ಇನ್ನೂ ಹೆಚ್ಚಿನ ಸ್ಥಾನಮಾನ ದೊರೆಯಲಿದೆ.

ಸದ್ಯ ವಿಶ್ವದ ಕೆಲವೇ ಕೆಲವು ಲಸಿಕೆಗಳು ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತ ಮಾನ್ಯತೆ ಹೊಂದಿವೆ. ಕೊವಿಶೀಲ್ಡ್, ಫೈಜರ್, ಆಸ್ಟ್ರಾಝೆನೆಕಾ, ಜಾನ್ಸನ್, ಮಾಡೆರ್ನಾ ಮತ್ತು ಸಿನೋಫಾರ್ಮಾ ಕಂಪನಿಗಳ ಕೊವಿಡ್ ಲಸಿಕೆಗಳಿಗೆ ಮಾತ್ರ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಯ ಮಾನ್ಯತೆ ದೊರೆತಿದೆ. ಕೊವ್ಯಾಕ್ಸಿನ್​ ಲಸಿಕೆಗೂ ಈ ಮಾನ್ಯತೆ ದೊರೆಲ್ಲಿ ಭಾರತದ ಲಸಿಕೆಗೆ ವಿದೇಶಗಳಲ್ಲಿಯೂ ಮಾನ್ಯತೆ ದೊರೆಯಲಿದೆ.

ಮುಂದಿನ ದಿನಗಳಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ಗುಜರಾತ್​ನ ಅಂಕ್ಲೇಶ್ವರ್ ನಗರಗಳಲ್ಲಿ ಲಸಿಕೆ ಉತ್ಪಾದಿಸಲು ಭಾರತ್ ಬಯೋಟೆಕ್ ತೀರ್ಮಾನಿಸಿದೆ.

ಇದನ್ನೂ ಓದಿ: ನೀವು ಕೊವಿಡ್​ನಿಂದ ಈಗಷ್ಟೇ ಚೇತರಿಸಿಕೊಂಡಿದ್ದೀರಾ? ದೀರ್ಘಕಾಲ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಭಾರತದ ಟಾಪ್ ವೈದ್ಯರು

ಕೊವಿಡ್ ವಾರ್​ರೂಂನಲ್ಲಿ ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಗೆ ಸ್ವತಃ ಬೆಡ್ ವ್ಯವಸ್ಥೆ ಮಾಡಿದ ಸಿಎಂ ಯಡಿಯೂರಪ್ಪ
(Bharat Biotech submitted 90 percent documents to WHO to get emergency approval)